| ಅರವಿಂದ ಅಕ್ಲಾಪುರ ಶಿವಮೊಗ್ಗ
ಒಕ್ಕಲೆಬ್ಬಿಸುವ ಭೀತಿಯಲ್ಲೇ ದಶಕಗಳಿಂದ ಜೀವನ ಸಾಗಿಸುತ್ತಿರುವ ಬಗರ್​ಹುಕುಂ ಸಾಗುವಳಿದಾರರ ಪಾಲಿಗೆ ಡಾ. ಕಸ್ತೂರಿ ರಂಗನ್ ಹೆಸರು ಕೇಳಿದರೆ ಚಳಿಗಾಲದಲ್ಲೂ ಬೆವರಿಡುವಂತಾಗಿದೆ! ಪಶ್ಚಿಮಘಟ್ಟ ಸಂರಕ್ಷಣೆ ಕುರಿತು 2013ರ ಏ.15ರಂದು ಡಾ. ಕಸ್ತೂರಿ ರಂಗನ್ ಅಧ್ಯಕ್ಷತೆಯ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ 175 ಪುಟಗಳ ಅಂತಿಮ ವರದಿ ಮಲೆನಾಡು ಭಾಗದಲ್ಲಿ ಆಗಾಗ್ಗೆ ಪ್ರತಿಧ್ವನಿಸಿ ನೆಮ್ಮದಿ ಕಲಕುತ್ತಿದೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ 6ನೇ ಬಾರಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ‘ತೋಳ ಬಂತು ತೋಳ’ ಎಂಬ ಕತೆಯಂತಾಗಿರುವ ಕಸ್ತೂರಿ ರಂಗನ್ ವರದಿಯನ್ನು ಮಲೆನಾಡಿನ ಜನರು ಭಯದಿಂದಲೇ ನೋಡುತ್ತಿದ್ದಾರೆ.
‘ಕಸ್ತೂರಿ ರಂಗನ್ ವರದಿ ಜಾರಿಯಾದರೆ ಕಾಡಂಚಿನಲ್ಲಿರುವ ಎಲ್ಲರನ್ನೂ ಒಕ್ಕಲೆಬ್ಬಿಸುತ್ತಾರೆ. ಕಾಡಿನಲ್ಲಿ ದನ ಮೇಯಿಸಲು ಬಿಡಲ್ಲ. ಜಮೀನಿಗೆ ಮಣ್ಣು ತೆಗೆಯುವಂತಿಲ್ಲ..’ ಇತ್ಯಾದಿ ತಪ್ಪುಮಾಹಿತಿ ನೀಡಿ ಆರಂಭದಿಂದಲೂ ಜನರನ್ನು ದಿಕ್ಕು ತಪ್ಪಿಸಲಾಗಿದೆ. 2014ರಲ್ಲಿ ಗ್ರಾಮ ಮಟ್ಟದಲ್ಲಿ ಜನಾಭಿಪ್ರಾಯ ಕೇಳಲು ಸಭೆಗಳನ್ನು ನಡೆಸಿದಾಗಲೂ ವರದಿಗೆ ವ್ಯಾಪಕ ವಿರೋಧ ವ್ಯಕ್ತವಾಗಲುಇಂಥ ವದಂತಿಗಳೇ ಕಾರಣ. ಕಡೇ ಪಕ್ಷ ಜನಪ್ರತಿನಿಧಿಗಳಿಗಾದರೂ ವರದಿ ಬಗ್ಗೆ ಸಮಗ್ರವಾಗಿ ತಿಳಿದಿದೆಯೇ ಅಂದರೆ ಅದೂ ಇಲ್ಲ.
ವರದಿ ಅಧ್ಯಯನ ಮಾಡಿ ಜನರಿಗೆ ಮನವರಿಕೆ ಮಾಡಿಕೊಡುವ ಆಸಕ್ತಿ ಅಧಿಕಾರಿಗಳಿಗಿಲ್ಲ. ಹೀಗಾಗಿ ಕಸ್ತೂರಿ ರಂಗನ್ ವರದಿ ವದಂತಿಗಳ ಭೂತದಂತಾಗಿದೆ. ವರದಿ ವಿಚಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು 2013ರಲ್ಲಿ ಬೇರು ಮಟ್ಟಕ್ಕಿಳಿದು ಕೆಲಸ ಮಾಡಲಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲವರು ತಮ್ಮ ಮೂಗಿನ ನೇರಕ್ಕೆ ಸಮಿತಿ ವರದಿ ವಿಶ್ಲೇಷಿಸಿ ಜನರಲ್ಲಿ ಭಯ ಮೂಡಿಸುತ್ತಿದ್ದಾರೆ.
ಇಪ್ಪತ್ತು ಅಂಶದ ಕರಪತ್ರ!: ಡಾ. ಕಸ್ತೂರಿ ರಂಗನ್ ಅಧ್ಯಕ್ಷತೆಯ ಸಮಿತಿ ಕೇಂದ್ರ ಸರ್ಕಾರಕ್ಕೆ ಪಶ್ಚಿಮಘಟ್ಟದ ಕುರಿತು ನೀಡಿದ್ದ 175 ಪುಟಗಳ ಅಂತಿಮ ವರದಿಯನ್ನು ಕೇವಲ 20 ಅಂಶಗಳಿಗೆ ಸೀಮಿತಗೊಳಿಸಿ ಜಿಲ್ಲಾಡಳಿತದಿಂದ 2014ರಲ್ಲಿ ಕರಪತ್ರದ ಮೂಲಕ ಹಂಚಲಾಯಿತು. ಅದರಲ್ಲಿ ಯಾವ ಅಂಶಗಳ ಬಗ್ಗೆಯೂ ವಿವರಗಳಿರಲಿಲ್ಲ. ಸಹಜವಾಗಿಯೇ ಇದು ಜನರ ಆತಂಕಕ್ಕೆ ಕಾರಣವಾಯಿತು.
ಶಿವಮೊಗ್ಗದ 475 ಗ್ರಾಮಗಳಲ್ಲಿ ಭಯ:ಶಿವಮೊಗ್ಗ ಜಿಲ್ಲೆಯ ಒಟ್ಟು 475 ಗ್ರಾಮಗಳನ್ನು ಪಶ್ಚಿಮಘಟ್ಟದ ವ್ಯಾಪ್ತಿಗೆ ಸೇರಿಸಲಾಗಿದೆ. ಸಾಗರ ತಾಲೂಕಿನಲ್ಲಿ ಅತೀ ಹೆಚ್ಚು 128 ಗ್ರಾಮ ಪಟ್ಟಿಗೆ ಸೇರಿವೆ. ಶಿಕಾರಿಪುರ ತಾಲೂಕಿನಲ್ಲಿ ಅತೀ ಕಡಿಮೆ 12 ಗ್ರಾಮ ಸೇರಿಸಲಾಗಿದೆ. ಹೊಸನಗರ ತಾಲೂಕಿನ 126, ತೀರ್ಥಹಳ್ಳಿಯ 145 ಹಾಗೂ ಶಿವಮೊಗ್ಗ ತಾಲೂಕಿನ 64 ಗ್ರಾಮಗಳನ್ನು ಪಶ್ಚಿಮಘಟ್ಟವೆಂದು ಗುರುತಿಸಲಾಗಿದೆ.
ಮಳೆಗಾಲದಲ್ಲಷ್ಟೇ ನೆನಪು:ಯಾವುದೇ ಸರ್ಕಾರವಿರಲಿ ಅವುಗಳಿಗೆ ಪರಿಸರ ಸಂರಕ್ಷಣೆ, ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶ ನೆನಪಾಗುವುದು ಮಳೆಗಾಲದಲ್ಲಿ ಗುಡ್ಡ ಕುಸಿದಾಗ ಮಾತ್ರ. ಈ ಬಾರಿ ಮಳೆಗಾಲದಲ್ಲಿ ಹಾಸನ, ಉತ್ತರಕನ್ನಡ ಜಿಲ್ಲೆಗಳಲ್ಲಿ ಗುಡ್ಡ ಕುಸಿದು ಪ್ರಾಣ ಹಾನಿ ಸಂಭವಿಸಿದ ಬಳಿಕ ಮೊದಲ ಬಾರಿಗೆ ಸರ್ಕಾರದಿಂದ ಕಸ್ತೂರಿ ರಂಗನ್ ವರದಿ ಪ್ರಸ್ತಾಪವಾಯಿತು. ಶಿವಮೊಗ್ಗದಲ್ಲಿ ಅಭಯಾರಣ್ಯದ ವ್ಯಾಪ್ತಿ ದೊಡ್ಡದಿದೆ. ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನಕ್ಕೂ ಜಿಲ್ಲೆಯ ಗಡಿ ಸೇರಿಕೊಂಡಿದೆ. ಹೀಗಾಗಿ ಅರಣ್ಯ ಪ್ರದೇಶದ ರಕ್ಷಣೆಯಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವುದಕ್ಕೆ ಕಡಿವಾಣ ಹಾಕಲು ಕಸ್ತೂರಿ ರಂಗನ್ ವರದಿ ಜಾರಿ ಅನಿವಾರ್ಯ ಎಂಬ ಮಾತುಗಳಿಗೂ ಈಗ ಬಲ ಬಂದಿದೆ.
ಚುನಾವಣಾ ಪ್ರಚಾರ ಸರಕು:ಕಸ್ತೂರಿ ರಂಗನ್ ವರದಿ ನೀಡಿದ್ದು ಪಶ್ಚಿಮ ಘಟ್ಟ ಸಂರಕ್ಷಣೆಗೆ. ಆದರೆ ಆ ವರದಿಯೇ ಇಂದು ಮಲೆನಾಡಿನಲ್ಲಿ ಚುನಾವಣಾ ಪ್ರಚಾರದ ಸರಕಾಗಿ, ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಬಳಕೆ ಆಗುತ್ತಿರುವುದು ವಿಪರ್ಯಾಸ. ಈ ವರದಿ ಪ್ರಸ್ತಾಪಿಸಿ ಜನರಲ್ಲಿ ಭಯ ಮೂಡಿಸಿ, ನಿಮ್ಮ ರಕ್ಷಣೆಗೆ ನಾವಿದ್ದೇವೆ. ವರದಿ ಜಾರಿಯಾಗಲು ಬಿಡಲ್ಲ ಎಂದು ಅಭಯ ನೀಡಿ ಮತ ಗಳಿಸುವುದು ರಾಜಕೀಯ ಪಕ್ಷಗಳಿಗೆ ಸಲೀಸಾಗಿದೆ. ಈಗ ರಾಜ್ಯ ಸರ್ಕಾರ ಕೇಂದ್ರದ ಅಧಿಸೂಚನೆಗೆ ಒಪ್ಪಿಗೆ ನೀಡಲು ಮುಂದಾದರೂ ಮಲೆನಾಡು ಭಾಗದ ಕಾಂಗ್ರೆಸ್ ಮುಖಂಡರೇ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿವೆ.
ವರದಿಯಲ್ಲಿರುವ ಪೂರಕ ಅಂಶ
1. ಪರವಾನಗಿ ಮುಗಿದ ಬಳಿಕ ಇಲ್ಲವೇ 5 ವರ್ಷ ದೊಳಗೆ ಎಲ್ಲ ರೀತಿಯ ಗಣಿಗಾರಿಕೆ ನಿಲ್ಲಿಸಬೇಕು
2. ಪಶ್ಚಿಮಘಟ್ಟದ ಜೀವ ವೈವಿಧ್ಯದ ಮೇಲೆ ಪರಿಣಾಮ ಬೀರುವ ಯೋಜನೆ ಕೈ ಬಿಡಬೇಕು
3. ಮೂಲ ಸೌಕರ್ಯಗಳ ಅಭಿವೃದ್ಧಿಗೂ ಮುನ್ನ ಕೇಂದ್ರದ ನಿರಾಕ್ಷೇಪಣಾ ಪತ್ರ ಕಡ್ಡಾಯ
4. ಥರ್ಮಲ್ ಪವರ್ ಪ್ರಾಜೆಕ್ಟ್​ಗೆ ಪಶ್ಚಿಮಘಟ್ಟದಲ್ಲಿ ಅನುಮತಿ ನೀಡುವಂತಿಲ್ಲ
5. ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ ಅವಕಾಶವಿದ್ದರೂ ಇದಕ್ಕೆ ಕೆಲ ನಿಬಂಧನೆಗಳಿವೆ
6. ಬೇಸಿಗೆಯಲ್ಲಿ ಶೇ.30ರಷ್ಟು ನೀರಿರುವ ನದಿಗೆ, 3 ಕಿ.ಮೀ ಅಂತರದಲ್ಲಿ ಘಟಕ ನಿರ್ವಿುಸಬಹುದು
7. ಪವನ ವಿದ್ಯುತ್ ಉತ್ಪಾದನಾ ಘಟಕ ನಿರ್ವಣಕ್ಕೂ ಪರಿಸರ ಸಚಿವಾಲಯದ ಅನುಮತಿ ಅವಶ್ಯ
8. ಪಶ್ಚಿಮಘಟ್ಟದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೈಗೊಳ್ಳಲು ನಿರಾಕ್ಷೇಪಣಾ ಪತ್ರ ಕಡ್ಡಾಯ
9. ಪಶ್ಚಿಮಘಟ್ಟದ ಅರಣ್ಯ ಸಂರಕ್ಷಣೆಗೆ ಸರ್ಕಾರವು ಸ್ಥಳೀಯರ ಸಹಭಾಗಿತ್ವ ಪಡೆಯಬೇಕು
10. ಅಭಿವೃದ್ಧಿ ಕಾಮಗಾರಿಗೂ ಮುನ್ನ ಗ್ರಾಮಸಭೆ ನಡೆಸಿ ರ್ಚಚಿಸಬೇಕು
ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ; ಅ.5ಕ್ಕೆ ಮತದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
