ಆಂಧ್ರಪ್ರದೇಶ:ಶಾಲೆ ಎಂಬುದು ದೇವಸ್ಥಾನದಂತೆ, ಪವಿತ್ರ ಸ್ಥಳ. ಅಲ್ಲೊಂದು ಶಿಸ್ತು-ಸಂಯಮ ಇರಲೇಬೇಕಾಗುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕ ಮಾಡಬಾರದ್ದನ್ನೆಲ್ಲ ಶಾಲೆಯಲ್ಲೇ ಮಾಡಿ ಕೊನೆಗೂ ಅಮಾನತುಗೊಂಡಿದ್ದಾನೆ.
ಕಳೆದ ಕೆಲವು ದಿನಗಳಿಂದ ಈತ ಶಾಲೆಯಲ್ಲಿ ದುರ್ವರ್ತನೆ ತೋರುತ್ತಿದ್ದು, ಕೊನೆಗೆ ಮಕ್ಕಳ ಪಾಲಕರೊಬ್ಬರು ಮಾಡಿದ ವಿಡಿಯೋ ವೈರಲ್​ ಆಗಿ ಸಿಕ್ಕಿಬಿದ್ದಿದ್ದು, ಶಿಕ್ಷಣ ಇಲಾಖೆ ಈತನನ್ನು ಅಮಾನತುಗೊಳಿಸಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಶಿಕ್ಷಕ ಕೆ. ಕೋಟೇಶ್ವರ ರಾವ್ ಸಸ್ಪಂಡ್​ ಆಗಿರುವ ಶಿಕ್ಷಕ. ಪಲಕಮಂಡಲ್​ನ ಕೃಷ್ಣಪುರಂ ಎಂಬಲ್ಲಿರುವ ಮಂಡಲ್ ಪರಿಷದ್​ ಪ್ರಾಥಮಿಕ ಶಾಲೆಯಲ್ಲಿ ಈತ ಶಿಕ್ಷಕನಾಗಿದ್ದ.
ಇದನ್ನೂ ಓದಿ:ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌
ಶಾಲೆಯಲ್ಲಿ ಮಕ್ಕಳ ಮುಂದೆಯೇ ನಿತ್ಯ ಮದ್ಯಪಾನ ಮಾಡುತ್ತಿದ್ದ ಈತ, ಶಾಲೆಯ ಶೌಚಗೃಹದಲ್ಲಿ ಮದ್ಯವನ್ನು ಸಂಗ್ರಹಿಸಿಟ್ಟು, ಆಗಾಗ ಕುಡಿಯುತ್ತಿದ್ದ. ಶಿಕ್ಷಕನ ಈ ದುರ್ವರ್ತನೆಯಿಂದ ಬೇಸತ್ತಿದ್ದ ಮಕ್ಕಳು ತಮ್ಮ ಪಾಲಕರಿಗೆ ವಿಷಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬನ ಪಾಲಕರು ಶಾಲೆಗೆ ಬಂದು ವಿಚಾರಿಸುವಾಗಲೂ ಈತ ಶಾಲೆಯಲ್ಲಿ ಕುಡಿಯುತ್ತಿದ್ದ. ವಿಡಿಯೋ ಮಾಡಿದರೂ ಲೆಕ್ಕಿಸದ ಈತ ಆಕೆಯ ಮುಂದೆಯೇ ವಿವಸ್ತ್ರನಾಗುವುದಾಗಿ ಹೇಳಿದ್ದ. ಆಗ ಆಕೆ ಶಿಕ್ಷಕನ ವಿರುದ್ಧ ಧ್ವನಿ ಎತ್ತುವಂತೆ ಮಕ್ಕಳಿಗೆ ಹೇಳಿದಾಗ, ಆತ ಒಬ್ಬ ವಿದ್ಯಾರ್ಥಿಗೆ ಬಟ್ಟೆ ಬಿಚ್ಚುವ ಶಿಕ್ಷೆ ವಿಧಿಸಿದ್ದ. ಶಿಕ್ಷಕ ಕುಡಿದ ಬಳಿಕ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬುದಾಗಿ ಮಕ್ಕಳು ಆರೋಪಿಸಿದ್ದು, ಈ ವಿಡಿಯೋ ವೈರಲ್​ ಆದ ಹಿನ್ನೆಲೆಯಲ್ಲಿ ಆತನನ್ನು ಅಮಾನತುಗೊಳಿಸಲಾಗಿದೆ.
ಯೂಟ್ಯೂಬ್​ ಲೈವ್​ನಲ್ಲೇ ಮಹಿಳೆ ಮೇಲೆ ಅತ್ಯಾಚಾರ: ವೈರಲ್​ ಆಯ್ತು ಬೆಚ್ಚಿಬೀಳಿಸೋ ದೃಶ್ಯ!

ಹನಿಮೂನ್​ಗೆ ಮಗಳನ್ನೂ ಜೊತೆಗೆ ಕರೆದುಕೊಂಡು ಹೋದ ಬಾಲಿವುಡ್ ನಟಿ ದಿಯಾ ಮಿರ್ಜಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
