ಬೆಂಗಳೂರು:ರಾಜ್ಯ ಸರ್ಕಾರಿ ನೌಕರರ ಎರಡು ಪ್ರಮುಖ ಬೇಡಿಕೆಗಳ ಬಗ್ಗೆ ರ್ಚಚಿಸಲು ವೇದಿಕೆ ಸಜ್ಜಾಗಿದೆ. ಏಳನೇ ವೇತನ ಆಯೋಗದ ವರದಿ ಅನುಷ್ಠಾನ ವಿಷಯ ಅಜೆಂಡಾದಲ್ಲಿ ಸೇರ್ಪಡೆಯಾಗಿದ್ದರೆ, ಎನ್​ಪಿಎಸ್ ರದ್ದಿಗೆ ಸಂಬಂಧಿಸಿದಂತೆ ಸಂಪುಟದ ಮುಂದೆ ಕಡತ ಮಂಡಿಸಲು ಸಿಎಂ ಸಿದ್ದರಾಮಯ್ಯ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ಸಂಜೆ ನಡೆಯುವ ಸಚಿವ ಸಂಪುಟ ಸಭೆಯ ಮುಖ್ಯ ಕಾರ್ಯಸೂಚಿಯಲ್ಲಿ 20 ವಿಷಯಗಳಿದ್ದು, ಅವುಗಳಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ಸಹ ಸೇರ್ಪಡೆಯಾಗಿದೆ. ವೇತನ ಹೆಚ್ಚಳವನ್ನು ಆಗಸ್ಟ್ ಒಂದರಿಂದ ಜಾರಿಗೆ ತರಲು ಸರ್ಕಾರ ತೀರ್ವನಿಸಿದೆ. ಅದಕ್ಕೆ ಅಗತ್ಯವಾದ ಹಣಕಾಸನ್ನೂ ಆಯವ್ಯಯದಲ್ಲಿ ತೆಗೆದಿರಿಸಿದೆ. ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಿಂದಿನ ಸಂಪುಟ ಸಭೆಯಲ್ಲಿ ಸಿಎಂಗೆ ಅಧಿಕಾರ ನೀಡಲಾಗಿತ್ತು. ಮತ್ತೆ ಸಂಪುಟದ ಮುಂದೆ ವಿಷಯ ತರುವ ಅಗತ್ಯವಿಲ್ಲ. ಆದರೂ ಸಂಪುಟ ಸದಸ್ಯರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಮಂಡಿಸಲಾಗುತ್ತಿದೆ.
ನೌಕರರ ಹಾಗೂ ನಿವೃತ್ತರ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆಗೆ 17 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ವೇತನ ಆಯೋಗ ಶೇ.27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದೆ. ಅದರಲ್ಲಿ ಈಗಾಗಲೆ ಶೇ.17 ಮಧ್ಯಂತರ ಪರಿಹಾರ ನೀಡಲಾಗಿದೆ. ಉಳಿದ ಶೇ.10.5 ನೀಡಬೇಕಾಗಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬಜೆಟ್​ನಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈ ಹಣಕಾಸು ವರ್ಷದಲ್ಲಿ ಈಗಾಗಲೇ 4 ತಿಂಗಳು ಮುಗಿದಿರುವುದರಿಂದ 14 ಸಾವಿರ ಕೋಟಿ ರೂ.ಗಳು ಸಾಕಾಗುತ್ತವೆ ಎಂದು ಹೇಳಲಾಗುತ್ತಿದೆ. ವೇತನ ಪರಿಷ್ಕರಣೆ ಮಾತ್ರವೇ ಅಥವಾ ಯಾವ ಯಾವ ಭತ್ಯೆ ಪರಿಷ್ಕರಣೆ ಆಗಲಿವೆ ಎಂಬುದು ಸಂಪುಟ ಸಭೆಯ ನಂತರವೇ ತಿಳಿಯಲಿದೆ.
ಎನ್​ಪಿಎಸ್ ಕಡತ ಮಂಡನೆಗೆ ಸೂಚನೆ:ಎನ್​ಪಿಎಸ್ ನೌಕರರ ಸಂಘ ಸರ್ಕಾರದ ಮೇಲೆ ನಿರಂತರ ಒತ್ತಡ ತಂದ ಪ್ರಯತ್ನದ ಫಲವಾಗಿ ಈ ಬಗ್ಗೆ ಸಂಪುಟದ ಮುಂದೆ ಎನ್​ಪಿಎಸ್ ರದ್ದು ಕಡತ ಮಂಡಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. 2.78 ಲಕ್ಷ ಎನ್​ಪಿಎಸ್ ನೌಕರರಿದ್ದು, ಯೋಜನೆ ರದ್ದು ಮಾಡುವುದರಿಂದ ಸರ್ಕಾರಕ್ಕೆ ಯಾವುದೇ ಹೊರೆ ಇಲ್ಲ, ಅದರ ಬದಲಾಗಿ ಉಳಿತಾಯವಾಗಲಿದೆ ಎಂಬ ಅಂಶವನ್ನು ಸಂಘದ ಅಧ್ಯಕ್ಷ ಶಾಂತರಾಮ ಹಾಗೂ ಪದಾಧಿಕಾರಿಗಳು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಪಿಎಫ್​ಆರ್​ಡಿಎಯಲ್ಲಿ ಸದಸ್ಯರಾಗಿರುವ ರಾಜ್ಯದ ಹಣಕಾಸು ಇಲಾಖೆಯ ಕಾರ್ಯದರ್ಶಿಯೊಬ್ಬರು ಮಾತ್ರ ಎನ್​ಪಿಎಸ್ ರದ್ದು ಬೇಡವೆಂದು ಅಪಸ್ವರ ತೆಗೆದಿದ್ದಾರೆ ಎನ್ನಲಾಗಿದೆ.
ಹೈಬ್ರಿಡ್ ಅಥವಾ ಒಪಿಎಸ್:ಎನ್​ಪಿಎಸ್ ರದ್ದಾದರೂ ಆಂಧ್ರಪ್ರದೇಶ ತರಲು ಮುಂದಾಗಿದ್ದ ಹೈಬ್ರಿಡ್ ವ್ಯವಸ್ಥೆ ತರುತ್ತಾರೆ ಎಂಬ ಚರ್ಚೆ ನೌಕರರ ನಡುವೆ ನಡೆದಿದೆ. ಪಿಎಫ್​ಆರ್​ಡಿಎ ಪ್ರಕಾರ ಎನ್​ಪಿಎಸ್ ಅಥವಾ ಒಪಿಎಸ್ ಹೊರತು ಬೇರೆ ವ್ಯವಸ್ಥೆ ತರಲು ಸಾಧ್ಯವಿಲ್ಲ. ಹೈಬ್ರಿಡ್ ಎಂದರೆ ಕನಿಷ್ಠ ಪಿಂಚಣಿ ಗ್ಯಾರಂಟಿ ನೀಡುವುದು, ಅದಕ್ಕೆ 33 ವರ್ಷ ಸೇವೆ ಕಡ್ಡಾಯ ಎಂಬುದಾಗಿದೆ. ಆದರೆ ಅಂತಹ ಯಾವುದೇ ವ್ಯವಸ್ಥೆ ತರಲು ಸರ್ಕಾರದಲ್ಲಿ ಚರ್ಚೆ ನಡೆದಿಲ್ಲ. ಆಂಧ್ರಪ್ರದೇಶದಲ್ಲಿ ಈಗ ಹೈಬ್ರಿಡ್ ವ್ಯವಸ್ಥೆ ಬಗ್ಗೆ ಚರ್ಚೆ ಕೈಬಿಡಲಾಗಿದೆ.
21 ಸಾವಿರ ಕೋಟಿ ಲಭ್ಯ :ಸರ್ಕಾರ ತನ್ನ ನೌಕರರಿಗೆ 33 ವರ್ಷ ವಂತಿಕೆ ಪಾವತಿಸುತ್ತದೆ. ನಿವೃತ್ತಿ ನಂತರ ನೌಕರರ ಜೀವಿತಾವಧಿ ಸರಾಸರಿ 15 ವರ್ಷ ಆಗಿರುತ್ತದೆ. ಸರ್ಕಾರಕ್ಕೆ ಇದೊಂದು ರೀತಿಯ ಹೊರೆಯಾಗಿರುತ್ತದೆ. ಇದೇ ಆಧಾರದಲ್ಲಿಯೇ ಛತ್ತೀಸ್​ಘಡ ರದ್ದು ಮಾಡಿದೆ. ಈಗ ಸರ್ಕಾರದ ವಂತಿಕೆ 12 ಸಾವಿರ ಕೋಟಿ ರೂ.ಗಳು ಹಾಗೂ ನೌಕರರ ಬಾಬ್ತು 9 ಸಾವಿರ ಕೋಟಿ ರೂ.ಗಳು ಇದೆ. ಎನ್​ಪಿಎಸ್ ರದ್ದು ಮಾಡಿ ವಾಪಾಸ್ ಪಡೆದರೆ 21 ಸಾವಿರ ಕೋಟಿ ರೂ.ಗಳು ಲಭ್ಯವಾಗಲಿದೆ. ಎನ್​ಪಿಎಸ್ ತಕ್ಷಣ ರದ್ದು ಮಾಡಿದರೂ ನೌಕರರ ನಿವೃತ್ತಿಯ ಕೊನೆಯಲ್ಲಿ ಸರ್ಕಾರದ ಮೇಲೆ ಹೊರೆಯಾಗುತ್ತದೆ ಎಂಬ ಅಭಿಪ್ರಾಯ ಇದೆ. ಆದರೆ ಆ ರೀತಿಯ ಹೊರೆ ಬರುವುದಿಲ್ಲವೆಂಬ ವಿವರಗಳನ್ನು ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಒದಗಿಸಿದ್ದಾರೆ.
ಎನ್​ಪಿಎಸ್ ರದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಂಪುಟದ ಮುಂದೆ ಕಡತ ಮಂಡನೆಗೆ ಸೂಚನೆ ನೀಡಿದ್ದಾರೆ. ಎನ್​ಪಿಎಸ್ ರದ್ದಾಗುತ್ತದೆ ಎಂಬ ವಿಶ್ವಾಶವಿದೆ.
| ಶಾಂತರಾಮ ಅಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ
ಕಳೆದ 3-4 ವರ್ಷಗಳಲ್ಲಿ 8 ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗಿವೆ: ಪ್ರಧಾನಿ ಮೋದಿ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nine + twenty =
Remember me
