ಮೈಸೂರು:ಆರ್.ಟಿ.ನಗರದಲ್ಲಿ ಮಂಗಳೂರಿನ ದೈವಗಳು ಗುಡಿಗಳು ತಲೆ ಎತ್ತಿದ್ದು, ಜನರ ನಂಬಿಕೆಯಾದ ಕೊರಗಜ್ಜ ದೈವದ ಹೆಸರಿನಲ್ಲಿ ದಂಧೆ ನಡೆಯುತ್ತಿದ್ದೆಯಾ ಎಂಬ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವ ಕೊರಗಜ್ಜನ ದೈವಸ್ಥಾನದ ಪಕ್ಕದಲ್ಲಿಯೇ, ಇದೀಗ ದೈವ ರಾಜ ಗುಳಿಗ ಹೆಸರಿನಲ್ಲಿ ಮತ್ತೊಂದು ದೈವಸ್ಥಾನ ನಿರ್ಮಾಣವಾಗಿದೆ.
ಇದಲ್ಲದೆ ದೈವಸ್ಥಾನದ ಟ್ರಸ್ಟ್​ ಸದಸ್ಯರಲ್ಲಿಯೇ ಹಣಕ್ಕಾಗಿ ಕಿತ್ತಾಟ ಆರಂಭವಾಗಿದ್ದು, ದೈವಸ್ಥಾನದ ಅರ್ಚಕ ಹುಂಡಿಯನ್ನು ತನ್ನ ಮನೆಗೆ ಕೊಂಡೊಯ್ದಿರುವ ಘಟನೆ ನಡೆದಿದೆ. ಅಲ್ಲದೆ, ದೈವಸ್ಥಾನದ ಅರ್ಚಕ ಹಾಗೂ ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ ನಡೆದಿದ್ದು, ಅರ್ಚಕ ತೇಜುಕುಮಾರ್​ಗೆ ಅಧ್ಯಕ್ಷ ಬಂಗಾರಪ್ಪ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
ಸದ್ಯ ಅರ್ಚಕ ಮತ್ತು ಟ್ರಸ್ಟ್​​ನ ಅಧ್ಯಕ್ಷನ ನಡುವಿನ ಗಲಾಟೆಯಿಂದ ಬೇಸತ್ತ ಅರ್ಚಕನ ಪತ್ನಿ ಆತ್ಮಹತ್ಯೆಗೆ ಯತ್ನಿಸಿ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯವಾದ ವಿಚಾರವೆಂದರೆ ದೈವಸ್ಥಾನದ ಹಣಕ್ಕಾಗಿ ಕಿತ್ತಾಡಿಕೊಂಡಿರುವ ಇವರೆಲ್ಲರೂ ಸಂಬಂಧಿಕರೇ. ಇಷ್ಟಾಗಿಯೂ ಘಟನೆಯ ಸಂಬಂಧ ಈವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
