ದಾವಣಗೆರೆ (ಮಲೇಬೆನ್ನೂರು):ಮಹಾರಾಷ್ಟ್ರದಿಂದ ಕರೆತಂದವರನ್ನು ನಮ್ಮೂರಲ್ಲಿ ಕ್ವಾರಂಟೈನ್​ ಮಾಡಲು ಬಿಡಲ್ಲ ಎಂದು ಹರಿಹರ ತಾಲೂಕಿನ ನಂದಿಗುಡಿ ಮತ್ತು ವಾಸನ ಗ್ರಾಮಸ್ಥರು ಗುರುವಾರ ಬೆಳಗ್ಗೆಯಿಂದ ಸಂಜೆವರೆಗೂ ಬಸ್​ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಬೆಳಗ್ಗೆ 11ರ ಸುಮಾರಿಗೆ ಹರಿಹರ ತಾಲೂಕಿಗೆ ಮಹಾರಾಷ್ಟ್ರದಿಂದ 13 ಜನರು ಬಸ್​ನಲ್ಲಿ ಬಂದಿದ್ದರು. ಅವರಿಗೆ ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 14 ದಿನ ಕ್ವಾರಂಟೈನ್​ ಮಾಡಲು ವ್ಯವಸ್ಥೆಯಾಗಿತ್ತು. ಇದಕ್ಕೆ ವಿರೋಧಿಸಿದ ನಂದಿಗುಡಿ ಮತ್ತು ವಾಸನ ಗ್ರಾಮಸ್ಥರು, ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಮುಂಬೈ ನಂಟು. ಹಾಗಾಗಿ ಅಲ್ಲಿಂದ ಬಂದವರನ್ನು ನಮ್ಮೂರಲ್ಲಿ ಕ್ವಾರಂಟೈನ್​ ಮಾಡಬಾರದು. ಅವರನ್ನು ಬೇರೆಡೆಗೆ ಕರೆದೊಯ್ಯಬೇಕು ಎಂದು ಬಸ್​ ತಡೆದು ನೂರಾರು ಮಂದಿ ಧರಣಿ ಕುಳಿತರು. ಬಸ್​ನಲ್ಲಿದ್ದ ಕಾರ್ಮಿಕರನ್ನು ಕೆಳಗೆ ಇಳಿಯಲೂ ಬಿಡಲಿಲ್ಲ.
ಇದನ್ನೂ ಓದಿರಿ109 ವರ್ಷದ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
ಸ್ಥಳಕ್ಕೆ ಬಂದ ತಹಸೀಲ್ದಾರ್​ ರಾಮಚಂದ್ರ ಮತ್ತು ಸಿಪಿಐ ಶಿವಪ್ರಸಾದ್​, ಈಗ ಕ್ವಾರಂಟೈನ್​ಗೆಂದು ಬಂದಿರುವ 14 ಜನರೂ ಹರಿಹರ ತಾಲೂಕಿನವರೆ. ಉದ್ಯೋಗ ಅರಸಿ ನಿಪ್ಪಾಣಿ ಮತ್ತು ಮಹಾರಾಷ್ಟ್ರಕ್ಕೆ ತೆರಳಿದ್ದರು. ಈಗ ವಾಪಸ್​ ಬಂದಿದ್ದಾರೆ. ಪ್ರತಿಭಟನೆ ಬಿಟ್ಟು ಕ್ವಾರಂಟೈನ್​ಗೆ ಸಹಕರಿಸಿ ಎಂದು ಮನವಿ ಮಾಡಿದರೂ ಗ್ರಾಮಸ್ಥರು ಒಪ್ಪಲಿಲ್ಲ.
ಸಂಜೆ 4ರ ವರೆಗೂ ಗ್ರಾಮಸ್ಥರ ಮನವೊಲಿಸಲು ನಡೆಸಿದ ಯತ್ನ ವಿಫಲವಾಯಿತು. ಕೊನೆಗೆ ಸಿಪಿಐ ಶಿವಪ್ರಸಾದ್​ ನೇತೃತ್ವದ ತಂಡ ಗ್ರಾಮಸ್ಥರನ್ನು ಚದುರಿಸಿ ಪೊಲೀಸ್​ ಬಂದೋಬಸ್ತ್ ಮೂಲಕ 5 ತಾಸುಗಳ ಬಳಿಕ ಕ್ವಾರಂಟೈನ್​ ಕೇಂದ್ರಕ್ಕೆ ಕಾರ್ಮಿಕರನ್ನು ಸೇರಿಸಿತು. ಇದಾದ ಬಳಿಕವೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಇದನ್ನೂ ಓದಿರಿ32 ವರ್ಷದವರೂ ಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು, ನೇಮಕಾತಿಗೆ ವಯೋಮಿತಿ ಹೆಚ್ಚಳ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + eleven =
Remember me
