ಬೆಂಗಳೂರು:ಸ್ಯಾಂಡಲ್​ವುಡ್​ನ ಬಹುನೀರಿಕ್ಷೆಯ ಚಿತ್ರಗಗಳಲ್ಲಿ ಕಾಂತಾರ ಸಿನಿಮಾ ಕೂಡಾ ಒಂದಾಗಿದೆ. ಈ ಸಿನಿಮಾ ಕುರಿತಾಗಿ ಹೊಸ ಅಪ್​ಡೇಟ್​ ಏನಾದರೂ ಬಂದರೆ ಅಭಿಮಾನಿಗಳು ಕಾಯುತ್ತಿರುತ್ತಾರೆ.  ಇದೀಗ ಈ ಚಿತ್ರ ತಂಡ ಹೊಸದೊಂದು ವಿಚಾರವಾಗಿ ಮುನ್ನೆಗೆ ಬಂದಿದೆ. ಇದನ್ನು ಕೇಳಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.
ಸೂಪರ್​ಡೂಪರ್​ ಹಿಟ್​ ಆಗಿದ್ದ ಚಿತ್ರಗಳ ಸಾಲಿನಲ್ಲಿ ಕಾಂತಾರ ಸಿನಿಮಾ ಮೊದಲು ನಿಲ್ಲುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಈ  ಸಿನಿಮಾ ಅಷ್ಟೊಂದು ದೊಡ್ಡಮಟ್ಟದಲ್ಲಿ ಸೌಂಡ್​  ಮಾಡಿತ್ತು. ಇದೇ  ಉತ್ಸಾಹದಲ್ಲಿ ಚಿತ್ರತಂಡ ಸಿನಿಮಾದ ಪ್ರೀಕ್ವೆಲ್‌ ಅಂದರೆ ಮೊದಲ ಭಾಗವನ್ನು ತರುವುದಾಗಿ ರಿಷಬ್‌ ಶೆಟ್ಟಿ ಹೇಳಿದ್ದರು.
ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ನ.27 ರಂದುನೆರವೇರಿತ್ತು. ಇದರೊಂದಿಗೆ ಸಿನಿಮಾದ ಫಸ್ಟ್‌ ಲುಕ್‌ ಕೂಡ ರಿಲೀಸ್‌ ಆಗಿತ್ತು.   ಈ ಚಿತ್ರತಂಡ ಇದೀಗ ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ ನಡೆಯುತ್ತಿದೆ.
https://twitter.com/shetty_rishab/status/1734431446474047579
ಸದ್ಯಕ್ಕೆ ನಾನೇ ಹೀರೋ, ನಾಯಕಿ ಹಾಗೂ ಇತರ ಪಾತ್ರದ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ಇರಲಿದೆ. ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ ನಡೆಯುತ್ತಿದೆ. ಕರಾವಳಿ ಹಾಗೂ ಇತರೆ ಭಾಗದ ಕಲಾವಿದರು ಕೂಡ ಇರಲಿದ್ದಾರೆ ಎಂದು ರಿಷಬ್‌ ಶೆಟ್ಟಿ ಹೇಳಿದ್ದರು. ಇದೀಗ ಚಿತ್ರದಲ್ಲಿ  ನಟಿಸಲು ಕಲಾವಿಧರಿಗಾಗಿ ಹುಡುಕಾಟ ಮಾಡುತ್ತಿದೆ.
ಸಿನಿಮಾದಲ್ಲಿ ನಟಿಸಲು 30 ರಿಂದ 60 ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. ಇನ್ನು 18 ರಿಂದ 60ರ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ. ನೋಂದಣಿಗಾಗಿ Kantara.film ಲಿಂಕ್‌ ಒತ್ತಿ ತಮ್ಮ ಪ್ರತಿಭೆಯನ್ನು ತೋರಿಸಬಹುದು. ರೀಲ್ಸ್‌ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸುವುದಿಲ್ಲ . ಡಿ.14 ರವರೆಗೆ ಲಿಂಖ್ ಚಾಲ್ತಿಯಲ್ಲಿರುತ್ತದೆ ಎಂದು ರಿಷಬ್‌ ಶೆಟ್ಟಿ ಪೋಸ್ಟ್‌ ನಲ್ಲಿ ಹೇಳಿದ್ದಾರೆ.
ತುಳುನಾಡಿನ ದೈವ ಹಾಗೂ ಆಚರಣೆ ಸುತ್ತ ಸಾಗಿದ ʼಕಾಂತಾರʼ ಕನ್ನಡದಲ್ಲಿ ಹಿಟ್‌ ಆಗಿ, ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್‌ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿತ್ತು.  ಈ ಸಿನಿಮಾದಲ್ಲಿ ನೀವು ನಟಿಸಬೇಕು ಎಂದಾಗಿದ್ದರೆ ನೀವು ಆಡಿಶನ್​​ನಲ್ಲಿ ಭಾಗವಹಿಸಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
