ಕಲಬುರಗಿ:ಖಾಕಿಯನ್ನು ಕಂಡರೆ ಕಳ್ಳರು ದೂರ ಸರಿಯುವ, ಎಚ್ಚರಿಕೆ ವಹಿಸುವ ಸಂಗತಿ ಸಾಮಾನ್ಯದ್ದು. ಆದರೆ ಇಲ್ಲೊಂದು ಕಡೆ ಇಬ್ಬರು ಪೊಲೀಸರ ಮನೆಯಲ್ಲೇ ಖದೀಮರು ಕಳ್ಳತನ ನಡೆಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಈ ಕಳವು ಪ್ರಕರಣ ನಡೆದಿದೆ.
ಕಲಬುರಗಿಯಲ್ಲಿನ ಇಬ್ಬರು ಪೊಲೀಸರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಲಬುರಗಿ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿನ ನಿವೃತ್ತ ಕೆಎಸ್‌‌ಆರ್‌ಪಿ ಪೇದೆ ಸಿದ್ದಲಿಂಗಯ್ಯ ಹಿರೇಮಠ್ ಹಾಗೂ ಎಫ್‌ಡಿಎ ಮಹಾಂತೇಶ್ ಹಂಗರಗಿ ಮನೆಯಲ್ಲಿ ಕಳ್ಳತನ ನಡೆದಿದೆ. ಮಹಾಂತೇಶ್ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಎಫ್​ಡಿಎ ಆಗಿದ್ದಾರೆ.
ಕಳ್ಳರು ಸಿದ್ದಲಿಂಗಯ್ಯ ಮನೆಯಲ್ಲಿ 10 ಗ್ರಾಂ ಚಿನ್ನ, 20 ಸಾವಿರ ನಗದು, 10 ರೇಷ್ಮೆ ಸೀರೆಯನ್ನು ಕದ್ದಿದ್ದರೆ, ಮಹಾಂತೇಶ್ ಮನೆಯಲ್ಲಿ 50 ಗ್ರಾಂ ಚಿನ್ನ, 10,000 ನಗದು ಹಾಗೂ 4 ಬೈಕ್‌ಗಳ ಪೆಟ್ರೋಲ್ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಖದೀಮರು ಕೈಚಳಕ ತೋರಿದ್ದು, ಇವರ ಕೃತ್ಯದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಾಕ್​ ವಿರುದ್ಧ ರೋಚಕ ಜಯ ಗಳಿಸಿದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು?
ಹಬ್ಬಕ್ಕೆ ಊರಿಗೆ ಹೊರಟಿದ್ದವ ರಸ್ತೆ ಗುಂಡಿಗೆ ಬಲಿ: ಹೊಂಡ ತಪ್ಪಿಸಲು ಹೋಗಿ ಬಿದ್ದ ಬೈಕ್​ ಸವಾರನ ಮೇಲೇ ಸಾಗಿದ ಲಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
