ತೀರ್ಥಹಳ್ಳಿ:ಲಾಕ್​ಡೌನ್ ಪರಿಣಾಮ ಅಡಿಗಡಿಗೂ ಎದುರಾದ ಚೆಕ್​ಪೋಸ್ಟ್​ಗಳನ್ನು ದಾಟಿ ವಧು ಮದುವೆ ಮಂಟಪ ತಲುಪುವಷ್ಟರಲ್ಲಿ ಮುಹೂರ್ತ ಮೀರಿಹೋಗಿ ಪುರೋಹಿತರು ಮನೆ ಸೇರಿದ್ದರು. ಆದರೂ ವಿಚಲಿತರಾಗದ ಕುಟುಂಬದವರು ವರನ ಮನೆಯಲ್ಲೇ ವಧುವಿಗೆ ತಾಳಿ ಕಟ್ಟಿಸಿ ನಿಟ್ಟುಸಿರು ಬಿಟ್ಟರು!
ಇಂಥದ್ದೊಂದು ಅಪರೂಪದ ವಿವಾಹ ಭಾನುವಾರ ನಡೆದಿದ್ದು ತೀರ್ಥಹಳ್ಳಿ ಸಮೀಪದ ಶಿವರಾಜಪುರದಲ್ಲಿ. ಈ ಮದುವೆಗೆ ಸಾಕ್ಷಿಯಾದವರು ಹಾಸನದ ವಧುವಿನ ತಂದೆ-ತಾಯಿ ಮತ್ತು ವರನ ಮನೆಯವರು ಮಾತ್ರ.
ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತೋಷ್ ಮತ್ತು ಐಶ್ವರ್ಯಾ ಸಹೋದ್ಯೋಗಿಗಳು. ಪರಸ್ಪರ ಪ್ರೀತಿಸುತ್ತಿದ್ದ ಮದುವೆಗೆ ಮನೆಯವರನ್ನು ಒಪ್ಪಿಸಿದ್ದರು. ಭಾನುವಾರ ಬೆಳಗ್ಗೆ 8.45ಕ್ಕೆ ಶಿವರಾಜಪುರ ಸಾಲುಮರದ ಮಹಾಗಣಪತಿ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಐಶ್ವರ್ಯಾಳ ತಂದೆ-ತಾಯಿ ಹಾಸನದಿಂದಲೇ ಮಗಳನ್ನು ಸಿಂಗರಿಸಿಕೊಂಡು ಬೇಗ ಹೊರಟು ಬಂದಿದ್ದರು. ಲಾಕ್​ಡೌನ್ ಇದ್ದ ಕಾರಣ ಚೆಕ್​ಪೋಸ್ಟ್ ದಾಟಿ ಬರುವಷ್ಟರಲ್ಲಿ 9 ಗಂಟೆ ದಾಟಿ ಮುಹೂರ್ತ ಮೀರಿತ್ತು. ಮದುವಣಿಗರನ್ನು ದೇವಸ್ಥಾನದಲ್ಲಿ ಕಾಯುತ್ತಿದ್ದ ಪುರೋಹಿತರು ಕೂಡ ಮನೆಗೆ ಹಿಂದಿರುಗಿದ್ದರು. ಇದರಿಂದ ವಿಚಲಿತರಾಗದ ಎರಡೂ ಕುಟುಂಬದವರು ಮುಹೂರ್ತ ಸೇರಿ ಯಾವ ವಿಧಿಗಳ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಯಾವ ಆಡಂಬರವೂ ಇಲ್ಲದಂತೆ ವರನ ಮನೆಯಲ್ಲೇ ಸರಳವಾಗಿ ವಿವಾಹ ನೆರವೇರಿಸಿದರು.
ತಂದೆ-ತಾಯಿಗೆ ಕ್ವಾರಂಟೈನ್ ಬಿಸಿ
ಮಗಳನ್ನು ಮದುವೆ ಮಾಡಿಕೊಟ್ಟು ಊರಿಗೆ ಹಿಂತಿರುಗಲು ಬಯಸಿದ್ದ ಐಶ್ವರ್ಯಾಳ ಪಾಲಕರಿಗೆ ತೀರ್ಥಹಳ್ಳಿ ತಾಲೂಕು ಆಡಳಿತ ಅನುಮತಿ ನಿರಾಕರಿಸಿದ ಕಾರಣ ಬೀಗರ ಮನೆಯಲ್ಲೇ ಹೋಮ್ ಕ್ವಾರಂಟೈನ್​ಗೆ ದಾಖಲಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಬಿಂದಿಗೆ ಹೊತ್ತು ಬರುತ್ತಿದ್ದ ಮಹಿಳೆಯರನ್ನು ತಡೆದ ಪೊಲೀಸರಿಗೆ ಸಿಕ್ಕಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
