ಚಿತ್ರದುರ್ಗ:ಪದೇಪದೆ ಭಯಬೀಳುತ್ತಿದ್ದ 2 ವರ್ಷದ ಪುಟ್ಟ ಹೆಣ್ಣುಮಗು ಮೂಢನಂಬಿಕೆಗೆ ಬಲಿಯಾದ ದುರ್ಘಟನೆ ಹೊಳಲ್ಕೆರೆ ತಾಲೂಕಿನ ಅಜ್ಜಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳಾದ ಪ್ರವೀಣ್​-ಬೇಬಿ ದಂಪತಿಯ 2 ವರ್ಷದ ಮಗಳು ಪೂರ್ಣಿಕಾ ಇತ್ತೀಚೆಗೆ ಪದೇಪದೆ ಭಯಬೀಳುತ್ತಿದ್ದಳು. ಮಗಳು ಬೆಚ್ಚಿಬೀಳುತ್ತಿದ್ದುದನ್ನು ನೋಡಿದ ತಂದೆ-ತಾಯಿ, ಪರಿಹಾರ ಕೇಳಲು ಮಗುವನ್ನು ಮಾಟಗಾರ ರಾಕೇಶ್ ಎಂಬುವನ ಬಳಿ ಕರೆದುಕೊಂಡು ಹೋಗಿದ್ದರು.ಈ ರಾಕ್ಷಸ ಮಗುವಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆ, ದೆವ್ವ ಹಿಡಿದಿದೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ, ತಂದೆ-ತಾಯಿಯನ್ನು ಹೊರಗೆ ಕಳಿಸಿ, ದೆವ್ವ ಬಿಡಿಸುವ ನೆಪದಲ್ಲಿ ಅಷ್ಟು ಚಿಕ್ಕ ಮಗುವಿಗೆ ಬೆತ್ತದಿಂದ ಮನಸೋಇಚ್ಛೆ ಬಾರಿಸಿದ್ದಾನೆ.ಇದನ್ನೂ ಓದಿ:‘ಮತ್ತೊಮ್ಮೆ ಲಾಕ್​ಡೌನ್​ ಹೇರುವ ಅನಿವಾರ್ಯತೆ ಎದುರಾಗುತ್ತಿದೆ…ನಮಗೂ ಬೇರೆ ಆಯ್ಕೆ ಇಲ್ಲ’
ಪದೇಪದೆ ಗಾಬರಿ ಆಗುತ್ತಿದ್ದ ಮಗು ಪೂರ್ಣಿಕಾ ಬಗ್ಗೆ ಪರಿಹಾರ ಕೇಳಲು ಮಾಟಗಾರನ ಬಳಿ ಹೋದಾಗ ಮಗುವಿನ ಮೈಯಲ್ಲಿ ದೆವ್ವ ಇದೆ ಬಿಡಿಸಬೇಕು ಎಂದು ಹೇಳಿದ್ದಾನೆ. ಇದನ್ನು ನಂಬಿದ ದಂಪತಿ ದೆವ್ವ ಬಿಡಿಸುವಂತೆ ಕೇಳಿಕೊಂಡಾಗ ಅವರಿಬ್ಬರನ್ನೂ ಹೊರಗೆ ಕಳುಹಿಸಿ ಬೆತ್ತ ತೆಗೆದುಕೊಂಡು ಮಗುವಿಗೆ ಮನಸೋ ಇಚ್ಛೆ ಬಾರಿಸಿದ್ದಾನೆ. ರಾಕೇಶ್​​ನ ಹೊಡೆತಕ್ಕೆ ತತ್ತರಿಸಿದ ಮಗು ಅಲ್ಲಿಯೇ ಪ್ರಾಣಬಿಟ್ಟಿದೆ. ಮಗು ಎಚ್ಚರವಿಲ್ಲದೆ ಬೀಳುತ್ತಿದ್ದಂತೆ, ಪಾಲಕರನ್ನು ಒಳಗೆ ಕರೆದ ಮಾಟಗಾರ, ಮಗು ಪ್ರಜ್ಞೆತಪ್ಪಿ ಬಿದ್ದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.ಅಜ್ಜಿಕ್ಯಾತನಹಳ್ಳಿ ನಿವಾಸಿ ಆಗಿರುವ ರಾಕೇಶ್​ಗೆ ಇನ್ನೂ 19 ವರ್ಷ. ಓದು, ವಿದ್ಯೆಯಿಲ್ಲದ ಈತ ತಾನೊಬ್ಬ ಯಲ್ಲಮ್ಮ ದೇವಿ ಆರಾಧಕ ಎಂದು ಹೇಳಿಕೊಂಡಿದ್ದ. ದೆವ್ವ, ಭೂತ, ಗಾಳಿ ಬಿಡಿಸುತ್ತೇನೆ ಎಂದು ಜನರನ್ನು ನಂಬಿಸಿದ್ದ. ಅಜ್ಜಿಕ್ಯಾತನಹಳ್ಳಿ ಸೇರಿ ಸುತ್ತಮುತ್ತಲಿನ ಹಲವು ಹಳ್ಳಿಯ ಜನರು ರಾಕೇಶ್​​ನನ್ನು ನಂಬಿದ್ದರು. ಈತ ಅದನ್ನೇ ಕಾಯಕ ಮಾಡಿಕೊಂಡು ಹಣ ಪೀಕುತ್ತಿದ್ದ.ಇದನ್ನೂ ಓದಿ:ಯಾರ ಲೈಫಲ್ಲಿ ಏರಿಳಿತ ಇರಲ್ಲ ಹೇಳಿ? ಮತ್ತೆ ಗಂಡನ ಜತೆಯಾದ ಪೂನಂ
ಈ ಹಿಂದೆ ಹಲವರಿಗೆ ಬೆತ್ತದಿಂದ ಹೊಡೆದಿದ್ದಾನೆ. ಯಾರಾದರೂ ಪರಿಹಾರ ಕೇಳಿಕೊಂಡು ಹೋದರೆ ಅವರನ್ನು ನಂಬಿಸಿ ಹೀಗೆ ಹೊಡೆಯುತ್ತಿದ್ದ. ನಂತರ ಸಮಸ್ಯೆ ಪರಿಹಾರವಾಗಿದೆ ಎಂದು ಹೇಳಿ ಹಣ ಪಡೆಯುತ್ತಿದ್ದ.ದಂಪತಿ ಮಗು ಪೂರ್ಣಿಕಾಳನ್ನು ಆಗಾಗ ರಾಕೇಶ್​ ಬಳಿ ಕರೆದುಕೊಂಡು ಹೋಗುತ್ತಿದ್ದರು. ಹಿಂದೆ ಕೂಡ ಮೂರು ಬಾರಿ ಅಲ್ಲಿಗೆ ಹೋಗಿದ್ದರು. ಈ ಬಾರಿ ಹೋಗಿದ್ದಾಗ ಎಕ್ಕೆಗಿಡದ ಬೆತ್ತದಿಂದ ಬಾರಿಸಿದ್ದಾನೆ. ಅವಳ ಮೈತುಂಬ ಬಾಸುಂಡೆ ಎದ್ದಿದೆ. ಪಾಲಕರು ನೀಡಿದ ದೂರಿನ ಅನ್ವಯ ಪೊಲೀಸರು ರಾಕೇಶ್​​ನನ್ನು ಬಂಧಿಸಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 13 =
Remember me
