ಬೆಂಗಳೂರು:ನಿಮ್ಮಲ್ಲಿ ಅನೇಕರು ‘ಕೆಜಿಎಫ್​’ ಸಿನಿಮಾ ನೋಡಿ ಫುಲ್ ಫಿದಾ ಆಗಿರುತ್ತೀರಿ. ಈಗ ಬೆಂಗಳೂರಿನ ಸಹಕಾರನಗರದಲ್ಲಿ ಕೆಜಿಎಫ್​ನ ನರಾಚಿ ಮಾದರಿಯಲ್ಲೇ ಹೋಟೆಲ್​ ಒಂದನ್ನು ನಿರ್ಮಿಸಲಾಗಿದೆ. ಇದರ ಹೆಸರು ಕೂಡ ಕೆಜಿಎಫ್​ ಎಂದೇ! ಆದರೆ ಒಂದೇ ವ್ಯತ್ಯಾಸ. ಸಿನಿಮಾದ ಫುಲ್​ ಪಾರ್ಮ್​ ‘ಕೋಲಾರ ಗೋಲ್ಡ್​ ಫೀಲ್ಡ್’​ ಎಂದಾದರೆ ಹೋಟೆಲ್​ನ ಕೆಜಿಏಫ್​ ಫುಲ್​ಫಾರ್ಮ್​ ‘ಕನ್ನಡಿಗಾಸ್​ ಗೋಲ್ಡನ್​ ಫುಡ್​’ ಎಂದು.
ಇಲ್ಲಿ ನರಾಚಿಯ ಮುಖ್ಯದ್ವಾರವನ್ನೇ ಹೋಲುವ ರೀತಿಯಲ್ಲಿ ಆರ್ಟ್‌ ವರ್ಕ್‌ ಮಾಡಲಾಗಿದೆ. ಒಳಾಂಗಣ ವಿನ್ಯಾಸವೂ ನರಾಚಿ ಮಾದರಿಯಲ್ಲೇ ಇದೆ. ಇಲ್ಲಿ ಸುಮಾರು 200 ಆಸನಗಳ ವ್ಯವಸ್ಥೆ ಇದ್ದು ಬೆಂಗಳೂರಿನ ಸಹಕಾರನಗರದಲ್ಲಿ ಈ ಹೊಟೇಲ್‌ ತಲೆ ಎತ್ತಿದೆ. ಈ ಹೋಟೆಲ್​ ವಿನ್ಯಾಸಕ್ಕೆ ನೋಡುಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಬೃಹತ್‌ ಗೋಡೆ, ಗೋಡೆಗೆ ಕಲ್ಲುಗಳ ರೀತಿಯ ಕೆತ್ತನೆ. ದೊಡ್ಡದಾದ ಮುಖ್ಯದ್ವಾರ, ಇವೆಲ್ಲವೂ ಥೇಟ್‌ ‘ಕೆಜಿಎಫ್‌’ನ ನರಾಚಿಯನ್ನೇ ಹೋಲುತ್ತಿದೆ. ಇಲ್ಲಿ ಅನೇಕ ಬಗೆಯ ರುಚಿ ಶುಚಿಯಾದ ತಿಂಡಿ ತಿನಸುಗಳೂ ಸಿಗಲಿವೆ.
ಸ್ಥಳ: ನಂ.15-16, 5ನೇ ಮುಖ್ಯರಸ್ತೆ, ಶಾಂತಿವನ, ಸಹಕಾರ ನಗರ, ಸ್ಟೆರ್ಲಿಂಗ್ ಹೈಟ್ಸ್ ಅಪಾರ್ಟ್ಮೆಂಟ್ ಪಕ್ಕ. ಬೆಂಗಳೂರು-92
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
