ಬೆಂಗಳೂರು:ಕಾಂಗ್ರೆಸ್ಸಿಗರು ದೇಶದಲ್ಲಿ ಅರಾಜಕತೆಯನ್ನು ಹುಟ್ಟುಹಾಕುವ ಸಂಚು ನಡೆಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ, ಇದು ಆತಂಕಕಾರಿ, ಇದು ಪ್ರಜಾಪ್ರಭುತ್ವ- ಸಂವಿಧಾನ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೃತ್ಯ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಇದನ್ನೂ ಓದಿ:Paris Olympics 2024 : ಹಾಕಿಯಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ!
ಮಂಡ್ಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾ ರೀತಿಯ ಸಂಘರ್ಷ ಭಾರತದಲ್ಲೂ ನಡೆಯುವ ದಿನ ದೂರವಿಲ್ಲ. ಬಾಂಗ್ಲಾದಲ್ಲಿ ಹೇಗೆ ಸಂಸತ್ತಿಗೆ ನುಗ್ಗಿದರೋ ಹಾಗೇ ಭಾರತದಲ್ಲೂ ನುಗ್ಗುತ್ತಾರೆ. ಬಾಂಗ್ಲಾ ಪ್ರಧಾನಿಗೆ ಯಾವ ರೀತಿ ಆಗಿದೆಯೋ ಅದೇ ರೀತಿ ಭಾರತದ ಪ್ರಧಾನಿಗೂ ಆಗಲಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಖುರ್ಷಿದ್ ಆಲಂ ಖಾನ್ ಮತ್ತು ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮ ಅವರ ಹೇಳಿಕೆ ಕಾಕತಾಳೀಯವಲ್ಲ ಎಂದು ಅನಿಸುತ್ತಿಲ್ಲ ಎಂದು ಹೇಳಿದರು.
ಖುರ್ಷಿದ್ ಆಲಂ ಖಾನ್ ಮತ್ತು ಸಜ್ಜನ್ ಸಿಂಗ್ ವರ್ಮ ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಅವರನ್ನು ತನಿಖೆಗೆ ಒಳಪಡಿಸಬೇಕು. ಇದು ಕಾಂಗ್ರೆಸ್ ಅಜೆಂಡವೇ ಅಥವಾ ಅವರ ವೈಯಕ್ತಿಕ ಹೇಳಿಕೆಯೇ ಎಂಬುದನ್ನು ರಾಹುಲ್ ಗಾಂಧಿಯವರು ಮತ್ತು ಎಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ವ್ಯಕ್ತಿಗತ ಹೇಳಿಕೆ ಆಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಭಾರತದಲ್ಲೂ ಇಂಥ ಕುಕೃತ್ಯ ನಡೆಸುವ ಸಂಚು:ನನಗೆ ಬಂದ ಮಾಹಿತಿ ಪ್ರಕಾರ ಸಾಮೂಹಿಕವಾಗಿ ಬೇರೆ ಬೇರೆ ರೀತಿಯ ಚಳವಳಿಗಳನ್ನು ದೇಶದ ಉದ್ದಗಲಕ್ಕೂ ಸಂಘಟಿಸಿ ಭಾರತದಲ್ಲೂ ಇಂಥ ಕುಕೃತ್ಯ ನಡೆಸುವ ಸಂಚು ನಡೆಸಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
1947ರಲ್ಲಿ ಭಾರತ ವಿಭಜನೆ ಆಗಿತ್ತು. ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಜನಸಂಖ್ಯೆ ಶೇ.28ರ ಹತ್ತಿರದಲ್ಲಿತ್ತು. ಬಾಂಗ್ಲಾ ದೇಶದಲ್ಲಿದ್ದ ಮುಸ್ಲಿಮೇತರರ ಜನಸಂಖ್ಯೆ ಸುಮಾರು ಶೇ.42ರಷ್ಟಿತ್ತು. ಇವತ್ತು ಬಾಂಗ್ಲಾದಲ್ಲಿ ಅವರ ಸಂಖ್ಯೆ ಶೇ.8 ಆಗಿದ್ದರೆ, ಪಾಕಿಸ್ತಾನದಲ್ಲಿ ಶೇ.3 ಮಾತ್ರ. ಉಳಿದವರು ಏನಾದರು? ಅವರಿಗೆ ಅಸುರಕ್ಷತೆಯ ವಾತಾವರಣ ಉಂಟಾಯಿತೇ? ಕೆಲವರು ಹತ್ಯೆಗೆ ಒಳಗಾದರು, ಕೆಲವರು ಭಯದಿಂದ ಓಡಿಬಂದರು, ಇನ್ನೂ ಹಲವರು ಮತಾಂತರಗೊಂಡರು. ಅದೇ ಭಾರತದಲ್ಲಿ 1947ರಲ್ಲಿ ಶೇ.8ರಿಂದ 9 ರಷ್ಟು ಧಾರ್ಮಿಕ ಅಲ್ಪಸಂಖ್ಯಾತರು ಇದ್ದರು. ಈಗ ಶೇ 22-23 ತಲುಪಿದ್ದಾರೆ. ಇಲ್ಲಿ ಏರುಗತಿಯ ಬೆಳವಣಿಗೆ, ಅಲ್ಲಿ ಸಮಗ್ರ ಕುಸಿತ ಎಂದು ವಿಶ್ಲೇಷಿಸಿದರು.
ಕೇಂದ್ರ ಸರ್ಕಾರವನ್ನು ಬೀಳಿಸುವ ಸಂಚು ನಡೆದಿದೆ:ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಜನರಿಂದ ಮತ ಪಡೆದು ಆಯ್ಕೆಯಾದ ಸರ್ಕಾರವನ್ನು ಬೀಳಿಸುವ ಸಂಚು ಬಹಳ ಹಿಂದೆಯೂ ನಡೆದಿತ್ತು. ಇದು ಪೌರತ್ವ ಕೊಡುವ ಕಾಯ್ದೆ, ಪೌರತ್ವ ಕಿತ್ತುಕೊಳ್ಳುವುದಿಲ್ಲ ಎಂದು ಹೇಳಿದ್ದರೂ ಸಿಎಎ ವಿರೋಧಿಸಿ ಪ್ರತಿಭಟನೆ, ಚಳವಳಿ ನಡೆಸಿದ್ದರು. ಬಾಂಗ್ಲಾ, ಅಪ್ಘಾನಿಸ್ತಾನ, ಪಾಕಿಸ್ತಾನದಿಂದ ಧಾರ್ಮಿಕ ಕಾರಣದಿಂದ ದೌರ್ಜನ್ಯಕ್ಕೆ ಒಳಗಾಗಿ ದೇಶ ತೊರೆದು ಭಾರತಕ್ಕೆ ಬಂದಿದ್ದಾರೋ ಆ ಜನರಿಗೆ ಪೌರತ್ವ ಕೊಡುವ ಕಾಯ್ದೆ ಎಂದು ಸ್ಪಷ್ಟಪಡಿಸಿದ್ದರೂ ಸುಳ್ಳು ಸುದ್ದಿ ಹರಡಿಸಲಾಗಿತ್ತು. ಮುಸಲ್ಮಾನರ ಪೌರತ್ವ ಕಿತ್ತುಕೊಂಡು ದೇಶದಿಂದ ಹೊರಗೆ ಹಾಕುತ್ತಾರೆಂಬ ಸುಳ್ಳು ಸುದ್ದಿ ಹರಡಿಸಲಾಗಿತ್ತು ಎಂದು ತಿಳಿಸಿದರು.
ದಲ್ಲಾಳಿಗಳ ಕಪಿಮುಷ್ಟಿಯಿಂದ ಮಾರುಕಟ್ಟೆಯನ್ನು ಮುಕ್ತಗೊಳಿಸುವ, ರೈತರ ನೆರವಿಗೆ ಬರುವ ಕೃಷಿ ಕಾಯ್ದೆ ತಂದಾಗ ಕೂಡ ರೈತ ಚಳವಳಿ ಹೆಸರಿನಲ್ಲಿ ಕೆಂಪುಕೋಟೆಯ ಮೇಲೆ ಖಲಿಸ್ಥಾನ್ ಧ್ವಜ ಹಾರಿಸಿದ್ದರು. ಆ ಸಂದರ್ಭದಲ್ಲೂ ಸಂಸತ್ತಿಗೆ ನುಗ್ಗುವ, ಅರಾಜಕತೆ ಸೃಷ್ಟಿಸುವ ಸಂಚು ನಡೆದಿತ್ತು ಎಂದು ತಿಳಿಸಿದರು.
ಈಚೆಗೆ ಇಂಗ್ಲೆಂಡಿಗೆ ಹೋಗಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಲ್ಲಿ ನಡೆದ ಸಭೆಯಲ್ಲಿ ವಿದೇಶಿ ಶಕ್ತಿಗಳ ಮಧ್ಯಪ್ರವೇಶಕ್ಕೆ ಆಹ್ವಾನ ಕೊಟ್ಟಿದ್ದರು. ಭಾರತದ ಸರ್ವಾಧಿಕಾರ ಕೊನೆಗಾಣಿಸಲು ವಿದೇಶಿ ಶಕ್ತಿಗಳ ಮಧ್ಯಪ್ರವೇಶಕ್ಕೆ ಕೋರಿದ್ದರು. ಇದಾದ ಬಳಿಕ ಚುನಾಯಿತ ಸರ್ಕಾರಗಳನ್ನು ಬುಡಮೇಲು ಮಾಡುವ ತಜ್ಞ ಎನಿಸಿಕೊಂಡ ಹಾಗೂ ಹಣಬಲ, ನೀತಿಯ ಕಾರಣದಿಂದ ಕುಖ್ಯಾತಿ ಪಡೆದ ಜಾರ್ಜ್ ಸೊರೊಸ್ ಅವರ ಹೇಳಿಕೆ ಗಮನಿಸಿದಾಗ ನಮ್ಮ ದೇಶದಲ್ಲೂ ಅರಾಜಕತೆಯ ಸಂಚು ನಡೆಸಿದ್ದಾಗಿ ಅನಿಸುತ್ತದೆ ಎಂದು ಆರೋಪಿಸಿದರು.
ಭಾರತದ ಇಸ್ಲಾಮೀಕರಣದ ಅಜೆಂಡ ಇವತ್ತಿನದಲ್ಲ. 8ನೇ ಶತಮಾನದಲ್ಲಿ ಗಜ್ವಾ ಇ ಹಿಂದ್ ಫತ್ವಾ ಹೊರಡಿಸಿದ್ದರು. ಬಳಿಕ ಭಾರತದ ಇಸ್ಲಾಮೀಕರಣದ ಅಜೆಂಡ ಇಟ್ಟುಕೊಂಡು ನಿರಂತರ ಆಕ್ರಮಣಗಳು ನಡೆದಿದ್ದವು. ನೂರಕ್ಕೆ ನೂರು ಬೌದ್ಧ ಮತ್ತು ಹಿಂದೂ ಅನುಯಾಯಿಗಳಿದ್ದ ಗಾಂಧಾರ ಇವತ್ತು ಅಪಘಾನಿಸ್ತಾನವಾಗಿ ಪರಿವರ್ತನೆಗೊಂಡಿತು. ಅದರ ವಿಸ್ತೃತ ರೂಪವೇ ಪಾಕಿಸ್ತಾನ. ಗಜ್ವಾ ಇ ಹಿಂದ್ ವಿಸ್ತರಣೆ ಸ್ವತಂತ್ರ ಭಾರತದಲ್ಲೂ ನಿಂತಿಲ್ಲ ಎಂದರು.
ಕಾಶ್ಮೀರದಲ್ಲಿ ಯಾಕೆ ಗಲಭೆ, ಸೈನಿಕರ ಮೇಲೆ ಕಲ್ಲೆಸೆತ ಯಾಕಿದೆ? ಭಯೋತ್ಪಾದನಾ ಚಟುವಟಿಕೆಗಳು ಯಾಕಿವೆ? ಅದೆಲ್ಲಕ್ಕೂ ಗಜ್ವಾ ಇ ಹಿಂದ್ ಕಾರಣ ಎಂದು ವಿಶ್ಲೇಷಿಸಿದರು. ಮಲಪ್ಪುರಂನಲ್ಲಿ ಒಬ್ಬ ಹಿಂದೂ, ಅಂಗಡಿ ಹೊಂದಿ ನೆಮ್ಮದಿಯಿಂದ ಬದುಕುವ ಸ್ಥಿತಿ ಇಲ್ಲ ಎಂದು ನುಡಿದರು.ಇದು ನಮಗೆ ಎಚ್ಚರಿಕೆಯ ಗಂಟೆ. ದೇಶಹಿತದ, ಹಿಂದುತ್ವದ ರಾಜಕಾರಣ ಇಂದಿನ ಅಗತ್ಯ. ಆಗ ಮಾತ್ರ ದೇಶ ಉಳಿಯುತ್ತದೆ. ಆಗ ಮಾತ್ರ ಡಾ.ಅಂಬೇಡ್ಕರರ ವಿಚಾರಧಾರೆಗೆ ಬೆಲೆ ಲಭಿಸಲು ಸಾಧ್ಯ ಎಂದು ಅವರು ತಿಳಿಸಿದರು.
Paris Olympics 2024 : ಹಾಕಿಯಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + six =
Remember me
