‘ನಾನು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ…’ ಎಂದು ಬಿಎಸ್​ವೈ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ ಜು. 26ಕ್ಕೆ ಭರ್ತಿ ಒಂದು ವರ್ಷ ಪೂರ್ಣಗೊಂಡಿದೆ.ಯಡಿಯೂರಪ್ಪ ಅವರ ರಾಜಕೀಯ ಜೀವನದ ಸಾಹಸಮಯ ಹಾದಿ, ನಾಲ್ಕನೇ ಸಲ ಅವರು ಸಿಎಂ ಆಗಿದ್ದರ ಹರಸಾಹಸದ ಹಿನ್ನೆಲೆ, ಅದಾದ ಬಳಿಕ ಎದುರಾದ ಸಂಕಷ್ಟಗಳು ಹಾಗೂ ಅವೆಲ್ಲವನ್ನೂ ಎದುರಿಸಿ ಅವರು ಅಧಿಕಾರ ನಿಭಾಯಿಸಿದ ಪರಿ ಎಲ್ಲವನ್ನೂ ಅವರ ಸಂಪುಟದ ಸಹೋದ್ಯೋಗಿಗಳಲ್ಲಿ ಒಬ್ಬರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಮ್ಮದೇ ಮಾತುಗಳಲ್ಲಿ ಇಲ್ಲಿ ಹಂಚಿಕೊಂಡಿದ್ದಾರೆ.
‘ಯಾರು ಮಾನವಕೋಟಿಗೆ ಸಹಾಯ ಮಾಡಬೇಕೆಂದು ಬಯಸುವರೋ ಅವರು ತಮ್ಮ ಸ್ವಂತ ಸುಖ-ದುಃಖ, ಹೆಸರು, ಕೀರ್ತಿ ಇವುಗಳನ್ನು ಕಡಲಿಗೆ ಬಿಸಾಕಿ ದೇವರ ಸಮೀಪಕ್ಕೆ ಬರಬೇಕು’
– ಇದು ಸ್ವಾಮಿ ವಿವೇಕಾನಂದರ ಸ್ಪೂರ್ತಿಯ ಮಾತು.
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ.. ಇವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ನಾಯಕ. ಕರ್ನಾಟಕ ಕಂಡ ಕೆಲವೇ ಮಂದಿ ಹೃದಯವಂತಿಕೆಯ ರಾಜಕಾರಣಿಗಳಲ್ಲಿ ಒಬ್ಬರೆನಿಸಿರುವ ಯಡಿಯೂರಪ್ಪನವರ ನೇತೃತ್ವದ ನಮ್ಮ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಜನಸೇವೆ ಗುರಿಹೊತ್ತ ನಾಯಕನಿಗೆ ಸಾಧಿಸಿದ್ದು ಕಡಿಮೆ, ಸಾಧಿಸಬೇಕಾದ್ದು ಇನ್ನೂ ಇದೆ ಎನ್ನುವ ಅಪರಿಮಿತ ದೂರದೃಷ್ಟಿ ಸಹಜ. ಸದಾ ಜನಸಾಮಾನ್ಯನ ಬದುಕು ಹಸನು ಮಾಡಬೇಕು ಎಂದೇ ಆಲೋಚಿಸುವ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರದಲ್ಲಿ ನಾನು ಮಂತ್ರಿಯಾಗಿರುವುದೇ ಒಂದು ಅದ್ಭುತ ಅನುಭವ. ಅವರ ಮಾಗಿದ ಆಡಳಿತ ಅನುಭವ, ರಾಜಕೀಯ ಪ್ರಜ್ಞೆ, ನಮ್ಮಂಥ ಯುವಕರಿಗೆ ಸ್ಪೂರ್ತಿ. ದಿನದ ಮುಕ್ಕಾಲುಭಾಗ ಕರ್ತವ್ಯದಲ್ಲೇ ಕಳೆಯುವ ದಣಿವರಿಯದ ಕಾರ್ಯಶೀಲತೆ ನಾನು ಕಂಡಿದ್ದು ಕೆಲವರಲ್ಲಿ ಮಾತ್ರ.
ರಾಜ್ಯದಲ್ಲಿ ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪನವರು ಸಂದಿಗ್ಧ ರಾಜಕೀಯ ಸನ್ನಿವೇಶಗಳನ್ನು, ಪ್ರಾಕೃತಿಕ ಸವಾಲುಗಳನ್ನು ಎದುರಿಸಿಕೊಂಡೇ ರಾಜ್ಯವನ್ನು ಮುನ್ನಡೆಸುತ್ತಿರುವ ನಾಯಕ. ಈಗ್ಗೆ ಒಂದು ವರ್ಷದ ಹಿಂದೆ ಕರ್ನಾಟಕದಲ್ಲಿ ಸೈದ್ಧಾಂತಿಕ ಸಂಘರ್ಷ ಮತ್ತು ಕೆಲವರಲ್ಲೇ ಕೇಂದ್ರೀಕೃತವಾಗಿದ್ದ ಅಧಿಕಾರವನ್ನು ಸಮರ್ಥರು, ಅರ್ಹರಿಗೆ ದಕ್ಕುವಂತೆ ಮಾಡಬೇಕು ಎನ್ನುವ ಸಮಾನಮನಸ್ಕ ಆಲೋಚನೆ ಪರಿಣಾಮವಾಗಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲು ನಾವು ನಿಮಿತ್ತ ಕಾರಣರಾದೆವು ಎನ್ನುವುದು ಈಗ ಇತಿಹಾಸ. ಒಬ್ಬ ಜನಪ್ರತಿನಿಧಿ ಬಯಸುವುದು ಜನಸ್ನೇಹಿ ಸರ್ಕಾರ, ಅಂಥವರಲ್ಲಿ ನಾನೂ ಒಬ್ಬ. ಕಳೆದ ಒಂದು ವರ್ಷದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಅತ್ಯಂತ ಸನಿಹದಿಂದ ನೋಡಿದ್ದೇನೆ. ಅವರು ಪ್ರತಿ ಹೆಜ್ಜೆ ಇಡುವ ಮೊದಲು ನಾಡಿನ ಜನ, ನಾಡಿನ ರೈತ, ನಾಡಿನ ಜಲ, ನಾಡಿನ ನೆಲ.. ಹೀಗೆ ಸರ್ವಾಂಗೀಣ ಕರ್ನಾಟಕವನ್ನೇ ಆಲೋಚಿಸುತ್ತಾರೆ.
ಏಕಾಂಗಿ ಹೋರಾಟ
ಅದು 2019ರ ಜುಲೈ ತಿಂಗಳು. ಯಡಿಯೂರಪ್ಪನವರು ರಾಜ್ಯ ಸಂಪುಟದ ಏಕಾಂಗಿ ನಾಯಕ. ರಾಜಕೀಯ ಸಂಕೀರ್ಣದ ಸ್ಥಿತಿಯಿಂದಾಗಿ ಒಬ್ಬರೇ ಸರಿಸುಮಾರು 2 ತಿಂಗಳ ಕಾಲ ಇಡೀ ಸರ್ಕಾರವನ್ನು ಹೆಗಲ ಮೇಲೆ ಹೊತ್ತರು. ಸಂಭ್ರಮದ ಕ್ಷಣದಲ್ಲಿ ದಿಢೀರನೇ ಉತ್ತರ ಕರ್ನಾಟಕ ಸೇರಿ ರಾಜ್ಯದ ಬಹುತೇಕ ಭಾಗವನ್ನು ಮಹಾ ಪ್ರವಾಹ ಆವರಿಸಿಕಂಡಿತ್ತು. ಕಿಂಚಿತ್ತೂ ಧೃತಿಗೆಡಲಿಲ್ಲ, ಸವಾಲಿಗೆ ಅಂಜಲಿಲ್ಲ. ಸಂಪುಟದ ಸಾಥಿಗಳಿಲ್ಲದೆ 118 ವರ್ಷಗಳ ದಾಖಲೆ ಮಳೆಯ ರಣಭೀಕರ ಜಲಪ್ರಳಯವನ್ನು ನಿಭಾಯಿಸಿದರು. 24 ದಿನ ಏಕಾಂಗಿಯಾಗಿ ವೈಮಾನಿಕ ಸಮೀಕ್ಷೆ ಮಾಡಿದರು, ರಸ್ತೆ ಮೂಲಕ ರಾಜ್ಯ ಸುತ್ತಿದರು. ಪ್ರವಾಹಕ್ಕೆ ಸಿಲುಕಿದ 22 ಜಿಲ್ಲೆಯ 103 ತಾಲೂಕಿನ 2798 ಹಳ್ಳಿಗಳನ್ನು ಆಪತ್ತಿನಿಂದ ಪಾರು ಮಾಡುವ ಸಂಕಲ್ಪ ಹೊತ್ತರು. ರಕ್ಷಣಾ ತಂಡ, ಸೇನೆ, ಹೆಲಿಕಾಪ್ಟರ್, ಆಹಾರ, ಔಷಧ, ಸಂತ್ರಸ್ತರಿಗೊಂದು ಸೂರು ಕಲ್ಪಿಸುವ ಯುದ್ಧೋಪಾದಿ ಕಾರ್ಯ ಮಾಡಿದರು. ಪ್ರವಾಹದ ವಿರುದ್ಧ ಈಜಿ ಗೆದ್ದ ಮಾನ್ಯ ಮುಖ್ಯಮಂತ್ರಿಗಳ ಮುಂದಿನ ದಾರಿ ಸುಲಭವೇನೂ ಆಗಿರಲಿಲ್ಲ.
ಕೋವಿಡ್ ನಿಯಂತ್ರಣದಲ್ಲಿ ಮಾದರಿ
ಉಪ ಚುನಾವಣೆ, ಸಂಪುಟ ವಿಸ್ತರಣೆ, ಇದಾದ ಬೆನ್ನಲ್ಲೇ ಇಡೀ ವಿಶ್ವವನ್ನೇ ಅಣುಅಣುವಾಗಿ ಕಾಡಲು ಆರಂಭಿಸಿದ್ದ ಕೋವಿಡ್-19 ಸೋಂಕು ಮಾರ್ಚ್-8ರಂದು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟಿತ್ತು. ಕರ್ನಾಟಕದಲ್ಲೇ ಮೊದಲ ಬಲಿ ಆರಂಭಿಸಿತ್ತು. ಕೊರೊನಾ ವೈರಸ್ ಹರಡದಂತೆ ತಡೆಯುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಇಡೀ ಭಾರತಕ್ಕೂ ಬೆಂಗಳೂರಿಗೂ ವ್ಯತ್ಯಾಸವಿದೆ. ಐಟಿ ಸಿಟಿ ಒಂದುಮಟ್ಟಿಗೆ ಮಿನಿ ಭಾರತ. ಸಿಲಿಕಾನ್ ವ್ಯಾಲಿ ಇಡೀ ಜಗತ್ತಿನ ಆರ್ಥಿಕ ಶಕ್ತಿಕೇಂದ್ರಗಳಲ್ಲೊಂದು. ನಿತ್ಯ ಬಂದು ಹೋಗುವ ದೇಶ-ವಿದೇಶಿಗರ ಸಂಖ್ಯೆಯೇ ಲಕ್ಷ ಲಕ್ಷ. ಹಾಗೆ ನೋಡಿದರೆ ಇಡೀ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಸೋಂಕನ್ನು ಎದುರಿಸಬೇಕಿತ್ತು. ಆರೋಗ್ಯ, ವೈದ್ಯಕೀಯ.. ಹೀಗೆ ಎಲ್ಲ ಇಲಾಖೆ ಸಚಿವರಲ್ಲಿ ಧೈರ್ಯ ತುಂಬಿ ಸೇನಾಧಿಪತಿಯಂತೆ ಕೆಲಸ ಆರಂಭಿಸಿದರು ಯಡಿಯೂರಪ್ಪನವರು.
ತಂತ್ರಜ್ಞಾನವನ್ನೇ ಅಸ್ತ್ರ ಮಾಡಿಕೊಂಡು ಟ್ರೇಸಿಂಗ್, ಟೆಸ್ಟಿಂಗ್, ಟ್ರೀಟ್​ವೆುಂಟ್ ಸೂತ್ರದಡಿ ಸೋಂಕಿತರನ್ನು ಪಾರು ಮಾಡುವ ಸಮರೋಪಾದಿ ಪ್ರಯತ್ನ ನಡೆಯಿತು. ಲಾಕ್​ಡೌನ್ ಅವಧಿಯಲ್ಲಿ ನಮ್ಮ ಸರ್ಕಾರ ಕೈ ಗೊಂಡ ತೀರ್ವನಗಳಿಂದಲೇ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಎನಿಸಿತು. ಸೋಂಕಿತರ ಸಂಖ್ಯೆಯ ನಿಯಂತ್ರಣದಲ್ಲೇ ನಾವು ಮುಂಚೂಣಿಯಲ್ಲಿದ್ದೆವು. ವೈದ್ಯಕೀಯ ಶಿಕ್ಷಣ ಇಲಾಖೆ ರಾಜೀವ್ ಗಾಂಧಿ ಆಸ್ಪತ್ರೆ ಸೇರಿ ಆರೋಗ್ಯ ಇಲಾಖೆ ಅಡಿ ಬರುವ ಎಲ್ಲ ವೈದ್ಯಕೀಯ ಸಂಸ್ಥೆಗಳನ್ನು ಒಳಗೊಂಡು ಕರೊನಾ ಚಿಕಿತ್ಸೆಗೆ ಸಿದ್ಧಪಡಿಸಲಾಯಿತು. ಕೋವಿಡ್ ಸೆಂಟರ್​ಗಳನ್ನು ರೂಪಿಸಿದ್ದಾಯಿತು, ಕರೊನಾ ಪತ್ತೆಗೆ 80ಕ್ಕೂ ಹೆಚ್ಚು ಟೆಸ್ಟಿಂಗ್ ಲ್ಯಾಬ್​ಗಳನ್ನು ಹೊಸದಾಗಿ ತೆರೆಯಲಾಯಿತು. ಬಿಐಇಸಿ ಮೈದಾನದಲ್ಲಿ 10,100 ಬೆಡ್​ಗಳ ಕೋವಿಡ್ ಸೆಂಟರ್ ನಿರ್ವಣವಾಯಿತು. ಇದೆಲ್ಲಕ್ಕಿಂತಲೂ ಮಿಗಿಲಾಗಿ 30ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳನ್ನು ಮನವೊಲಿಸಿ 5000ಕ್ಕೂ ಹೆಚ್ಚು ಬೆಡ್​ಗಳ ವ್ಯವಸ್ಥೆ ಮಾಡುವಲ್ಲಿ ನನ್ನ ಇಲಾಖೆಯೂ ಸೇರಿ ಎಲ್ಲರನ್ನು ಜೊತೆಯಾಗಿ ಕೊಂಡೊಯ್ದರು. ಲಕ್ಷಾಂತರ ಜನರಿಗೆ ಟೆಸ್ಟ್ ಮಾಡಲು ಆಂಟಿಜನ್ ಟೆಸ್ಟ್ ಕಿಟ್, ರ್ಯಾಪಿಡ್ ಟೆಸ್ಟ್ ಕಿಟ್.. ಹೀಗೆ ನಾನಾ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಮಾ ಚಿಕಿತ್ಸೆಗೆ ರಕ್ತ ನೀಡುವ ದಾನಿಗಳಿಗೆ ಗೌರವಧನವಾಗಿ 5000 ರೂ. ನೀಡುವ ನಿರ್ಧಾರ ಮಾಡಲಾಯಿತು. ಇದರ ಪರಿಣಾಮ ನೆರೆ ರಾಜ್ಯಗಳಲ್ಲಿ ಅತಿ ಹೆಚ್ಚು ಸೋಂಕಿತರಿದ್ದರೂ ಹರಡುವಿಕೆ ಪ್ರಮಾಣ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ಬೆಂಗಳೂರಿನಲ್ಲಿ 8 ವಲಯಗಳನ್ನು ಗುರುತಿಸಿ ಸಚಿವರು, ಅಧಿಕಾರಿಗಳ ತಂಡವನ್ನು ಸಜ್ಜುಗೊಳಿಸಿದ್ದು ಪರಿಣಾಮಕಾರಿ ಕಾರ್ಯ. ಅದರಲ್ಲೂ ಕರೊನಾ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿಗಳು ನೀಡಿದ ಮುಕ್ತ ಅವಕಾಶ, ಮಾರ್ಗದರ್ಶನ ಮೆಚ್ಚುವಂಥದ್ದು.
ವೈದ್ಯಕೀಯ ಇಲಾಖೆಗೆ ಪೂರಕ ಸೌಲಭ್ಯ
ವೈದ್ಯಕೀಯ ಇಲಾಖೆ ಕರೊನಾ ನಿಯಂತ್ರಣದಲ್ಲಿ ಪ್ರಮುಖಪಾತ್ರ ವಹಿಸಿದೆ. ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿ ಕರೊನಾ ಚಿಕಿತ್ಸೆಗೆ ತೊಡಗಿಸಿಕೊಳ್ಳಲಾಯಿತು. ರಾಜೀವ್ ಗಾಂಧಿ ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಿಗೆ ಮೂಲಸೌಕರ್ಯ ಮತ್ತು ಚಿಕಿತ್ಸೆಗೆ ಪೂರಕವಾದ ಸೌಲಭ್ಯಗಳನ್ನು ಮುಖ್ಯಮಂತ್ರಿಗಳು ಒದಗಿಸಿಕೊಟ್ಟರು. ಕರೊನಾ ತಪಾಸಣೆಗೆ ಕಡಿಮೆ ದರ ನಿಗದಿ ಮಾಡಿದ್ದು ಕರೊನಾ ಟೆಸ್ಟಿಂಗ್ ಸಾಮರ್ಥ್ಯವನ್ನು ಹೆಚ್ಚಳ ಮಾಡುವಲ್ಲಿ ನಮ್ಮ ಇಲಾಖೆ ಸಮರ್ಥ ಕೆಲಸ ಮಾಡಿದೆ. ಖುದ್ದು ಆಸ್ಪತ್ರೆಗಳಿಗೆ ಭೇಟಿ ನೀಡಿ ಆತಂಕವನ್ನು ದೂರ ಮಾಡುವ ಪ್ರಯತ್ನವನ್ನು ಸಚಿವನಾಗಿ ಮಾಡಿದ್ದೇನೆ.
ರಾಜ್ಯದ 507 ಗುತ್ತಿಗೆ ವೈದ್ಯರನ್ನು ಕಾಯಂ ಮಾಡಿಕೊಳ್ಳುವುದು, ವೈದ್ಯರ ವೇತನವನ್ನು ಹೆಚ್ಚಳ ಮಾಡುವುದು.. ಹೀಗೆ ಹಲವು ತೀರ್ವನಗಳನ್ನು ಕೈಗೊಳ್ಳುವ ಮೂಲಕ 3 ತಿಂಗಳಿಂದ ಆರೋಗ್ಯಯೋಧರಾಗಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ. ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದು ಬೂತ್​ವುಟ್ಟದ ಕಾರ್ಯಪಡೆ ರಚನೆ, ತರಬೇತಿ, ಸಮೀಕ್ಷೆಗಳ ಕಾಲಮಿತಿ ನಿಗದಿ ಮಾಡಿದ್ದೇವೆ. ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಬೂತ್​ವುಟ್ಟದ ಸಮಿತಿಗಳನ್ನು ರಚಿಸಿ ಅದರಲ್ಲಿ ಧಾರ್ವಿುಕ, ಸಾಮಾಜಿಕ, ಸಂಘ-ಸಂಸ್ಥೆಗಳು, ಆರ್​ಎಸ್​ಎಸ್, ಲಯನ್ಸ್ ಕ್ಲಬ್, ರೋಟರಿ ಸೇರಿ ಅನೇಕ ಸಂಘ-ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ.
ಪೌರ ಕಾರ್ವಿುಕರಿಗೆ 10 ಸಾವಿರ ರಿಸ್ಕ್ ಭತ್ಯೆ ನೀಡಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಹಾಸಿಗೆಗಳ ರಿಯಲ್ ಟೈಮ್ ಮಾಹಿತಿಗಾಗಿ ಡಿಜಿಟಲ್ ಡ್ಯಾಷ್​ಬೋರ್ಡ್ ಸ್ಥಾಪಿಸಿದ್ದೇವೆ. ರಾಜ್ಯದಲ್ಲಿ ಕೇವಲ 2 ಲ್ಯಾಬ್​ಗಳು ಮಾತ್ರ ಇದ್ದವು. ಕೋವಿಡ್ ವೈರಸ್ ಹೆಚ್ಚಾಗುತ್ತಿದ್ದಂತೆ ರಾಜ್ಯಾದ್ಯಂತ ಒಟ್ಟು 88 ಲ್ಯಾಬ್​ಗಳನ್ನು ನಿರ್ವಿುಸಲಾಗಿದೆ. ಪ್ರತಿದಿನ 30-40 ಸಾವಿರ ಕೋವಿಡ್ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಸರ್ಕಾರ ನಿಗದಿ ಮಾಡಿದ ಶೇ.50 ಬೆಡ್ ಹಾಗೂ ಸೌಲಭ್ಯಗಳನ್ನು ಕೊಡದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಅಂಥ ಆಸ್ಪತ್ರೆಗಳ ಮೇಲೆ ದೂರುಗಳು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು ನಗರಕ್ಕೆ ಪ್ರತಿ ವಾರ್ಡ್​ಗಳಿಗೆ 2 ಆಂಬುಲೆನ್ಸ್ ಒದಗಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ 200 ಆಂಬುಲೆನ್ಸ್​ಗಳನ್ನು ಖರೀದಿಸಲು ಸರ್ಕಾರ ಈಗಾಗಲೇ ಕೋವಿಡ್ ವಿರುದ್ಧ ಸಮರದಲ್ಲಿ ಮುಂಚೂಣೆಯಲ್ಲಿರುವ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲಾಗಿದೆ. ಕೋವಿಡ್ ನಿರ್ವಹಣೆ ವೈದ್ಯಕೀಯ ಪರಿಕರ, ಔಷಧ ಖರೀದಿಯ ಶಿಫಾರಸು ಮೇಲ್ವಿಚಾರಣೆಗೆ ಎಸಿಎಸ್, ಐಟಿಬಿಟಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕರೊನಾ ನಿರ್ವಾಹಣೆಯಲ್ಲಿ ಕಾರ್ಯನಿರತರಾಗಿರುವ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ 2,59,263 ಎನ್-95 ಮಾಸ್ಕ್, 2,59,263 ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಹೊಸದಾಗಿ 16 ಆರ್​ಟಿ-ಪಿಸಿಆರ್ ಮತ್ತು 15- ಆಟೋಮೇಟೆಡ್ ಆರ್​ಎನ್​ಎ ಎಕ್ಸ್​ಟ್ರಾಕ್ಷನ್ ಲ್ಯಾನ್ ಸ್ಥಾಪನೆಗೆ ಮಾಡಲಾಗಿದೆ. ಕೇಂದ್ರ ಸರ್ಕಾರ ವೇತನ ಆಯೋಗದ ಅನ್ವಯದಂತೆ ಎಐಸಿಟಿಇನ ವೈದಕೀಯ ವಿದ್ಯಾರ್ಥಿಗಗಳಿಗೆ ಪೋ›ತ್ಸಾಹ ಧನ ಹೆಚ್ಚಿಸಲಾಗಿದೆ. ರಾಜ್ಯದಲ್ಲಿರವ ಎಂಬಿಬಿಎಸ್, ಎಂಡಿ, ಹೌಸ್ ಸರ್ಜನ್​ಗಳ ಒಟ್ಟು 2,837 ವೈದ್ಯ ವಿದ್ಯಾರ್ಥಿಗಳಿಗೆ ಶೇ.23.6ರಷ್ಟಿದ್ದ ಪೋ›ತ್ಸಾಹ ಧನವನ್ನು ಶೇ.26ರಷ್ಟು ಏರಿಸಲಾಗಿದೆ. ಆಯುಷ್ಮಾನ್ ವೈದ್ಯರಿಗೆ 40 ಸಾವಿರ, ಎಂಬಿಬಿಎಸ್ ವೈದ್ಯರಿಗೆ 80 ಸಾವಿರ ಮತ್ತು ದಾದಿಯರಿಗೆ 33 ಸಾವಿರ ರೂ. ಮಾಸಿಕ ವೇತನ ನೀಡುತ್ತಿದ್ದೇವೆ.
ಚುನಾವಣಾ ಪರೀಕ್ಷೆಯಲ್ಲಿ ಯಶಸ್ವಿ
ಮಹಾಪ್ರವಾಹದ ಮಾದರಿಯಂತೆ ಯಡಿಯೂರಪ್ಪನವರಿಗೆ ಎದುರಾಗಿದ್ದು ರಾಜಕೀಯ ಸವಾಲು. ರಾಜೀನಾಮೆ ಕೊಟ್ಟು ಬಂದ ಕಾಂಗ್ರೆಸ್, ಜೆಡಿಎಸ್​ನ 15 ಕ್ಷೇತ್ರ ಗಳಿಗೆ ಉಪ ಚುನಾವಣೆ ಎದುರಾಯಿತು. ವಿರೋಧ ಪಕ್ಷಗಳ ಜಂಟಿ ಶಕ್ತಿ, ಮತ್ತೊಂದು ಕಡೆ ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಸಂದರ್ಭ. ಬಿಜೆಪಿಯ ಬೇರು ತಳಮಟ್ಟದಲ್ಲಿ ಗಟ್ಟಿಯಾಗಿಲ್ಲದ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಬಹುದೊಡ್ಡ ಪರೀಕ್ಷೆ ಎದುರಾಗಿತ್ತು. ಇಂಥ ಸನ್ನಿವೇಶದಲ್ಲಿ ಯಡಿಯೂರಪ್ಪನವರು ತಮ್ಮ ರಾಜಕೀಯ ಅನುಭವವನ್ನು ಪರೀಕ್ಷೆಗೊಡ್ಡಿ 12 ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬಂದರು. ನನ್ನಂಥ ಯುವ ರಾಜಕಾರಣಿಗೆ ಇದೊಂದು ಪ್ರಯೋಗದ ಕಣವೂ ಆಗಿತ್ತು. ಉಪ ಚುನಾವಣೆ ಮುಗಿದು ನಾವೆಲ್ಲರೂ ಯಡಿಯೂರಪ್ಪನವರ ಮಂತ್ರಿಮಂಡಲ ಸೇರಿದ ನಂತರ ಖಾತೆಗಳನ್ನು ವಹಿಸಿ ಅವರು ನೀಡಿದ ಮಾರ್ಗದರ್ಶನ ಎಂಥವರಿಗೂ ಮಾದರಿ.
ಸಂಕಷ್ಟದಲ್ಲಿದ್ದ ಜನರಿಗೆ ಸಹಾಯಹಸ್ತ
ಒಂದೆಡೆ ಲಾಕ್​ಡೌನ್ ಮತ್ತೊಂದೆಡೆ ವೈರಸ್​ನ ಭೀತಿ ದುಡಿದು ತಿನ್ನುವ ಕೈಗಳನ್ನು ಬರಿದು ಮಾಡಿದ್ದು ಸತ್ಯ. ಇಂಥ ವರ್ಗಗಳನ್ನು ಗುರುತಿಸಿ ದೇಶದಲ್ಲೇ ಮೊದಲು ಪ್ಯಾಕೇಜ್ ಘೊಷಿಸಿದ್ದು ನಮ್ಮ ಸರ್ಕಾರದ ಜನಪರ ಕಾಳಜಿಗೆ ಸಾಕ್ಷಿ. ರೈತರಿಗೆ ಹೆಚ್ಚುವರಿ ಕಿಸಾನ್ ಸಮ್ಮಾನ್ ಹಣ, ಹೂ ಬೆಳೆಯುವವ ರೈತನ ಪ್ರತಿ ಹೆಕ್ಟೇರ್​ಗೆ 25 ಸಾವಿರ ಪೊ›ತ್ಸಾಹ ಧನ ನೀಡಿದ್ದರು. ಮಡಿವಾಳ ಸಮುದಾಯಕ್ಕೆ 5000 ರೂ., ನೇಕಾರ ಸಮುದಾಯಕ್ಕೆ ಆರ್ಥಿಕ ನೆರವು, ಸವಿತಾ ಸಮಾಜದ 2.3 ಲಕ್ಷ ಮಂದಿಗೆ ತಲಾ 5000 ರೂ. ಹೀಗೆ ಕುಲಕಸುಬು ಆಧಾರಿತ ಕುಟುಂಬಗಳಿಗೆ ಆರ್ಥಿಕ ನೆರವು. 7.75 ಲಕ್ಷ ಆಟೋ-ಟ್ಯಾಕ್ಸಿ ಚಾಲಕರಿಗೆ ತಲಾ 5000 ರೂ., 15.8 ಲಕ್ಷ ಕಾರ್ವಿುಕರಿಗೆ ತಲಾ 5000 ರೂ., 40250 ಆಶಾ ಕಾರ್ಯಕರ್ತೆಯರಿಗೆ ತಲಾ 3000 ಸಾವಿರ ರೂ., ರೇಷ್ಮೆ ನೂಲು ಖರೀದಿಸಲು 10 ಕೋಟಿ ರೂಪಾಯಿ.. ಹೀಗೆ ಎಲ್ಲ ದುರ್ಬಲ ವರ್ಗಕ್ಕೂ 2,294 ಕೋಟಿ ರೂ. ಪ್ಯಾಕೇಜ್ ನಮ್ಮ ಸರ್ಕಾರ ನೀಡಿದೆ. ಒಂದು ತಿಂಗಳಿಗೂ ಹೆಚ್ಚು ಕಾಲ 7.5 ಲಕ್ಷ ಲೀ. ಹಾಲನ್ನು ಸರ್ಕಾರ ಉಚಿತವಾಗಿ ನೀಡಿ ಒಂದೆಡೆ ಹಾಲು ಉತ್ಪಾದಕರು, ಮತ್ತೊಂದೆಡೆ ನಗರ ಪ್ರದೇಶದ ಬಡವರಿಗೆ ಆಸರೆಯಾದೆವು. ಮೂರು ತಿಂಗಳ ಪಡಿತರವನ್ನು ಉಚಿತವಾಗಿ ನೀಡಿ ಅದನ್ನು ಮುಂದುವರಿಸಲಾಗಿದೆ. ಈ ಮೂರೂ ನಿದರ್ಶನಗಳು ಯಡಿಯೂರಪ್ಪನವರ ಸಾಮರ್ಥ್ಯ-ಶಕ್ತಿ 40 ವರ್ಷಗಳ ರಾಜಕೀಯ ಅನುಭವ ಮತ್ತು ಜನಪರವಾದ ಆಡಳಿತ ವೈಖರಿಗೆ ಸಾಕ್ಷಿ.
ಸರ್ವರ ಏಳಿಗೆಗೆ ಮಹತ್ವದ ಹೆಜ್ಜೆ
ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 1.8 ಲಕ್ಷ ಮನೆಗಳನ್ನು ನಿರ್ವಿುಸುವ ಗುರಿಯಲ್ಲಿ ಈಗಾಗಲೇ 1.2 ಲಕ್ಷ ಮನೆ ಮಂಜೂರಾತಿ ಪಡೆದಿವೆ. ಹೊಸ ಕೈಗಾರಿಕಾ ನೀತಿ ಮೂಲಕ ಕನ್ನಡಿಗರಿಗೆ ಶೇ.70 ಉದ್ಯೋಗ ಕಲ್ಪಿಸುವುದು ಎರಡನೇ ಹಂತದ ನಗರಗಳತ್ತ ಹೂಡಿಕೆ ದೃಷ್ಟಿ ಹರಿಸುವುದು, 2ನೇ ಹಂತದ ನಗರಗಳ ವಿಮಾನಯಾನ ಸೌಕರ್ಯ, ಶುದ್ಧ ಕುಡಿಯುವ ನೀರು ತಲುಪಿಸುವ ಮನೆಮನೆಗೆ ಗಂಗೆ ಯೋಜನೆ, ಎತ್ತಿನಹೊಳೆ ಅನುಷ್ಠಾನಕ್ಕೆ ಒತ್ತು ನೀಡುವ ಮೂಲಕ ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಜಲಸಂಕಷ್ಟ ನಿವಾರಿಸುವ ಪ್ರಯತ್ನ ನಡೆದಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ, 23 ಎಕರೆ ಪ್ರದೇಶದಲ್ಲಿ ಸೆಂಟ್ರಲ್ ಪಾರ್ಕ್ ನಿರ್ವಿುಸಿ ಕೆಂಪೇಗೌಡರ ಜೀವನ ಇತಿಹಾಸ ತಿಳಿಸುವ ಪ್ರಯತ್ನ, ನಡೆದಾಡುವ ದೇವರು ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಜನ್ಮಸ್ಥಳ ಅಭಿವೃದ್ಧಿ, ಕೂಡಲ ಸಂಗಮ ಅಭಿವೃದ್ಧಿ, ಆದಿಚುಂಚನಗಿರಿ ಮಠದ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ಜನ್ಮಸ್ಥಳ ಅಭಿವೃದ್ಧಿ ಹೀಗೆ ಸರ್ವ ಸಮಾಜದ ಏಳಿಗೆಗೆ ನಮ್ಮ ಸರ್ಕಾರ ಕಳೆದ ಒಂದು ವರ್ಷದಲ್ಲಿ ಹತ್ತು ಹಲವು ಹೆಜ್ಜೆ ಇಟ್ಟಿದೆ. ಕಳೆದ ಮಾರ್ಚ್​ನಲ್ಲಿ ಸಿಎಂ ಮಂಡಿಸಿದ 2.38 ಲಕ್ಷ ಕೋಟಿ ಗಾತ್ರದ ಬಜೆಟ್ ಇಡೀ ದೇಶದ ಗಮನ ಸೆಳೆದಿತ್ತು. ರಾಜ್ಯದಲ್ಲಿ ಮೊದಲ ಬಾರಿ ಮಕ್ಕಳ ಬಜೆಟ್ 36,340 ಕೋಟಿ ಅನುದಾನ ನೀಡಿದ್ದು ಐತಿಹಾಸಿಕ. ಒಟ್ಟಾರೆ ಬಿಎಸ್​ವೈ ನೇತೃತ್ವದ ನಮ್ಮ ಸರ್ಕಾರ ಒಂದು ವರ್ಷದ ಸಾರ್ಥಕ ಹಾದಿಯನ್ನು ಮುಗಿಸಿದೆ. ಸವಾಲುಗಳು ನೂರು. ಸಮಸ್ಯೆಗಳು ಸಾವಿರಾರು. ಎಲ್ಲದಕ್ಕೂ ಎದೆಯೊಡ್ಡುತ್ತ ಪರಿಹಾರ ರೂಪಿಸುತ್ತ ಆಡಳಿತದ ನೊಗ ಹೊತ್ತವನೇ ನಿಜವಾದ ನಾಯಕ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮುಂದೆಯೂ ಕರ್ನಾಟಕ ಸಮೃದ್ಧಿಯ ಹೆಜ್ಜೆಗಳನ್ನು ಇಡುತ್ತ ಸಾಗಲು ನಾವೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 3 =
Remember me
