ದೊಡ್ಡಬಳ್ಳಾಪುರ:ಮಗ್ಗದ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ಮೌಲ್ಯದ ಮಗ್ಗದ ಸಾಮಗ್ರಿಗಳನ್ನು ಕಳುವು ಮಾಡಿರುವ ಘಟನೆ ನಗರದ ಮುಕ್ತಾಂಭಿಕಾ ಬಡಾವಣೆಯ ಬಳಿ 4ನೇ‌ ಕ್ರಾಸ್ ನಲ್ಲಿ ಮಧ್ಯರಾತ್ರಿ ನಡೆದಿದೆ.
ಪ್ರಶಾಂತ್ ರಾವ್ ಎಂಬುವರ ಮಗ್ಗದ ಮನೆಯ ಬಾಗಿಲನ್ನು ಸಲಾಕೆಗಳಿಂದ ಸುಮಾರು 15 ಸಾವಿರ ಮೌಲ್ಯದ ಮಗ್ಗದ ಸಾಮಾಗ್ರಿಗಳನ್ನು ದೋಚಿದ್ದಾರೆ. ಕಳ್ಳತನ ಕೃತ್ಯದಲ್ಲಿ ಸುಮಾರು 3-4 ಮಂದಿ ಕಳ್ಳರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಸೀರೆ‌ ಬಾರ್ಡರ್ ಜರಿಯನ್ನು ತಯಾರಿಸಲು ಬಳಸುವ ಪ್ರತಿಒಯೊಂದು ಕೋನ್ ಕೂಡ ಸುಮಾರು 15 ರಿಂದ 20 ಸಾವಿರ ಬೆಲೆಬಾಳುತ್ತದೆ. ಅಂತಹ 8 ಕೋನ್​ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ,
ಮೂರಂತಸ್ಥಿನ ಮನೆಯಲ್ಲಿ ತಳ ಮಹಡಿಯಲ್ಲಿ ಮಗ್ಗದ ಕೆಲಸ ಮಾಡಲಾಗುತ್ತಿತ್ತು. ಮೇಲ್ಮಹಡಿಯಲ್ಲಿ ಮಾಲೀಕರು ವಾಸವಿದ್ದರು. ಇಂದು ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಮಗ್ಗದ ಮಾಲೀಕರಾದ ಪ್ರಶಾಂತ್ ದೊಡ್ಡಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
