ಹುಬ್ಬಳ್ಳಿ:ಭಾನುವಾರ ರಾತ್ರಿ ಆ ಮನೆಯ ಕುಟುಂಬಸ್ಥರೆಲ್ಲರೂ ಟೆರೇಸ್​ನಲ್ಲಿ ಕೂತು ಬೆಳದಿಂಗಳಲ್ಲಿ ಊಟ ಮಾಡುತ್ತಿದ್ದರು. ಅಷ್ಟರಲ್ಲಿ ಆ ಮನೆಗೆ ಅಪರಿಚಿತ ಮಹಿಳೆ ಜತೆಗೆ ಎಂಟ್ರಿಕೊಟ್ಟ ಕಳ್ಳರ ಗ್ಯಾಂಗ್​, ದರೋಡೆಗೆ ಸಜ್ಜಾಗಿತ್ತು.
ಮನೆಯೊಳಗೆ ಯಾರೂ ಇಲ್ಲ, ಬೆಲೆಬಾಳುವ ವಸ್ತುವನ್ನೆಲ್ಲ ಲೂಟಿ ಮಾಡಿಕೊಂಡೇ ಹೋಗಬೇಕು ಎಂದು ಮನಸಲ್ಲೇ ಲೆಕ್ಕಾಚಾರ ಹಾಕಿಕೊಂಡು ಒಳ ಹೋದ ಕಳ್ಳರ ಗ್ಯಾಂಗ್ ಕ್ಷಣಾರ್ಧದಲ್ಲೇ ತಾವು ಸಿಕ್ಕಿಬೀಳುತ್ತೇವೆ ಎಂದು ಊಹಿಸಿಯೂ ಇರಲಿಲ್ಲ. ಆ ಮನೆ ಮಾಲೀಕರ ಖೆಡ್ಡಾಕ್ಕೆ ಬಿದ್ದ ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ. ಇಂತಹ ಘಟನೆ ಕೇಶ್ವಾಪುರ ಶಾಂತಿ ಕಾಲನಿಯಲ್ಲಿ ನಡೆದಿದೆ.ಇದನ್ನೂ ಓದಿರಿನಿವೃತ್ತ ಪೊಲೀಸ್​ ಅಧಿಕಾರಿಯ ಆತ್ಮಹತ್ಯೆ ಹಿಂದಿದೆ ಆ ಮಹಿಳೆ ಕೊಲೆಯ ರಹಸ್ಯ?
ಕಳ್ಳತನ ಮಾಡಲೆಂದು ಕೇಶ್ವಾಪುರ ಶಾಂತಿ ಕಾಲನಿಯ ಮನೆಯೊಂದಕ್ಕೆ ಮೂವರು ಕಳ್ಳರು ನುಗ್ಗಿದ್ದರು. ಆ ಮನೆಯವರು ಟೆರೇಸ್​ನಲ್ಲೇ ಊಟ ಮಾಡುತ್ತ ಕುಳಿತಿದ್ದರು. ಕಳ್ಳಿ ಜತೆಗೆ ಮತ್ತಿಬ್ಬರು ಕಳ್ಳತನ ಮಾಡುವುದನ್ನ ಗಮನಿಸಿದ ಕುಟುಂಬದ ಸದಸ್ಯನೊಬ್ಬ ಹೊರಗಿನಿಂದ ಬಾಗಿಲು ಹಾಕಿ ಕೂಡಿಹಾಕಿದ್ದ.
ಪೊಲೀಸರಿಗೆ ವಿಷಯ ತಿಳಿಸಿದ ಕುಟುಂಬದವರು ಮತ್ತು ಸ್ಥಳಿಯರು ಧೈರ್ಯ ಮಾಡಿ ಬಾಗಿಲು ತೆಗೆದು ಕಳ್ಳರಿಗೆ ಧರ್ಮದೇಟು ಕೊಟ್ಟು ಮುಗಿಸಿದ್ದರು ಎನ್ನಲಾಗಿದೆ. ಸಿಕ್ಕಿಬಿದ್ದ ಮೂವರೂ ಇಲ್ಲಿಯ ಈಶ್ವರ ನಗರದವರು. ಕಳ್ಳರನ್ನು ಹಿಡಿದವರು ದೂರು ಕೊಡಲು ಠಾಣೆಗೆ ಬಂದಿಲ್ಲ. ಈ ಮಧ್ಯೆ, ಸಿಕ್ಕಿಬಿದ್ದವರು ತಾವು ಕಳ್ಳರಲ್ಲ; ಕೂಲಿ ಕೆಲಸ ಮಾಡುವ ಬಡಪಾಯಿಗಳು. ಕೆಲವರು ತಮ್ಮ ಮೇಲೆ ಹಲ್ಲೆ ಮಾಡಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + four =
Remember me
