ಚಿಕ್ಕಮಗಳೂರು:ನಗರದ ಎಐಟಿ ಸರ್ಕಲ್ ಸಮೀಪದ ಇಂದು ಬೆಳಗ್ಗೆ ಸಿನಿಮಾ ಸ್ಟೈಲ್​ನಲ್ಲಿ ಚಾಕು-ಚೂರಿ ಹಿಡಿದು ಬಂದ ಕಳ್ಳರಿಬ್ಬರು ಸಿಕ್ಕಿಬಿದ್ದದ್ದೇ ರೋಚಕ.
ಚಾಕು-ಚೂರಿ ಹಿಡಿದು ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡರ ಮನೆಗೆ ನುಗ್ಗಿದ ಮುಸುಕುಧಾರಿಗಳಿಬ್ಬರು ಮನೆಯ ಮಹಿಳೆಯನ್ನ ಕಟ್ಟಿಹಾಕಿ ದರೋಡೆ ಮಾಡುತ್ತಿದ್ದರು. ಅಷ್ಟರಲ್ಲಿ ಮಹಿಳೆಯ ಮಗ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ದರೋಡೆ ಯತ್ನ ಬಯಲಾಗಿದೆ. ಕೂಡಲೇ ಆತ ಸ್ಥಳೀಯರನ್ನ ಕೂಗಿಕೊಂಡಿದ್ದು, ಹತ್ತಿರ ಬಂದರೆ ಚುಚ್ಚುವಂತೆ ಕೈಯಲ್ಲೇ ಚೂರಿ ಹಿಡಿದುಕೊಂಡು ಕಳ್ಳರಿಬ್ಬರೂ ಹೊರ ಬಂದು ಬೈಕ್​ ಹತ್ತಿ ಎಸ್ಕೇಪ್​ ಆಗಲು ಮುಂದಾದರು.ಇದನ್ನೂ ಓದಿರಿಹಾಡಹಗಲೇ ಕೋರ್ಟ್​ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ
ಅಷ್ಟರಲ್ಲಿ ಸ್ಥಳಕ್ಕೆ ಸೈರನ್​ ಕೂಗಿಕೊಂಡು ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುತ್ತಿದ್ದಂತೆ ಬೈಕ್​ ಬಿಟ್ಟು ಚೂರಿ ಹಿಡಿದುಕೊಂಡೇ ಎಸ್ಕೇಪ್​ ಆಗಲು ಕಾಲ್ಕಿತ್ತರು. ದರೋಡೆಕೋರರನ್ನ ಹಿಂಬಾಲಿಸಿದ ಸ್ಥಳೀಯರು ಕಲ್ಲು ತೂರಾಟ ನಡೆಸಿದರು. ಬೆನ್ನುಬಿದ್ದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರು ತಪ್ಪಿಸಿಕೊಳ್ಳಲು ಹೋಗಿ ಸಿಕ್ಕಿಬಿದ್ದ ದೃಶ್ಯ ವೈರಲ್​ ಆಗಿದೆ. ಹಾಡಹಗಲೇ ದರೋಡೆಗೆ ಯತ್ನಿಸಿರುವ ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಹಾಡಹಗಲೇ ಕೋರ್ಟ್​ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ

ನೀವು ಶಾಸಕರಾದ್ರೆ ನಮಗೇನ್ರಿ? ಸುಮ್ಮನೆ ಹಣ ಕಟ್ಟಿ… ಶಾಸಕನಿಗೆ ಟೋಲ್​ ಸಿಬ್ಬಂದಿ ಧಮ್ಕಿ!

ಪ್ರೊ.ಭಗವಾನ್​ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾಗೆ ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
