ಬೆಳಗಾವಿ:ತಹಶೀಲ್ದಾರರೊಬ್ಬರು ಚುನಾವಣಾ ಕರ್ತವ್ಯಕ್ಕೆ ತೆರಳಿದ್ದನ್ನು ತಿಳಿದು ಮನೆಗೆ ಹೊಕ್ಕಿದ್ದ ಕಳ್ಳರು 25 ತೊಲ ಚಿನ್ನ ಮಾತ್ರವಲ್ಲದೆ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ಕಳ್ಳತನ ನಡೆದಿದೆ.
ಗೋಕಾಕ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಚುನಾವಣೆ ಕರ್ತವ್ಯ ನಿಮಿತ್ತ ಅವರು ಮನೆಗೆ ಬೀಗ ಹಾಕಿ ತೆರಳಿದ್ದನ್ನು ತಿಳಿದ ಕಳ್ಳರು ಮನೆಗೆ ಹೊಕ್ಕಿದ್ದರು. ತಡರಾತ್ರಿಯಲ್ಲಿ ಕಳ್ಳರು ಬೀಗ ಒಡೆದು ಒಳಹೊಕ್ಕಿದ್ದರು. ಗೋಕಾಕದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಈ ಕಳ್ಳತನ ನಡೆದಿದೆ.
ತಹಶೀಲ್ದಾರರ ಮನೆಯಲ್ಲಿದ್ದ 25 ತೊಲ ಬಂಗಾರ, 20 ತೊಲ ಬೆಳ್ಳಿ ಹಾಗೂ 4 ಸಾವಿರ ರೂ. ನಗದನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಗೋಕಾಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದೇ ವಾರದಲ್ಲಿ ಗೋಕಾಕ್​ನಲ್ಲಿ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ರೈಲ್ವೇ ಪ್ಲ್ಯಾಟ್​ಫಾರ್ಮ್​ನಲ್ಲೇ ಬಿದ್ದಿತ್ತು 100 ಗ್ರಾಂ ಚಿನ್ನಾಭರಣವಿದ್ದ ಬಾಕ್ಸ್; ಆಮೇಲಾಗಿದ್ದೇನು?

ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 9 =
Remember me
