ಬೆಂಗಳೂರು:ಕಳೆದ ನಾಲ್ಕು ತಿಂಗಳ ಹಿಂದೆ ಯಲಹಂಕದ ಕಿಯಾ ಶೋರೂಂನ ಸೆಕ್ಯೂರಿಟಿಗಾರ್ಡ್‌ಗೆ ಮಾರಕಾಸ್ತ್ರ ತೋರಿಸಿ ಸಿನಿಮೀಯ ಶೈಲಿಯಲ್ಲಿ 2 ಕಿಯಾ ಕಾರುಗಳನ್ನು ಕದ್ದ ಲಿಬಿಯಾ ಹಾಗೂ ನೈಜೀರಿಯಾ ದೇಶದ ಇಬ್ಬರು ಪ್ರಜೆಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಅವರಿಂದ 65 ಲಕ್ಷ ರೂ. ಬೆಲೆ ಬಾಳುವ 3 ಕಾರು ಹಾಗೂ 3 ಬೈಕ್‌ನ್ನು ಜಪ್ತಿ ಮಾಡಲಾಗಿದೆ.
ಲಿಬಿಯಾ ಮೂಲದ ಸಂಪಿಗೆಹಳ್ಳಿ ನಿವಾಸಿ ಸಫಿ ಇಡನ್ ಗುಮಾ ಟಹೆರ್ ಬೆನ್ ಹಮೈದ್ (27), ನೈಜೀರಿಯಾ ಮೂಲದ ಜಾನ್ ನೆರೋ (25) ಬಂಧಿತರು. ಆರೋಪಿಗಳಿಂದ 1 ಫಾರ್ಚುನರ್ ಕಾರು, ಕಿಯಾ ಕಂಪನಿಯ 2 ಸೆಲ್‌ಟಾಸ್ ಕಾರುಗಳು, 3 ಬೈಕ್‌ನ್ನು ಜಪ್ತಿ ಮಾಡಲಾಗಿದೆ.
ಫೆ.24ರಂದು ಮುಂಜಾನೆ 5 ಗಂಟೆಗೆ ಯಲಹಂಕ ಬಿಬಿ ಮುಖ್ಯರಸ್ತೆಯ ಕಿಯಾ ಷೋರೂಂಗೆ ಬಂದಿದ್ದ ಆರೋಪಿಗಳು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಇಸ್ರೇಲ್ ಬಳಿ ಕುಡಿಯಲು ನೀರು ಕೊಡುವಂತೆ ಕೇಳಿದ್ದರು. ಇಸ್ರೇಲ್ ಒಬ್ಬನೇ ಇರುವುದನ್ನು ಖಚಿತಪಡಿಸಿಕೊಂಡು ಆತನಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೈಗಳಿಂದ ಹಲ್ಲೆ ನಡೆಸಿದ್ದರು. ಇಸ್ರೇಲ್ ಬಳಿಯಿದ್ದ ಶೋರೂಂನ ಗೇಟಿನ ಕೀಯನ್ನು ಕಸಿದುಕೊಂದು ಶೋ ರೂಂ ಒಳಗೆ ಪ್ರವೇಶಿಸಿ 2 ಸೆಲ್‌ಟಾಸ್ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶೋರೂಂಗೆ ಬಂದ ಪೊಲೀಸರು ಅಲ್ಲಿನ ಸಿಸಿಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ಮುಖ ಚಹರೆಯಲ್ಲಿ ಆರೋಪಿಗಳು ನೈಜಿರಿಯಾ ಮೂಲದವರಂತೆ ಹೋಲುತ್ತಿದ್ದರು. ಇದರ ಜಾಡು ಹಿಡಿದು ಹೊರ ಪೊಲೀಸರು ಬೆಂಗಳೂರು, ಭೂಪಾಲ್, ಮುಂಬೈ, ಹಿಂದೂಪುರ್, ಧಾರವಾಢ, ಬಿದರ್, ಕಲ್ಬುರ್ಗಿ ಸೇರಿ ಹಲವು ನಗರಗಳಲ್ಲಿ ನೈಜೀರಿಯಾ ಪ್ರಜೆಗಳು ವಾಸಿಸುತ್ತಿರುವ ಪ್ರದೇಶಗಳಲ್ಲಿ ಪರಿಶೀಲಿಸಿದ್ದರು. ಸಿಸಿಕ್ಯಾಮರಾದಲ್ಲಿ ಸೆರೆಯಾದ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಬ್ಬರ ಪೈಕಿ ಓರ್ವ ಲಿಬಿಯಾ ಮೂಲದವನಂತೆ ಹೋಲುತ್ತಿದ್ದ. ಈ ಆಧಾರದ ಮೇಲೆ ತಾಂತ್ರಿಕ ಕಾರ್ಯಾಚರಣೆ ನಡೆಸಿ ಸಂಪಿಗೆಹಳ್ಳಿಯಲ್ಲಿ ವಾಸಿಸುತ್ತಿರುವುದನ್ನು ಪತ್ತೆಹಚ್ಚಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಕಿಯಾ ಶೋರೂಂನಲ್ಲಿ ಕಳ್ಳತನ ಮಾಡಿದ್ದ 1 ಕಾರನ್ನು 7 ಲಕ್ಷ ರೂ. ಹಾಗೂ ಮತ್ತೊಂದು ಕಾರನ್ನು5 ಲಕ್ಷ ರೂ.ಗೆ ನೈಜೀರಿಯಾ ಮೂಲದವರಿಗೆ ಮಾರಾಟ ಮಾಡಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ.
ಅಕ್ರಮವಾಗಿ ನೆಲೆಸಿದ್ದ ಆರೋಪಿಗಳು:ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿಗಳ ಪೈಕಿ ಓರ್ವ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣ ವಿಭಾಗದಲ್ಲಿ ಎಂಎ ರಾಜ್ಯಶಾಸ್ತ್ರ ಹಾಗೂ ಮತ್ತೊಬ್ಬ ಬಿಇ ಎಲೆಕ್ಟ್ರಿಕಲ್ ವ್ಯಾಸಂಗ ಮಾಡುತ್ತಿದ್ದ. ಅರ್ಧದಲ್ಲೆ ಶಿಕ್ಷಣ ಮೊಟಕುಗೊಳಿಸಿ ನಗರಕ್ಕೆ ಬಂದಿದ್ದರು. ಕುಡಿತ ಹಾಗೂ ಮಾದಕ ವ್ಯಸನಿಗಳಾಗಿದ್ದರು. ನಗರದ ವಿವಿಧೆಡೆ ಕಾರು, ಬೈಕ್‌ಗಳನ್ನು ಕದ್ದು ನೈಜಿರಿಯಾ ಮೂಲದವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಳೆದ 4 ವರ್ಷಗಳ ಹಿಂದೆ ಕೆಜಿ ಹಳ್ಳಿ ಪೊಲೀಸರು ಕಳ್ಳತನ ಕೇಸ್‌ನಲ್ಲಿ ಇವರನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಹೊರ ಬಂದು ಮತ್ತೆ ಹಳೆ ಚಾಳಿ ಮುಂದುವರೆಸಿದ್ದರು. 4 ವರ್ಷಗಳಿಂದ ವೀಸಾ ಅವಧಿ ಮುಕ್ತಾಯಗೊಂಡರೂ ಅಕ್ರಮವಾಗಿ ನೆಲೆಸಿರುವುದು ಪೊಲೀಸ್ ತನಿಖೆಯಲ್ಲಿ ಕಂಡು ಬಂದಿದೆ.
ಫಾರ್ಚುನರ್ ಕಾರು ಕಳ್ಳತನ:2019ರಲ್ಲಿ ಯಲಹಂಕದ ಶೋರೂಂವೊಂದರಲ್ಲಿ ಸೆಕ್ಯೂರಿಟಿಗಾರ್ಡ್‌ಗಳು ನಿದ್ದೆಗೆ ಜಾರಿದ ವೇಳೆ ಅವರ ಜೇಬಿನಲ್ಲಿದ್ದ ಶೋರೂಂ ಕೀ ತೆಗೆದುಕೊಂಡು ಫಾರ್ಚುನರ್ ಕಾರು ಕಳ್ಳತನ ಮಾಡಿದ್ದರು. ಅದರಲ್ಲೇ ತಮಿಳುನಾಡಿಗೆ ಪರಾರಿಯಾಗಿದ್ದರು. ಮಾರ್ಗ ಮಧ್ಯೆ ಪೊಲೀಸ್ ಬ್ಯಾರಿಕೇಡ್‌ಗೆ ಗುದ್ದಿದ್ದರು. ಈ ಸಂಬಂಧ ತಮಿಳುನಾಡಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಂದಮ್ಮನ ಗಂಟಲಲ್ಲಿ ಬೀಜವಿದೆ ಚಿಕಿತ್ಸೆ ಕೊಡಿ ಎಂದು ಗೋಗರೆದರೂ ಚಿಕಿತ್ಸೆ ಕೊಡದ ಆಸ್ಪತ್ರೆ! ಕರೊನಾ ರಿಪೋರ್ಟ್​ನಿಂದಾಗಿ ಮಗಳ ಪ್ರಾಣವೇ ಬಲಿ!

ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 3 =
Remember me
