ಬೆಂಗಳೂರು:ಸಣ್ಣ ಕೈಗಾರಿಕೆಗಳನ್ನು ಹೆಚ್ಚಿಸುವ ಮೂಲಕ ದುಡಿಯುವ ವರ್ಗದವರಿಗೆ ಕೆಲಸ ಕೊಡಬೇಕೆಂದು ಆಗ್ರಹಿಸುವ ‘ಪವಿತ್ರ ಆರ್ಥಿಕತೆ’ಯ ಪ್ರತಿಪಾದಕ, ರಂಗಕರ್ಮಿ ಪ್ರಸನ್ನ ಅವರು ಕಳೆದ 8 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ.
‘‘ಒಂದು ಸೀಮಿತ ಉದ್ದೇಶದಿಂದ ವ್ರತವನ್ನು ಕೈಗೊಳ್ಳಲಾಗಿತ್ತು. ಪ್ರಭುತ್ವವನ್ನು ಅಲುಗಾಡಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆತ್ಮವಲೋಕನದ ಉದ್ದೇಶವಿತ್ತು. ಲಾಕ್‌ಡೌನ್ ತೆರವುಗೊಂಡ ನಂತರ ನಾವು ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ. ಹಸಿದವರತ್ತ, ಕೆಲಸ ಕಳೆದುಕೊಂಡಿರುವವರತ್ತ ತೆರಳುತ್ತೇವೆ. ಗುಳೆ ಎದ್ದ ಬಡವರಿರಲಿ, ಗ್ರಾಮೀಣ ರೈತನಿರಲಿ, ಪೇಟೆಯ ಕಾರ್ಮಿಕನಿರಲಿ, ನೇಕಾರ ಚಮ್ಮಾರ ಯಾರೇ ಇರಲಿ ಅವರ ಪರವಾಗಿ ದನಿ ಎತ್ತುತ್ತೇವೆ’’ ಎಂದು ಗ್ರಾಮ ಸೇವಾ ಸಂಘದ ಮುಖ್ಯಸ್ಥರೂ ಆದ ಪ್ರಸನ್ನ ತಿಳಿಸಿದ್ದಾರೆ.
‘‘ಈಗ ಕುಸಿದು ಬಿದ್ದಿರುವ ರಾಕ್ಷಸ ಆರ್ಥಿಕತೆಯನ್ನು ನಿಲ್ಲಿಸುವ ಪ್ರಯತ್ನಗಳು ಮುಂದೆ ಸರ್ಕಾರಗಳಿಂದ ನಡೆಯಲಿವೆ. ಬಡವರು ಹಾಗೂ ಪ್ರಕೃತಿಯ ಮೇಲೆ ಇಷ್ಟೆಲ್ಲ ದೌರ್ಜನ್ಯ ಎಸಗಿ ನರಕ ಸೃಷ್ಟಿಸಿದವರು ಮತ್ತೆ ಕಾರ‌್ಯಪ್ರವೃತ್ತರಾಗುವುದನ್ನು ನಾವು ತಡೆಯಲಿದ್ದೇವೆ. ಅಹಿಂಸಾತ್ಮಕ ಯುದ್ಧ ಸಾರುವವರಿದ್ದೇವೆ’’ ಎಂದು ಹೇಳಿದ್ದಾರೆ.
ಮೂರು ತಿಂಗಳ ಮನೆ ಬಾಡಿಗೆ ತಗೋಬೇಡಿ: ಮಾಲೀಕರಿಗೆ ಮಹಾರಾಷ್ಟ್ರ ಸರ್ಕಾರದ ತಾಕೀತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 4 =
Remember me
