ಬೆಂಗಳೂರು:ಸೂಟು-ಬೂಟು ಹಾಕೊಂಡು ಚಿನ್ನಾಭರಣ ಮಳಿಗೆಗಳಿಗೆ ಎಂಟ್ರಿಕೊಡುತ್ತಿದ್ದ ಯುವಕ ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದೊಡ್ಡಬಳ್ಳಾಪುರ ಮೂಲದ ವಿಶಾಲ್ (25) ಬಂಧಿತ. ಆರೋಪಿಯು ಶೋಕಿ ಜೀವನ ಅಂಟಿಸಿಕೊಂಡಿದ್ದು, ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದರೂ ಲಕ್ಷಾಂತರ ರೂ. ಗಳಿಸುತ್ತಿದ್ದ. ಅದಕ್ಕಾಗಿ ಖತರ್ನಾಕ್​ ಸಂಚು ರೂಪಿಸಿದ್ದ. ಅದರಂತೆ ತನ್ನನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ. ಜ್ಯುವೆಲ್ಲರಿ ಮಳಿಗೆಗಳಿಗೆ ಹೋಗಿ, ತಾನು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಚಿನ್ನಾಭರಣ ಖರೀದಿಸುವ ಸೋಗಿನಲ್ಲಿ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ.
ವಿನಾಯಕನಗರದಲ್ಲಿನ ಗಿರವಿ ಅಂಗಡಿಯಲ್ಲಿ ಚಿನ್ನಾಭರಣ ಮಾರಾಟಕ್ಕೆ ವಿಶಾಲ್​ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಾಗಲುರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪಿಗೆಹಳ್ಳಿ, ಕೊತ್ತನೂರು, ಮಾಗಡಿ ಪೊಲೀಸ್ ಠಾಣೆ ಹಾಗೂ ತೆಲಂಗಾಣದ ನಿಜಾಮಬಾದ್, ಆಂಧ್ರಪ್ರದೇಶದ ವಿಜಯವಾಡದಲ್ಲಿ ಒಟ್ಟು 6 ಪ್ರಕರಣಗಳು ಈತನ ವಿರುದ್ಧ ಪತ್ತೆಯಾಗಿವೆ.
ಆರೋಪಿಯಿಂದ 12.80 ಲಕ್ಷ ರೂ. ಮೌಲ್ಯದ 252 ಗ್ರಾಂ ಚಿನ್ನಾಭರಣ, 2 ಮೊಬೈಲ್ ಜಪ್ತಿ ಮಾಡಲಾಗಿದೆ. ಈತ ಹಿಂದೆಯೂ ಕಳ್ಳತನದಲ್ಲಿ ಭಾಗಿಯಾಗಿದ್ದ. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ತನ್ನ ಚಾಳಿಯನ್ನು ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯೋಗೀಶ್​ಗೌಡ ಹತ್ಯೆಗೆ ಸಂಚು ರೂಪಿಸಿದ್ದೇ ಮಾಜಿ ಸಚಿವ! ಇತ್ತ ಕೊಲೆ, ಅತ್ತ ದಿಲ್ಲಿಗೆ… ಸಿಬಿಐ ವರದಿಯಲ್ಲಿದೆ ಸ್ಫೋಟಕ ರಹಸ್ಯ

ಗಂಡನ ಆಟೋದಲ್ಲಿ ಸುತ್ತುತ್ತಾಳೆ, ಕ್ಷಣಾರ್ಧದಲ್ಲಿ ಲಕ್ಷ-ಲಕ್ಷ ಹಣ ತರ್ತಾಳೆ! ಬೆಚ್ಚಿಬೀಳಿಸುತ್ತೆ ಈ ದಂಪತಿಯ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 15 =
Remember me
