ಗುಪ್ತ ಸಂತತಿಯ ಸಾಮ್ರಾಟರಿಂದ ಪೋಷಿಸಲ್ಪಟ್ಟು ಬೆಳೆದ ಮೊದಲ ಜಾಗತಿಕ ವಿಶ್ವವಿದ್ಯಾಲಯ, ತಕ್ಷಶಿಲಾ ವಿಶ್ವವಿದ್ಯಾಯವು ಸನಾತನ ಧರ್ಮದ ಶಾಸ್ತ್ರಗಳನ್ನು ಲಿಖಿತ ಗ್ರಂಥಗಳನ್ನಾಗಿ ಪರಿವರ್ತಿಸಲು ಮಹತ್ತರ ಪಾತ್ರವನ್ನು ವಹಿಸಿತು. ಆದರೂ, ಬೌದ್ಧಧರ್ಮದ ಪ್ರಾಬಲ್ಯದಿಂದಾಗಿ ಸನಾತನ ಧರ್ಮದ ಅನುಯಾಯಿಗಳು ಬಹುಮಟ್ಟಿಗೆ ದೇಶದ ಪಶ್ಚಿಮ ಮೈದಾನ ಪ್ರದೇಶಕ್ಕೆ ಸೀಮಿತವಾಗಿದ್ದರು.
ನಮ್ಮ ‘ಭಾರತ’ ದೇಶವನ್ನು ಹಿಂದೆ ‘ಹಿಂದೂಸ್ಥಾನ’ವೆಂದೂ ಕರೆಯುತ್ತಿದ್ದರು. ಎಂದರೆ, ಹಿಂದೂಗಳು ವಾಸಿಸುವ ದೇಶ. ‘ಹಿಂದೂ’ ಎಂಬ ಪದವು ‘ಸಿಂಧೂ’ ಪದದ ಪರ್ಷಿಯನ್ ಭಾಷಾ ಉಚ್ಚಾರವಾಗಿದೆ. ಸಿಂಧೂ ಕಣಿವೆಯ ನಾಗರಿಕತೆಯು ಹರಪ್ಪ ಹಾಗೂ ಮೊಹೆಂಜೊದಾರೋ ಪ್ರದೇಶಗಳಲ್ಲಿ ಕ್ರಿ.ಪೂ. ಸುಮಾರು 2500ರಲ್ಲಿ ಪ್ರಾರಂಭವಾಯಿತೆಂದು ಪ್ರಾಚೀನ ಇತಿಹಾಸವು ಉಲ್ಲೇಖಿಸುತ್ತದೆ. ಆದರೆ ‘ಇತಿಹಾಸ’ಗಳೆಂದೇ ಕರೆಯಲ್ಪಡುವ ಭಾರತೀಯ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳ ಘಟನೆಗಳ ಕಾಲವನ್ನು ಸಂಶೋಧನೆ ಮಾಡಿರುವ ಹಲವು ಇತಿಹಾಸಕಾರರು, ರಾಮಾಯಣದ ಕಾಲವನ್ನು ಕ್ರಿ.ಪೂ. 7000-8000ವೆಂದೂ ಹಾಗೂ ಮಹಾಭಾರತದ ಕಾಲವನ್ನು ಕ್ರಿ.ಪೂ. 3000ವೆಂದೂ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಪ್ರಾಚೀನ ಭಾರತದ ಇತಿಹಾಸವು, ಸಿಂಧೂ ಕಣಿವೆಯ ನಾಗರಿಕತೆಗಿಂತಲೂ ಬಹು ಪುರಾತನವಾದದ್ದೆಂಬುದು ನಂಬಲರ್ಹವಾಗಿದೆ.
ಇತಿಹಾಸವು ಚಿತ್ರಿಸುವಂತೆ ಹಿಂದೂ ನಾಗರಿಕತೆಯು ಬಹುಶಃ ಈಗ ಪಾಕಿಸ್ತಾನದಲ್ಲಿರುವ ಸಿಂಧೂ ನದಿಯ ಕಣಿವೆಯಲ್ಲಿ ಪ್ರಾರಂಭವಾಯಿತು. ಆದರೆ, ವೈದಿಕ ಗ್ರಂಥಗಳು, ಇನ್ನೊಂದು ಪ್ರಮುಖವಾದ ‘ಸರಸ್ವತಿ’ ನದಿಯ ಬಗ್ಗೆ ಉಲ್ಲೇಖಿಸುತ್ತ, ಹಿಂದೂ ನಾಗರಿಕತೆಯ ಉಗಮವು ಸರಸ್ವತಿ ನದಿಯ ತಟದಲ್ಲೇ ಆಯಿತೆಂದು ಹೇಳುತ್ತವೆ. ಒಂದು ಕಾಲದಲ್ಲಿ ಹಿಮಾಲಯದಿಂದ ಉಗಮವಾಗಿ ಸಿಂಧೂ ಹಾಗೂ ಯಮುನಾ ನದಿಯ ಮಧ್ಯದಲ್ಲಿ ಹಾದು, ಪಶ್ಚಿಮ ಬಯಲು ಪ್ರದೇಶಗೆಳೆಡೆಗೆ ಹರಿಯುತ್ತಿದ್ದ ಸರಸ್ವತಿ ನದಿಯು, ಪ್ರಸ್ತುತ ಸಂಪೂರ್ಣ ಬತ್ತಿಹೋಗಿದೆಯೆಂದು ಸಂಶೋಧನೆಗಳಿಂದ ಕಂಡುಬಂದಿದೆ. ಅದರ ಹರಿವನ್ನು ಗುರುತಿಸಿ ಅದನ್ನು ಪುನರುಜ್ಜೀವನಗೊಳಿಸಲು ಕೆಲವು ಪ್ರಯತ್ನಗಳೂ ನಡೆದಿವೆ. ವೇದಗಳಲ್ಲಿ ಉಲ್ಲೇಖವಾಗಿರುವ ಸರಸ್ವತಿ ನದಿಯು, ಸಿಂಧೂ ಕಣಿವೆಯ ನಾಗರಿಕತೆಗಿಂತಲೂ ಪ್ರಾಚೀನವಾದದ್ದೆಂದು ತಿಳಿದು ಬರುವುದರಿಂದ, ಹಿಂದೂ ನಾಗರಿಕತೆಯನ್ನು ‘ಸಿಂಧೂ-ಸರಸ್ವತಿ ನಾಗರಿಕತೆ’ಯೆಂದು ಕರೆಯುವುದು ಸೂಕ್ತವಾಗಿದೆ.
ಭಾರತೀಯ ಗ್ರಂಥಗಳಲ್ಲಿ ಅತ್ಯಂತ ಪುರಾತನ ಗ್ರಂಥಗಳೆಂದರೆ ವೇದಗಳು. ಅವುಗಳು ಸುಮಾರು ನಾನ್ನೂರು ಋಷಿಗಳಿಂದ ರಚಿಸಲ್ಪಟ್ಟಿದ್ದು, ಅದರಲ್ಲಿ ಇಪ್ಪತೆôದು ಸ್ತ್ರೀಯರಿದ್ದರು. ಋಷಿಗಳು ಅಂತಮುಖರಾಗಿ ತಮ್ಮ ಪರಮೋಚ್ಚ ದಿವ್ಯಪ್ರಜ್ಞೆಯಲ್ಲಿ ದರ್ಶಿಸಿದ ಮಂತ್ರಗಳ ಸಮೂಹಗಳೇ ವೇದಗಳಾಗಿವೆ. ಸಾವಿರಾರು ವರ್ಷಗಳಿಂದ ಮೌಖಿಕವಾಗಿ ಮಾತ್ರ ಹರಿದು ಬಂದ ವೇದಗಳನ್ನು, ಕ್ರಿ.ಪೂ. 1500-500ರಲ್ಲಿ ಲಿಖಿತರೂಪಕ್ಕೆ ತರಲಾಯಿತು. ಇನ್ನೂ ಕೆಲವು ಪ್ರಾಚೀನ ಭಾರತೀಯ ಶಾಸ್ತ್ರಗಳೆಂದರೆ ಉಪನಿಷತ್ತುಗಳು, ಪುರಾಣಗಳು, ಇತಿಹಾಸಗಳು ಮತ್ತು ಐಹಿಕ ಜೀವನಕ್ಕೆ ಸಂಬಂಧಿಸಿದ ಇನ್ನಿತರ ವಿಜ್ಞಾನ-ಕಲೆಗಳು.
ಗುಪ್ತ ಸಂತತಿಯ ಆಳ್ವಿಕೆಯ (ಕ್ರಿ›.ಪೂ. 500-600) ಕಾಲದಲ್ಲಿದ್ದ ನಳಂದ ತಕ್ಷಶಿಲಾ ವಿಶ್ವವಿದ್ಯಾಲಯಗಳು ಈ ಮೇಲಿನ ಗ್ರಂಥಗಳಲ್ಲಿ ಹೆಚ್ಚಿನವುಗಳನ್ನು ಲಿಖಿತ ಪಠ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು. ಈ ಮೇಲಿನ ಯಾವುದೇ ಪಠ್ಯಗಳಲ್ಲಿ ‘ಹಿಂದೂ’ ಪದದ ಉಲ್ಲೇಖವು ನಮಗೆ ಕಾಣಸಿಗುವುದಿಲ್ಲ. ಆದ್ದರಿಂದ ಈ ದೇಶದ ಜನರು ಹಿಂದೂ ಧರ್ಮಕ್ಕೆ ಸೇರಿದವರೆನ್ನುವುದು ಇತಿಹಾಸದಲ್ಲಿ ಇತ್ತೀಚಿನ ಹೇಳಿಕೆಯಾಗಿದೆ. ಪ್ರಾಚೀನ ಭಾರತೀಯರ ಧಾರ್ವಿುಕ ವಿಚಾರಗಳನ್ನು ವರ್ಣಿಸಲು ಸೂಕ್ತವಾದ ಹೆಸರೆಂದರೆ ‘ಸನಾತನ ಧರ್ಮ’, ಎಂದರೆ, ‘ಶಾಶ್ವತ ಧರ್ಮ’. ಸರ್ವ ಅಸ್ತಿತ್ವದ ದಿವ್ಯತೆ ಮತ್ತು ಏಕತೆಗಳೇ ಸನಾತನ ಧರ್ಮದ ಮೂಲ ಸಿದ್ಧಾಂತ ಹಾಗೂ ಬುನಾದಿ. ದಿವ್ಯತೆಯು ಮೂಲತಃ ನಿರ್ಗಣ, ನಿರಾಕಾರ ಮತ್ತು ಸರ್ವವ್ಯಾಪಿ. ಆದರೆ ಈ ದಿವ್ಯತೆಯು ಸಗುಣ, ಸಾಕಾರವಾಗಿಯೂ ವ್ಯಕ್ತವಾಗಬಲ್ಲದು. ಇದನ್ನೇ ವೇದಾಂತ ಗ್ರಂಥಗಳಾದ ಉಪನಿಷತ್ತುಗಳು ಸಾರುತ್ತವೆ. ಈಶಾವಾಸ್ಯ ಉಪನಿಷತ್ತಿನಲ್ಲಿ ಘೊಷಿಸಿರುವಂತೆ, ‘ಈಶಾವಾಸ್ಯಂ ಇದಂ ಸರ್ವಂ’- ‘ಸಚರಾಚರ ವಿಶ್ವವೆಲ್ಲವೂ ದಿವ್ಯತೆಯ ಅಥವಾ ಈಶ್ವರ ಸ್ವರೂಪವೇ ಆಗಿದೆ’ ಎಂಬ ಜ್ಞಾನವನ್ನು ಹೊಂದುವುದೇ ಜೀವನದ ಪರಮ ಗುರಿಯಾಗಿದೆ. ತನ್ನ ಅಂತರಂಗದಲ್ಲಿ ಈ ಸತ್ಯವನ್ನು ಅನುಭವಿಸಿ, ಅದರ ಆಧಾರದಲ್ಲಿ ದಿವ್ಯಜೀವನವನ್ನು ನಡೆಸುವುದೇ ಮಾನವಜೀವಿತದ ಪರಮ ಉದ್ದೇಶವಾಗಿದೆ. ಇಂದು ನಾವು ಕಾಣುವ ಹಿಂದೂ ಧರ್ಮವು ಸನಾತನ ಧರ್ಮದಿಂದ ಉಗಮವಾಗಿ, ಕಾಲಕ್ರಮೇಣ ಮಾನವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನಗಳಿಗೆ ಸಂಬಂಧಿಸಿದ ಹಲವಾರು ಆಚಾರ-ವಿಚಾರಗಳನ್ನೊಳಗೊಂಡು ಬೆಳೆದುಬಂದಿದೆ. ಚಾರಿತ್ರಿಕವಾಗಿ ಸಿಂಧೂ ನದಿಯ ಪೂರ್ವ ದಿಕ್ಕಿನಲ್ಲಿ ವಾಸಿಸುವರನ್ನು ಹಿಂದೂಗಳೆಂದೂ, ಅವರು ಪಾಲಿಸುವ ಧರ್ಮವನ್ನು ಹಿಂದೂ ಧರ್ಮವೆಂದೂ ಕರೆಯಲಾಯಿತು. ಅಂತೆಯೇ ಭಾರತ ದೇಶದಲ್ಲಿ ಜನ್ಮತಳೆದ ಬೌದ್ಧಧರ್ಮ, ಜೈನಧರ್ಮ ಮತ್ತು ಸಿಖ್ ಧರ್ಮಗಳೂ ಮೂಲತಃ ಸನಾತನ ಧರ್ಮದಿಂದಲೇ ಉಗಮವಾಗಿವೆಯೆಂದು ಹೇಳಬಹುದು.
ಕ್ರಿ.ಪೂ. 2500ರಿಂದ 500ರ ಸಮಯದಲ್ಲಿ ವೇದ-ವೇದಾಂತಗಳ ಅತ್ಯುನ್ನತ ಮೌಲ್ಯಗಳ ಆಧಾರದಲ್ಲಿ ಪ್ರವರ್ಧಮಾನಕ್ಕೆ ಬಂದ ಸನಾತನ ಧರ್ಮವು, ಕಾಲಕ್ರಮೇಣ ತನ್ನ ಅನುಯಾಯಿಗಳ ಸ್ವಾರ್ಥ-ಸಂಕುಚಿತತೆಗಳಿಂದಾಗಿ ಸಮಾಜದಲ್ಲಿ ಮೇಲು-ಕೀಳೆಂಬ ಬೇಧಭಾವನೆಗಳು, ಶೋಷಣೆ, ಹಿಂಸೆ ಇತ್ಯಾದಿ ಅನೇಕ ಅರ್ಥಹೀನ ಆಚಾರಗಳ ಆಗರವಾಯಿತು. ಕ್ರಿ.ಪೂ. 500ರ ಸಮಯದಲ್ಲಿ ಜನಿಸಿದ ಗೌತಮ ಬುದ್ಧನು ಅಂದಿನ ಹೀನ ಆಚಾರಗಳಿಂದ ತುಂಬಿದ ಸಮಾಜದಲ್ಲಿ, ಪುನಃ ಅಹಿಂಸೆ-ಜೀವಕಾರುಣ್ಯಗಳ ಪರಮೋಚ್ಚ ಧರ್ಮವನ್ನು ಬೋಧಿಸಿದನು.
ಬುದ್ಧನು ತಾನಾಗಿ ಪ್ರತ್ಯೇಕ ಬೌದ್ಧ ಧರ್ಮವನ್ನು ಸ್ಥಾಪಿಸದಿದ್ದರೂ, ಅವನ ಅನುಯಾಯಿಗಳು ಕಾಲಕ್ರಮೇಣ ಅದನ್ನು ಒಂದು ಸಂಘಟಿತ ಧರ್ಮವನ್ನಾಗಿ ರೂಪಿಸಿದರು. ಬೌದ್ಧ ಧರ್ಮವು ಕ್ರಮೇಣ ಭಾರತದಲ್ಲಿ ಮಾತ್ರವಲ್ಲದೆ, ಅದರ ಪೂರ್ವ ಹಾಗೂ ಉತ್ತರ ದೇಶಗಳಿಗೂ ಹಬ್ಬಿತು.
ಇತರ ಧರ್ಮಗಳಲ್ಲಿರುವಂತೆ ಸನಾತನ ಧರ್ಮದಲ್ಲಿ ಎಂದೂ ಬುದ್ಧನಂತಹ ಏಕೈಕ ನಾಯಕನಿರಲಿಲ್ಲ. ಅದರ ಆಚಾರ-ವಿಚಾರಗಳನ್ನು ಅರ್ಥೈಸಿ, ಪ್ರಚಾರಮಾಡಲು ಸನಾತನ ಧರ್ವಿುಯರ ಸಮಾಜದಲ್ಲಿ ಬೌದ್ಧಿಕ-ಆಧ್ಯಾತ್ಮಿಕ ವರ್ಗವಾದ ಬ್ರಾಹ್ಮಣರಿದ್ದರೂ ಸಹ, ಅವುಗಳನ್ನು ಒಪ್ಪಿ, ಸ್ವೀಕರಿಸಿ ಆಚರಿಸುವುದು ಜನರ ವೈಯಕ್ತಿಕ ತೀರ್ವನವಾಗಿತ್ತು. ಸಮಾಜದಲ್ಲಿ ವಿವಿಧ ಕಾರ್ಯ-ಕರ್ತವ್ಯಗಳನ್ನು ಹಂಚಲು ಉಗಮವಾದ ವರ್ಣಧರ್ಮವನ್ನು, ಮೇಲಿನ ವರ್ಗದ ಜನರು ತಮ್ಮ ಸ್ವಾರ್ಥ-ಸಂಕುಚಿತತೆಯಿಂದ ತಪ್ಪಾಗಿ ಅರ್ಥೈಸಿ, ಅದನ್ನು ಕಟ್ಟುನಿಟ್ಟಾದ ಮೇಲು-ಕೀಳೆಂಬ ಜಾತಿಪದ್ಧತಿಯಾಗಿ ಜಾರಿಗೆ ತಂದುದರಿಂದ, ಸಮಾಜದಲ್ಲಿ ಬಹುತೇಕ ಜನರು ಸೌಲಭ್ಯವಂಚಿತರಾಗಿ ಶೋಷಣೆಗೊಳಗಾದರು. ಇದರಿಂದಾಗಿ ಅವರಲ್ಲಿ ಸಹಜವಾಗಿ ಅತೃಪ್ತಿ-ಅಸಮಾಧಾನಗಳು ತಲೆದೋರಿದವು. ಆ ಸಂದರ್ಭದಲ್ಲಿ ಉದಯವಾದ ಬೌದ್ಧ ಧರ್ಮವು ಅವರ ನೆರವಿಗೆ ಬಂದಿತೆಂದು ಹೇಳಬಹುದು. ಅದರ ಆಚಾರ-ವಿಚಾರಗಳು, ಹಳೆಯ ಸಂಪ್ರದಾಯ-ಕಟ್ಟುಪಾಡುಗಳಿಂದ ಶೋಷಣೆಗೆ ಸಿಲುಕಿದ್ದ ಕೆಳವರ್ಗದ ಜನರಿಗೆ ಒಂದು ಹೊಸ ದಾರಿಯನ್ನು ತೋರಿದವು.
ಒಂದೆಡೆ ಬೌದ್ಧಧರ್ಮವು ಭಾರತದ ಉತ್ತರ ಹಾಗೂ ಪೂರ್ವ ಪ್ರದೇಶಗಳಲ್ಲಿ ಹರಡುತ್ತಿದ್ದರೆ, ಇನ್ನೊಂದೆಡೆ ಜೆರುಸಲೇಮ್ ನಗರದಲ್ಲಿ ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ್ದರಿಂದ ಪ್ರಾರಂಭವಾದ ಕ್ರೖೆಸ್ತ ಧರ್ಮವು, ಅವನ ಶಿಷ್ಯರ ಮೂಲಕ ರೋಮನ್ ಸಾಮ್ರಾಜ್ಯವನ್ನು ಪ್ರವೇಶಿಸಿ, ಪಸರಿಸತೊಡಗಿತು. ಕಾಲಕ್ರಮೇಣ ರೋಮನ್ ಸಾಮ್ರಾಜ್ಯವು ಶಿಥಿಲಗೊಂಡಾಗ, ಅದರ ಮೇಲೆ ಆಕ್ರಮಣ ಮಾಡಿದ ನೆಪೋಲಿಯನ್ ಸಾಮ್ರಾಟನು ಕ್ರೖೆಸ್ತಧರ್ಮವನ್ನು ಸ್ವೀಕರಿಸಿದುದು, ಅದರ ಪ್ರಬಲ ಪ್ರಚಾರಕ್ಕೆ ನೆರವಾಯಿತು. ಅವನು ಅದನ್ನು ಅವ್ಯವಸ್ಥಿತವಾಗಿದ್ದ ಪ್ರಾಚೀನ ರೋಮನ್ ಆಚರಣೆಗಳನ್ನು ತೊಡೆದು ಹಾಕಲು ಉಪಯೋಗಿಸಿ, ತನ್ಮೂಲಕ ರಾಜಕೀಯವಾಗಿ ಮೇಲುಗೈ ಪಡೆದನು. ಏಸುವಿನ ಅನುಯಾಯಿಗಳ ತ್ಯಾಗದ ಕಥೆಗಳು ಭಾವನಾತ್ಮಕವಾಗಿ ಬಹುಪಾಲು ಜನರನ್ನು ಕ್ರೖೆಸ್ತ ಧರ್ಮದೆಡೆಗೆ ಆಕರ್ಷಿಸಿದವು. ಹೀಗೆ ಕ್ರೖೆಸ್ತ ಧರ್ಮವು ಜೆರುಸಲೇಮ್ ನಗರದಲ್ಲಿ ಉಗಮವಾದರೂ, ಕ್ರಮೇಣ ರೋಮ್ ನಗರವನ್ನು ತನ್ನ ಪ್ರಮುಖ ಕೇಂದ್ರವನ್ನಾಗಿಸಿಕೊಂಡು ಪ್ರವರ್ಧಮಾನಕ್ಕೆ ಬಂದಿತು. ಸ್ಪೇನ್ ದೇಶೀಯರ ಮತ್ತು ಪೋರ್ಚುಗೀಸರ ಆಗಮನದೊಂದಿಗೆ ಕ್ರೖೆಸ್ತ ಧರ್ಮವು ಭಾರತವನ್ನು ಕ್ರಿ.ಶ. ಸುಮಾರು 300ರಲ್ಲಿ ಪ್ರವೇಶಿಸಿತು. ಕ್ರೖೆಸ್ತ ಧರ್ಮವು ಭಾರತದ ದಕ್ಷಿಣ ಭಾಗದಿಂದ ಪ್ರವೇಶಿಸಿದ ಕಾರಣ, ಉತ್ತರ-ಪೂರ್ವ ಭಾಗದಲ್ಲಿ ಬೇರೂರಿದ್ದ ಬೌದ್ಧಧರ್ಮವು, ಅದಕ್ಕೆ ತಡೆಯನ್ನುಂಟು ಮಾಡಲಿಲ್ಲ.
ಗುಪ್ತ ಸಂತತಿಯ ಸಾಮ್ರಾಟರಿಂದ ಪೋಷಿಸಲ್ಪಟ್ಟು ಬೆಳೆದ ಮೊದಲ ಜಾಗತಿಕ ವಿಶ್ವವಿದ್ಯಾಲಯ, ತಕ್ಷಶಿಲಾ ವಿಶ್ವವಿದ್ಯಾಯವು ಸನಾತನ ಧರ್ಮದ ಶಾಸ್ತ್ರಗಳನ್ನು ಲಿಖಿತ ಗ್ರಂಥಗಳನ್ನಾಗಿ ಪರಿವರ್ತಿಸಲು ಮಹತ್ತರ ಪಾತ್ರವನ್ನು ವಹಿಸಿತು. ಆದರೂ, ಬೌದ್ಧಧರ್ಮದ ಪ್ರಾಬಲ್ಯದಿಂದಾಗಿ ಸನಾತನ ಧರ್ಮದ ಅನುಯಾಯಿಗಳು ಬಹುಮಟ್ಟಿಗೆ ದೇಶದ ಪಶ್ಚಿಮ ಮೈದಾನ ಪ್ರದೇಶಕ್ಕೆ ಸೀಮಿತವಾಗಿದ್ದರು.
ಈಗಾಗಲೇ ತಿಳಿಸಿರುವಂತೆ ಭಾರತದ ಉತ್ತರ-ಪೂರ್ವ ಭಾಗಗಳಲ್ಲಿ ಬೌದ್ಧಧರ್ಮದ ಅನುಯಾಯಿಗಳ ಸಂಖ್ಯೆ ಏರುತ್ತಿತ್ತು. ಅಂತೆಯೇ ದಕ್ಷಿಣ ಭಾಗದಿಂದ ಪ್ರವೇಶಿಸಿದ ಕ್ರೖೆಸ್ತ ಧರ್ಮವು, ವ್ಯಾಪಾರ ಹಾಗೂ ವಾಣಿಜ್ಯದ ಹೆಸರಿನಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿತ್ತು. ಇಂತಹ ಸನ್ನಿವೇಶವಿದ್ದ ಕ್ರಿ.ಶ. ಸುಮಾರು 800ರಲ್ಲಿ, ದಕ್ಷಿಣ ಭಾರತದಲ್ಲಿ ಉದಯಿಸಿದ, ‘ದ್ರಾವಿಡ ಶಿಶು’ವೆಂದು ಕರೆಯಲ್ಪಡುವ, ಅಪಾರ ಮೇಧಾಶಕ್ತಿಯನ್ನು ಹೊಂದಿದ್ದ, ಮಹಾನ್ ಸಂತ ಶಂಕರಾಚಾರ್ಯರು ಅದೈ ್ವ ವೇದಾಂತದ ಹೊಸ ದೃಷ್ಟಿಕೋನದೊಂದಿಗೆ ಸನಾತನ ಧರ್ಮವನ್ನು ದೇಶದಾದ್ಯಂತ ಪುನರುಜ್ಜೀವನಗೊಳಿಸುವ ಮೂಲಕ, ಬೌದ್ಧಧರ್ಮದ ಪ್ರಸಾರವನ್ನು ತಡೆದರು.
ಅದೈ ್ವ ವೇದಾಂತವು ಮೂಲ ಸನಾತನ ಧರ್ಮದ ಒಂದು ಭಾಗವೇ ಆಗಿದ್ದರೂ, ಅದರೆಡೆಗೆ ಬಹುತೇಕ ಜನರ ಗಮನವು ಹರಿದಿರಲಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ಜಾತಿಪದ್ಧತಿಯ ಮೂಲಕ ಸಮಾಜದ ಪ್ರಬಲ ವರ್ಗದವರ ಶೋಷಣೆಗೊಳಗಾಗಿದ್ದ ಬಹುತೇಕ ಸಾಮಾನ್ಯ ಜನರ ಜೀವನವು ದುರ್ಭರವಾಗಿತ್ತು. ಸರ್ವಜೀವಿಗಳ ದಿವ್ಯತೆ ಮತ್ತು ಏಕತೆಗಳನ್ನು ಪ್ರತಿಪಾದಿಸುವ ಅದೆ ್ವೖತ ವೇದಾಂತವನ್ನು ಗ್ರಹಿಸುವುದು ಅವರಿಗೆ ದೂರದ ಮಾತಾಗಿತ್ತು. ಇಂತಹ ಸನ್ನಿವೇಶದಲ್ಲಿ ಶಂಕರಾಚಾರ್ಯರು ಭಾರತದಾದ್ಯಂತ ಬಿರುಗಾಳಿಯಂತೆ ಸಂಚರಿಸಿ, ತಮ್ಮ ಪ್ರಚಂಡ ಬುದ್ಧಿಮತ್ತೆ ಹಾಗೂ ಅಪಾರ ಜ್ಞಾನಗಳಿಂದ ಸಮಾಜದಲ್ಲಿ ಬೇರೂರಿದ್ದ ಅನೇಕ ತಪ್ಪು ಸಿದ್ಧಾಂತ, ಪದ್ಧತಿ ಮತ್ತು ಆಚರಣೆಗಳ ವಿರುದ್ಧವಾಗಿ ವಾದಿಸಿ ಗೆದ್ದು, ಸನಾತನ ಧರ್ಮದ ಉದಾತ್ತವಾದ ಮೂಲ ಸಿದ್ಧಾಂತಗಳನ್ನು ಮರು ಸ್ಥಾಪಿಸಿದರು.
ಕ್ರಿ.ಶ. 630ರಲ್ಲಿ ಪ್ರವಾದಿ ಮುಹಮ್ಮದರು ಇಸ್ಲಾಂ ಧರ್ಮವನ್ನು ಭಾರತದ ವಾಯವ್ಯ ಭಾಗದಲ್ಲಿದ್ದ ಪ್ರಸ್ತುತ ‘ಸೌದಿ ಅರೇಬಿಯಾ’ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಸ್ಥಾಪಿಸಿದರು. ಅದರ ಅನುಯಾಯಿಗಳು ಬಹು ಆಕ್ರಮಣಕಾರಿ ಪ್ರವೃತ್ತಿಯನ್ನು ತಳೆದು, ಖಡ್ಗದ ಮೂಲಕ ತಮ್ಮ ಧರ್ಮವನ್ನು ಪಸರಿಸಿದರು. ಅವರು ಪಶ್ಚಿಮ ದಿಕ್ಕಿನಿಂದ ಬಂದು ಸಿಂಧೂ ನದಿಯನ್ನು ದಾಟಿ ಭಾರತವನ್ನು ಪ್ರವೇಶಿಸಿ, ಅಲ್ಲಿಯೂ ತಮ್ಮ ಧರ್ಮವನ್ನು ಬಲಾತ್ಕಾರದಿಂದ ಬೆಳೆಸಿದರು; ಸನಾತನ ಧರ್ಮದ ಹಲವು ಕೇಂದ್ರಗಳನ್ನು ನಾಶ ಮಾಡಿ, ಅಪಾರ ಹಾನಿಯನ್ನುಂಟು ಮಾಡಿದರು. ಅಲ್ಲದೆ, ಬೌದ್ಧಧರ್ಮಕ್ಕೂ ಅವರಿಂದ ಹಿನ್ನಡೆಯಾಯಿತು. ದಕ್ಷಿಣ ಭಾರತಕ್ಕೆ ಸೀಮಿತವಾಗಿದ್ದ ಕ್ರೖೆಸ್ತಧರ್ಮಕ್ಕೆ ಅವರಿಂದ ಹೆಚ್ಚು ಹಾನಿಯಾಗಲಿಲ್ಲ.
(ಮುಂದುವರಿಯುವುದು)
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ರಾಯ್​ಬರೇಲಿ ಕ್ಷೇತ್ರ ಉಳಿಸಿಕೊಂಡ ರಾಗಾ: ವಯನಾಡ್​ದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 6 =
Remember me
