ವಿಜಯಪುರ:ಕಳ್ಳನೊಬ್ಬ ಒಮ್ಮಿಂದೊಮ್ಮೆಲೆ ಕಾರಿನಿಂದ ಇಳಿದು ಮುಖಕ್ಕೆ ಮಾಸ್ಕ್‌ ಹಾಕಿ, ಕೈಯಲ್ಲಿ ಚಾಕು ಹಿಡಿದುಕೊಂಡು ಟೋಲ್‌ಗೇಟ್‌ ಸಿಬ್ಬಂದಿಯನ್ನು ಹೆದರಿಸಿ ಪರಾರಿಯಾದ ಘಟನೆ ಇಲ್ಲಿನ ಕಸಬಾ ಟೋಲ್‌ಗೇಟ್‌ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಇಳಕಲ್‌ನಿಂದ ಕಾರ್‌ನಲ್ಲಿ ಬಂದಿದ್ದ ಕಳ್ಳನನ್ನು ಸೆರೆ ಹಿಡಿಯಲು ಅಲ್ಲಿನ ಪೊಲೀಸರು ಟೋಲ್‌ಗೇಟ್‌ ಸಿಬ್ಬಂದಿಗೆ ಸಂದೇಶ ರವಾನಿಸಿದ್ದರು. ಅದರಂತೆ ಬೆಳಗ್ಗೆ ಸ್ಯಾಂಟ್ರೋ ಕಾರಿನಲ್ಲಿ ಬಂದ ಕಳ್ಳನನ್ನು ಹಿಡಿಯಲು ಟೋಲ್‌ಗೇಟ್‌ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಟೋಲ್‌ಗೇಟ್ ಬಳಿ ಬಂದ ಕಾರನ್ನು ತಡೆದ ಟೋಲ್ ಗೇಟ್ ಸಿಬ್ಬಂದಿಗೆ ಹೆದರಿಸಲು ಮುಂದಾದ ಕಳ್ಳ, ಕಾರಿನಿಂದ ಚಾಕು ಸಮೇತ ಇಳಿದಿದ್ದಾನೆ. ಮುಖಕ್ಕೆ ಮಾಸ್ಕ್‌ ಹಾಕಿ ಚಾಕು ಹಿಡಿದು ಬಂದ ಕಳ್ಳನನ್ನು ಹಿಡಿಯಲು ಟೋಲ್​ ಗೇಟ್​ ಸಿಬ್ಬಂದಿ ಮುಂದಾಗುತ್ತಿದ್ದಂತೆ ಕಳ್ಳ ಕಾಲ್ಕಿತ್ತಿದ್ದಾನೆ. ಆತನನ್ನು ಬರೋಬ್ಬರಿ ನಾಲ್ಕು ಕಿಮೀ ತನಕ ಬೆನ್ನಟ್ಟಿದ್ದರೂ ಕಳ್ಳ ಓಡಿ ಪರಾರಿಯಾಗಿದ್ದಾನೆ.
ಕಾರನ್ನು ಸ್ಥಳದಲ್ಲಿಯೇ ಬಿಟ್ಟಿದ್ದು ಕಳ್ಳತನ ಗೈದಿದ್ದ ಬ್ಯಾಗ್, ಚಾಕು, ಕತ್ತರಿ ಪತ್ತೆಯಾಗಿದೆ. ಬ್ಯಾಗಿನಲ್ಲಿ ಕದ್ದ ಬಂಗಾರ, ಬೆಳ್ಳಿ ಇರುವ ಶಂಕೆ ಇದ್ದು, ಕಾರ್‌ ಕೂಡ ಕಳ್ಳತನದ್ದಾ ಅಥವಾ ಸ್ವಂತದ್ದಾ ಎಂಬುದು ಇನ್ನೂ ಗೊತ್ತಾಗಿಲ್ಲ. ಗ್ರಾಮೀಣ ಠಾಣೆ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
