ಬೆಂಗಳೂರು:ಹಲಸೂರು ಗೇಟ್​ನ ನಗರ್ತಪೇಟೆಯ ಅಂಗಡಿಯೊಂದರ ಮೇಲೆ 6 ಜನರ ಪೊಲೀಸ್​ ತಂಡ ದಾಳಿ ನಡೆಸಿದ್ದರ ಅಸಲಿಯತ್ತು ಸಿಸಿ ಕ್ಯಾಮರಾದಲ್ಲಿ ಬಯಲಾಗಿದೆ.
ಚಿನ್ನಭರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರಿ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಕಲಿ‌ ಚಿನ್ನ ಮಾರಾಟ ಮಾಡಲಾಗುತ್ತಿದೆ ಎಂದು ದಾಳಿ ನಡೆಸಿದ ತಂಡವು ಭಾರೀ ಪ್ರಮಾಣದಲ್ಲಿ ವಂಚಿಸಿ ಸಿಕ್ಕಿಬಿದ್ದಿದೆ. ಅಸಲಿಗೆ ಆ ತಂಡ ಪೊಲೀಸ್​ ಅಲ್ಲವೇ ಅಲ್ಲ.
ನಾವು ಪೊಲೀಸರು, ಅಂಗಡಿಯನ್ನು ರೇಡ್​ ಮಾಡಲು ಬಂದಿದ್ದೇವೆ ಎಂದ ಪೊಲೀಸ್​ ಸೋಗಿನ ಖದೀಮರು, ಕೈಗೆ ಸಿಕ್ಕಿದ್ದೆಲ್ಲವನ್ನೂ ಅಂದರೆ ಬರೋಬ್ಬರಿ 800 ಗ್ರಾಂ ಚಿನ್ನಾಭರಣ ಮತ್ತು ದಾಖಲೆಯನ್ನು ದೋಚಿಕೊಂಡು, ದಾಳಿ ಬಳಿಕ ಅಂಗಡಿಯ ಕೆಲಸಗಾರನನ್ನ ಜೀಪ್​ನಲ್ಲಿ ಕೂರಿಸಿಕೊಂಡು ಸ್ವಲ್ಪ ದೂರದಲ್ಲಿ ಬಿಟ್ಟು ಹೋಗಿದ್ದಾರೆ.
ದಾಳಿ ವೇಳೆ ಕೋಲ್ಕತ್ತಾದಲ್ಲಿದ್ದ ಅಂಗಡಿ ಮಾಲೀಕನಿಗೆ ಕರೆ ಮಾಡಿದ ನಕಲಿ ಪೊಲೀಸರು, ‘ನಿಮ್ಮ ಅಂಗಡಿ‌ ಮೇಲೆ ರೇಡ್ ಮಾಡಿದ್ದೇವೆ. ದಾಳಿ ವೇಳೆ ಸಿಕ್ಕ ದಾಖಲೆ ಬಗ್ಗೆ ವಿಚಾರಣೆ ಆಗಬೇಕಿದೆ. ಪೊಲೀಸ್ ಠಾಣೆಗೆ ಬನ್ನಿ’ ಎಂದಿದ್ದರು. ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದ ಗೀತಾ ಜುವೆಲ್ಲರ್​ ಮಾಲೀಕ ಕಾರ್ತಿಕ್, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಳಿ ಬಗ್ಗೆ ವಿಚಾರಿಸಿದಾಗ ಗೊತ್ತಾಯ್ತು ಅದು ನಕಲಿ ಪೊಲೀಸರ ಕೈಚಳಕ ಎಂದು.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ದೂರು ದಾಖಲಿಸಿದ್ದಾರೆ. ದರೋಡೆಗೆ ನಕಲಿ ಪೊಲೀಸರು ತಂದಿದ್ದ ಜೀಪ್ ನಂಬರ್ ಅನ್ನು ಜುವೆಲ್ಲರಿ ಮಳಿಗೆಯ ಸಿಬ್ಬಂದಿ ಹೇಳಿದ್ದು, ಇದರ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರೆಲ್ಲರೂ ನಾಗಮಂಗಲ ಮೂಲದವರು. ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಸೋಗಿನಲ್ಲಿ ಬಂದ ವಂಚಕರು ಅಂಗಡಿಯಲ್ಲಿ ಚಿನ್ನಾಭಾರಣ ದೋಚಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಗಳಿಗಾಗಿ ಕಾರುಗಳನ್ನೇ ಮಾರಾಟಕ್ಕಿಟ್ಟ ರಾಗಿಣಿ ಪೋಷಕರು! ಸಂಕಷ್ಟದಲ್ಲಿ ತಂದೆ-ತಾಯಿ…

ಅಮ್ಮ… ನಾನು ಸ್ನೇಹಿತರೊಂದಿಗೆ ಹೋಗುತ್ತಿದ್ದೇನೆ, ಮನೆಗೆ ಬರೋದು ತಡವಾಗುತ್ತೆ ಎಂದವ ಹೆಣವಾಗಿ ಬಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
