ತಲಕಾವೇರಿ:ಜೀವನದಿ ಕಾವೇರಿ ಉಗಮ ಸ್ಥಾನ ಬ್ರಹ್ಮಕುಂಡಿಕೆಯಲ್ಲಿ ಸೋಮವಾರ ರಾತ್ರಿ 7.22ಕ್ಕೆ ಭಕ್ತರ ನಂಬಿಕೆಯ ಪವಿತ್ರ ಕಾವೇರಿ ತೀರ್ಥೋದ್ಭವವಾಯಿತು. ಭಕ್ತರ ಜಯಘೊಷದ ನಡುವೆ ಕಾವೇರಿ ತೀರ್ಥ ರೂಪಿಣಿಯಾಗಿ ನಂಬಿದ ಭಕ್ತರಿಗೆ ದರ್ಶನ ನೀಡಿದಳು.
ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಸಂಜೆ 5.30 ಗಂಟೆಯಿಂದ ಪೂಜಾ ಕೈಂಕರ್ಯ ಆರಂಭವಾಯಿತು. ಮಹಾಸಂಕಲ್ಪ, ಸಹಸ್ರನಾಮ ಅರ್ಚನೆ, ಮಂಗಳಾರತಿ, ಮಹಾಪೂಜೆ ನಡೆಯಿತು.
ನಾಡಿನ ಸರ್ವರೂ ನೆಮ್ಮದಿಯಿಂದ ಇರುವಂತೆ ತಾಯಿ ಕಾವೇರಿಯನ್ನು ಪ್ರಾರ್ಥಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಪವಿತ್ರ ಕಾವೇರಿ ತೀರ್ಥೋದ್ಭವದ ವೇಳೆ ಬ್ರಹ್ಮಕುಂಡಿಕೆ ಸನಿಹ ಇರುವ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ. ಕಾವೇರಿ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ತಾಯಿ ಕಾವೇರಿಯನ್ನು ಪ್ರಾರ್ಥಿಸಿರುವುದಾಗಿ ಹೇಳಿದರು.
ಕೋಟ್ಯಂತರ ಜನರ ಬದುಕಿಗೆ ಕಾವೇರಿ ನದಿ ಕಾರಣವಾಗಿದೆ. ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ನದಿ ಹಲವು ಜಿಲ್ಲೆಯ ಜನರ ಬದುಕು ರೂಪಿಸಿದೆ. ತಾಯಿ ಕೃಪೆಯಿಂದ ಈ ಬಾರಿ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿಲ್ಲ. ಅದೇ ರೀತಿ ಪ್ರತಿವರ್ಷ ತಾಯಿ ಕೃಪೆ ಇರಲಿ ಎಂದರು.
ಕೊಡವರ ಅಬ್ಬರ:ಸಹಸ್ರಾರು ಸಂಖ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆ- ತೊಡುಗೆಯೊಂದಿಗೆ ಆಗಮಿಸಿದ್ದ ಕೊಡವರ ಅಬ್ಬರ ಮುಗಿಲು ಮುಟ್ಟಿತು. ಕೊಡವರ ಕುಲದೇವಿ ಕಾವೇರಿ ಉಕ್ಕಿ ಬಾ ಎಂದು ಕೊಡವ ಭಾಷೆಯ ಘೊಷವಾಕ್ಯ ನಿರಂತರ ಮೊಳಗಿತು. ಭಾಗಮಂಡಲದಿಂದ ತಲಕಾವೇರಿ ಕ್ಷೇತ್ರದವರೆಗೂ 8 ಕಿಲೋ ಮೀಟರ್ ದೂರದವರೆಗೆ ಕೊಡವರು ಪಾದರಕ್ಷೆ ರಹಿತವಾಗಿ ಪಾದಯಾತ್ರೆ ಮೂಲಕ ಆಗಮಿಸಿದರು. ತಳಿಯತಕ್ಕಿ ಬೊಳಚ ಹಿಡಿದಿದ್ದ ಕೊಡವತಿಯರು ಕಾವೇರಿ ತಾಯಿ ಪರ ನಿರಂತರ ಘೊಷಣೆ ಕೂಗುವುದರ ಮೂಲಕ ಗಮನ ಸೆಳೆದರು.
ನಮ್ಮನ್ನು ಬ್ರಹ್ಮಕುಂಡಿಕೆಯತ್ತ ಬಿಡಿ ಎಂದು ಕೊಡವ ತರುಣರು ಪೊಲೀಸರೊಂದಿಗೆ ನಿರಂತರ ವಾಗ್ವಾದ ನಡೆಸಿದರು. ಕೇಸರಿ ಶಾಲು ಧರಿಸಿದ್ದವರಿಗೆ ಬ್ರಹ್ಮಕುಂಡಿಕೆ ಸನಿಹದಲ್ಲಿ ಅವಕಾಶ ನೀಡಿದಂತೆ ನಮಗೂ ಅವಕಾಶ ನೀಡಿ ಎಂದು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದರು.
ಶಾಸಕ, ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಮುಖಂಡರಾದ ಎ.ಎಸ್. ಪೊನ್ನಣ್ಣ, ಕೆ.ಪಿ.ಚಂದ್ರಕಲಾ, ಡಾ.ಮಂಥರ್​ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಎ. ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮತ್ತಿತರರು ಇದ್ದರು.
ಕಾಲಿಗೆ ಬಿದ್ದು ಕೇಳ್ತೀನಿ, ಇದೊಂದು ಸಲ ದಯವಿಟ್ಟು ಕ್ಷಮಿಸಿ!; ಅಪ್ಪು ಅಭಿಮಾನಿಗಳ ಅಬ್ಬರಕ್ಕೆ ತತ್ತರಿಸಿದ ಕಿಡಿಗೇಡಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eleven =
Remember me
