ಬೆಂಗಳೂರು: ಕರೊನಾ ಭೀತಿಯಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಬಸ್ ಸೇವೆ ಸೋಮವಾರವೂ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರ ಜತೆಗೆ ಮಾ.24ರಿಂದ ಅಂತಾರಾಜ್ಯ ಮತ್ತು ಲಾಕ್​ಡೌನ್ ಆಗಿರುವ 9 ಜಿಲ್ಲೆಗಳಿಗೆ ಅಂತರ್ ಜಿಲ್ಲಾ ಸಾರಿಗೆ ವ್ಯವಸ್ಥೆ ರದ್ದುಗೊಳಿಸಲಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್​ಗಳು ಸೋಮವಾರ ಕಾರ್ಯನಿರ್ವಹಿಸದಂತೆ ಸರ್ಕಾರ ಆದೇಶಿಸಿದೆ. ಮಂಗಳವಾರದಿಂದ ರಾಜ್ಯದಿಂದ ಹೊರರಾಜ್ಯಗಳಿಗೆ ಸಂಚರಿಸುವ ಬಸ್​ಗಳ ಸೇವೆಯನ್ನೂ ಸ್ಥಗಿತಗೊಳಿಸಲಾಗುತ್ತದೆ. ಹಾಗೆಯೇ, ಲಾಕ್​ಡೌನ್ ಮಾಡಲಿರುವ 9 ಜಿಲ್ಲೆಗಳಿಗೆ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. ಬಸ್ ಮತ್ತು ಸಾರಿಗೆ ವಾಹನಗಳು ಆ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಹಾಗೂ ಅಲ್ಲಿಂದ ಬೇರೆ ಜಿಲ್ಲೆಗೆ ಹೋಗುವಂತಿಲ್ಲ. ಆದರೆ, ಕೆಲವೊಂದು ಜಿಲ್ಲೆಗಳಿಗೆ ಲಾಕ್​ಡೌನ್ ಆಗಿರುವ ಜಿಲ್ಲೆಗಳ ಮೂಲಕವೇ ಸಂಚರಿಸಬೇಕಿದೆ. ಆ ಮಾರ್ಗ ತಪ್ಪಿಸಿ ಬೇರೆ ಯಾವ ಮಾರ್ಗದಲ್ಲಿ ಬಸ್​ಗಳು ತೆರಳಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದು, ಆ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಸೋಮವಾರ ಆ ಬಗ್ಗೆ ಪ್ರಕಟಿಸಲಾಗುತ್ತದೆ.
ಎಸಿ ಬಸ್​ಗಳಿಗೆ ಬ್ರೇಕ್: ಸರ್ಕಾರದ ಆದೇಶದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ 18 ಸಾವಿರಕ್ಕೂ ಹೆಚ್ಚಿನ ಬಸ್ ಸೋಮವಾರ ಸ್ಥಗಿತಗೊಳ್ಳುತ್ತಿವೆ. ಅದರ ಜತೆಗೆ ಮಂಗಳವಾರದಿಂದ ಮಾ. 31ರವರೆಗೆ ಅಂತರ ರಾಜ್ಯ ಬಸ್​ಗಳು, ಹವಾನಿಯಂತ್ರಿತ ಬಸ್​ಗಳ ಸೇವೆಯೂ ನೀಡದಂತೆ ತಿಳಿಸಲಾಗಿದೆ. ಹೀಗಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಶೇ. 50 ಬಸ್​ಗಳು ಮಾತ್ರ ಮಂಗಳವಾರದಿಂದ ಸೇವೆ ನೀಡಲಿವೆ.
ಖಾಸಗಿ ವಾಹನಗಳ ಸಂಚಾರ: ಖಾಸಗಿ ಬಾಡಿಗೆ ವಾಹನಗಳು, ಒಲಾ, ಉಬರ್ ಸೇರಿ ಆಪ್ ಆಧಾರಿತ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿಲ್ಲ. ಹೀಗಾಗಿ ಅವು ಎಂದಿನಂತೆ ಸಂಚರಿಸಲಿವೆ.
2,620 ಬಸ್​ಗಳ ಸಂಚಾರವಿಲ್ಲ: ಹೊರರಾಜ್ಯಗಳಿಗೆ ಸೇವೆ ಸ್ಥಗಿತಗೊಳಿಸಿರುವುದರಿಂದ ಬಿಎಂಟಿಸಿ ಹೊರತುಪಡಿಸಿ ಉಳಿದ 3 ನಿಗಮಗಳ 2,620 ಬಸ್​ಗಳ ಸೇವೆ ಸ್ಥಗಿತಗೊಳುತ್ತಿದೆ.
17.12 ಕೋಟಿ ರೂ. ಆದಾಯ ಖೋತಾ: ಶನಿವಾರ ಒಂದೇ ದಿನ 2,532 ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ನಿಗಮಕ್ಕೆ 3.77 ಕೋಟಿ ರೂ. ಆದಾಯ ನಷ್ಟವಾಗಿದೆ. ಮಾ.1ರಿಂದ 21ರವರೆಗೆ ಪ್ರಯಾಣಿಕರ ಸಂಖ್ಯೆ ಕುಸಿತದಿಂದ ನಿಗಮಕ್ಕೆ ಒಟ್ಟು 28 ಕೋಟಿ ರೂ. ಆದಾಯ ಖೋತವಾಗಿದೆ.
ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಕೊನೇ ಪರೀಕ್ಷೆ ಮುಂದೂಡಿಕೆ; ಏಪ್ರಿಲ್​ 1ರ ನಂತರ ಹೊಸ ದಿನಾಂಕ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
