ಚಿಕ್ಕಮಗಳೂರು:ನಗರದ ಎಐಟಿ ಸರ್ಕಲ್ ಸಮೀಪದಲ್ಲಿರುವ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡರ ಮನೆಗೆ ಸಿನಿಮಾ ಸ್ಟೈಲ್​ನಲ್ಲಿ ಚಾಕು-ಚೂರಿ ಹಿಡಿದು ನುಗ್ಗಿದ್ದ ಮುಸುಕುಧಾರಿಗಳಿಬ್ಬರು ಮಹಿಳೆಯನ್ನ ಕಟ್ಟಿಹಾಕಿ ದರೋಡೆಗೆ ಯತ್ನಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.
ಕಳ್ಳರು ದರೋಡೆ ಮಾಡುತ್ತಿರುವ ವೇಳೆ ಆ ಮಹಿಳೆಯ ಮಗ ಮನೆಗೆ ಬರುತ್ತಿದ್ದಂತೆ ಕೈಯಲ್ಲೇ ಚೂರಿ ಹಿಡಿದುಕೊಂಡು ಕಳ್ಳರಿಬ್ಬರೂ ಹೊರ ಬಂದು ಬೈಕ್​ ಹತ್ತಿ ಎಸ್ಕೇಪ್​ ಆಗುತ್ತಿದ್ದರು. ರಸ್ತೆಬದಿ ಬೈಕ್​ ಏರಿ ಕಳ್ಳರು ಎಸ್ಕೇಪ್​ ಆಗಬೇಕು ಅನ್ನುವಷ್ಟರಲ್ಲಿ ಅಗ್ನಿಶಾಮಕ ವಾಹನ ಆಪದ್ಭಾಂದವನಂತೆ ಬಂದಿದ್ದು, ಸಿನಿಮಾ ಸ್ಟೈಲ್​ನಲ್ಲಿ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಅಷ್ಟೆ ಅಲ್ಲ, ಸಂಬಂಧಿಕರಿಂದಲೇ ದರೋಡೆ ಯತ್ನ ನಡೆದಿದೆ.ಇದನ್ನೂ ಓದಿರಿಪ್ರೊ.ಭಗವಾನ್​ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾಗೆ ಸಂಕಷ್ಟ!
ಬೆಂಕಿ ನಂದಿಸಲು ಅಗ್ನಿಶಾಮಕ ವಾಹನ ವೇಗವಾಗಿ ಚಲಿಸುತ್ತಿತ್ತು. ಅಷ್ಟರಲ್ಲಿ ರಸ್ತೆಬದಿ ಚಾಕು ಹಿಡಿದು ನಿಂತಿದ್ದ ಕಳ್ಳರನ್ನ ಕಂಡ ವಾಹನದ ಚಾಲಕ, ಕಳ್ಳರಿದ್ದ ಬೈಕ್ ಅನ್ನು ಅಡ್ಡಗಟ್ಟಿ ಡಿಕ್ಕಿ ಹೊಡೆದಿದ್ದಾರೆ. ಅಷ್ಟರಲ್ಲಿ ಎಸ್ಕೇಪ್ ಆಗುವ ಕಳ್ಳರ ಪ್ಲಾನ್ ಉಲ್ಟಾ ಆಗಿದೆ. ಸುತ್ತಲೂ ಜಮಾಯಿಸಿದ ಸ್ಥಳೀಯರು ಕಳ್ಳರತ್ತ ಕಲ್ಲುಗಳನ್ನ ತೂರುತ್ತಿದ್ದರು. ಆದರೂ ತಪ್ಪಿಸಿಕೊಳ್ಳಲು ಓಡಿದ್ದು, ಹಿಂಬಾಲಿಸಿದ ಸ್ಥಳೀಯರು ಮತ್ತು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾದರು.
ಚಿಕ್ಕಮಗಳೂರು ನಗರದ ಮೋಹನ್​ ಮತ್ತು ಸಚಿನ್​ ಬಂಧಿತ ಆರೋಪಿಗಳು. ಸಚಿನ್​ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ಸಂಬಂಧಿ ಸಚಿನ್​. ಈತನ ಸ್ನೇಹಿತ ಮೋಹನ್​. ಸಚ್ಚಿನ್ ಮತ್ತು ಚಂದ್ರೇಗೌಡ ಕುಟುಂಬದೊಂದಿಗೆ ಓಡಾನಾಟ ಇತ್ತು. ಇವರ ನಡುವೆ ಹಣ ಅಥವಾ ಆಸ್ತಿ ವಿವಾದ ಇರುವ ಶಂಕೆ ವ್ಯಕ್ತವಾಗಿದೆ. ಒಟ್ಟು ಮೂವರು ದರೋಡೆಗೆ ಬಂದಿದ್ದ ಅನುಮಾನವಿದ್ದು, ಮತ್ತೊಬ್ಬನಿಗಾಗಿ ಬಲೆ ಬೀಸಲಾಗಿದೆ.
ಹಾಡಹಗಲೇ ಕೋರ್ಟ್​ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ
ನೀವು ಶಾಸಕರಾದ್ರೆ ನಮಗೇನ್ರಿ? ಸುಮ್ಮನೆ ಹಣ ಕಟ್ಟಿ… ಶಾಸಕನಿಗೆ ಟೋಲ್​ ಸಿಬ್ಬಂದಿ ಧಮ್ಕಿ!
ಪ್ರೊ.ಭಗವಾನ್​ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾಗೆ ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nine =
Remember me
