| ಕೀರ್ತಿನಾರಾಯಣ ಸಿ. ಬೆಂಗಳೂರು
ಕ್ರಿಕೆಟ್, ಇಸ್ಪೀಟ್ ಜೂಜಾಟಗಳಲ್ಲಿ ಲಕ್ಷ, ಕೋಟಿಗಟ್ಟಲೆ ಬೆಟ್ಟಿಂಗ್ ನಡೆಯುವುದು ಎಲ್ಲರಿಗೂ ಗೊತ್ತಿದೆ. ಆದರೆ, ಇದನ್ನೂ ಮೀರಿಸುವಂತೆ ‘ಕೋಳಿ ಅಂಕ’ಗಳಲ್ಲೂ ಪ್ರತಿನಿತ್ಯವೂ ಕೋಟ್ಯಂತರ ರೂ. ಜೂಜು ನಡೆಯುತ್ತಿದೆ. ಉದ್ಯಮಿಗಳು, ರಾಜಕಾರಣಿ ಗಳ ಮಕ್ಕಳು ಹಾಗೂ ಸ್ಥಳೀಯ ಮುಖಂಡರು ಕೋಳಿ ಪಂದ್ಯಗಳಲ್ಲಿ ಬಾಜಿದಾರರು! ನಿಷೇಧವಿದ್ದರೂ ಕೆಲ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಈ ‘ಕೋಳಿಗಳ ಕಾದಾಟ’ಕ್ಕೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಇಲಾಖೆ ಸಜ್ಜಾಗಿದೆ.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಮನವಿ ಮೇರೆಗೆ ರಾಜ್ಯದಲ್ಲಿ ಪ್ರಿವೆನ್ಶನ್ ಆಫ್ ಕ್ರೂಯಲ್ಟಿ ಟು ಅನಿಮಲ್ ಕಾಯ್ದೆ-1960 ಅನ್ನು ಕಡ್ಡಾಯವಾಗಿ ಪಾಲಿಸುವ ಜತೆಗೆ ಪರಿಣಾಮಕಾರಿ ಯಾಗಿ ಅನುಷ್ಠಾನಕ್ಕೆ ತರುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಮಂಗಳವಾರ (ಫೆ.6) ಆದೇಶ ಹೊರಡಿಸಿದ್ದಾರೆ. ಕಾಯ್ದೆಯ ಕಲಂ 11ರ ಪ್ರಕಾರ ಕೋಳಿ ಪಂದ್ಯ ಆಯೋಜನೆ ಅಪರಾಧ. ಕೆಲ ಜಿಲ್ಲೆಗಳಲ್ಲಿ ಹಗಲಿರುಳು ಕೋಳಿ ಅಂಕಗಳು ನಡೆಯುತ್ತಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಎಲ್ಲ ಪೊಲೀಸ್ ಆಯುಕ್ತರು, ಐಜಿಪಿಗಳು ಹಾಗೂ ಜಿಲ್ಲಾ ಎಸ್ಪಿಗಳಿಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ.
ಸದ್ಯದ ದಿನಗಳಲ್ಲಿ ಕೋಳಿ ಪಂದ್ಯ ದೊಡ್ಡ ದಂಧೆಯಾಗಿದೆ. ಮೊದಲಿಗೆ ಸಂಕ್ರಾಂತಿ, ಯುಗಾದಿಯಂತಹ ಹಬ್ಬದ ಸಂದರ್ಭಗಳಲ್ಲಿ ಮಾತ್ರವೇ ನಡೆಯುತ್ತಿತ್ತು. ಆದರೀಗ ಮಾಮೂಲಿ ದಿನಗಳಲ್ಲಿ ನಡೆಯುತ್ತಿದೆ. ಪಂದ್ಯ ವೀಕ್ಷಿಸಲು ಹಾಗೂ ಬಾಜಿ ಕಟ್ಟಲು ಸಾವಿರಾರು ಜನರು ಜಮಾಯಿಸುತ್ತಿದ್ದಾರೆ. ಕೋಳಿ ಪಂದ್ಯ ಆಡಿಸುವುದಕ್ಕಾಗಿ ಪ್ರತ್ಯೇಕ ತಂಡಗಳೇ ಇವೆ. ಜನಸಂಪರ್ಕ ಕಡಿಮೆ ಇರುವ, ಊರಿನ ಹೊರಭಾಗದ ಜಮೀನುಗಳಲ್ಲಿ ಕೋಳಿಗಳ ಕಾದಾಟ ನಡೆಯುತ್ತದೆ.
ಕಾದಾಟಕ್ಕಾಗಿಯೇ ಕೋಳಿಗಳ ಸಾಕಣೆಕೋಳಿ ಪಂದ್ಯಕ್ಕಾಗಿಯೇ ಹುಂಜಗಳನ್ನು ಕಟ್ಟುಮಸ್ತಾಗಿ ಸಾಕಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಜವಾರಿ ಹುಂಜಕ್ಕೆ ಬೆಟ್ಟಿಂಗ್​ನಲ್ಲಿ ಭಾರಿ ಬೇಡಿಕೆ. ತಳಿ, ಎತ್ತರ, ಶೈಲಿ, ತೂಕವನ್ನು ಗಮನಿಸಿ ಈ ಹುಂಜಗಳಿಗೆ ರೇಟ್ ನಿಗದಿ ಮಾಡಲಾಗುತ್ತದೆ. ಹುಂಜಕ್ಕೆ ಮತ್ತೊಂದು ಹುಂಜವನ್ನು ಎದುರಾಳಿಯಾಗಿ ಬಿಡಲಾಗುತ್ತದೆ. ಕದನಕ್ಕೆ ಇಳಿಯುವ ಹುಂಜಗಳು ಪರಸ್ಪರ ಕುಕ್ಕುವುದು, ಕಾಲಿನಿಂದ ತಿವಿದು ಸಾಯಿಸುತ್ತವೆ. ಕಾಲಿಗೆ ಚಿಕ್ಕ ಚಾಕುಗಳನ್ನು ಕಟ್ಟಿ ಕಾದಾಟಕ್ಕೆ ಬಿಡಲಾಗುತ್ತದೆ.
ಪ್ರತಿದಿನ ಸಂಜೆ 4 ಗಂಟೆಗೆ ಡೀಲ್!ಪ್ರತಿದಿನವೂ ಕೋಳಿ ಪಂದ್ಯ ಆಯೋಜಿಸಲಾಗುತ್ತದೆ. ಆದರೆ, ಜಾಗ ಮಾತ್ರ ಪ್ರತಿಬಾರಿಯೂ ಬದಲಾಗುತ್ತಿರುತ್ತದೆ. ಪ್ರತಿನಿತ್ಯ ಸಂಜೆ 4 ಗಂಟೆಗೆ ಪಂದ್ಯ ಇರುತ್ತದೆ. ಅರ್ಧ ಅಥವಾ 1 ಗಂಟೆ ಮುಂಚೆ ಎಲ್ಲ ಮುಖಂಡರು ಮೊಬೈಲ್ ಕರೆಗಳಲ್ಲೇ ಮಾತನಾಡಿಕೊಂಡು ಸ್ಥಳ ನಿಗದಿಪಡಿಸುತ್ತಾರೆ. ನಂತರ ಆಯಾ ಮುಖಂಡರು ಬಾಜಿದಾರರಿಗೆ ವಿಷಯ ಮುಟ್ಟಿಸುತ್ತಾರೆ. ಎಲ್ಲರೂ ಬಂದ ಬಳಿಕ ಪಂದ್ಯ ಶುರುವಾಗುತ್ತದೆ.
ಕೋಲಾರ ಜಿಲ್ಲೆಯಲ್ಲಿ ಕೋಳಿ ಪಂದ್ಯ ಆಯೋಜನೆ ಸಂಬಂಧ 40ಕ್ಕೂ ಹೆಚ್ಚು ಕೇಸ್ ದಾಖಲಿಸಿದ್ದೇವೆ. ಜೆಸಿಬಿ ನಾರಾಯಣ ಮತ್ತು ಸಹಚರರನ್ನು ಬಂಧಿಸಲಾಗಿದೆ. ಸಿಕ್ಕಿಬಿದ್ದವರ ವಿರುದ್ಧ ರೌಡಿಶೀಟರ್, ಹಳೇ ಆರೋಪಿ ಪಟ್ಟಿ ತೆರೆಯಲಾಗಿದೆ. ಕೆಲವರನ್ನು ಗಡಿಪಾರು ಮಾಡಲಾಗಿದೆ. ನೆರವು ಕೊಟ್ಟ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಕೆಲ ರಾಜಕಾರಣಿಗಳು ಪಂದ್ಯ ಆಯೋ ಜನೆಗೆ ಅವಕಾಶ ಕೊಡುವಂತೆ ಪ್ರಭಾವ ಬೀರಿದರೂ ಆಸ್ಪದ ಕೊಟ್ಟಿಲ್ಲ.
| ಎಂ. ನಾರಾಯಣ ಎಸ್ಪಿ ಕೋಲಾರ ಜಿಲ್ಲೆ
ಬೆಟ್ಟಿಂಗ್ ಹೇಗೆ?ಒಂದು ಕೋಳಿ ಅಂಕದಲ್ಲಿ 50 ರಿಂದ 100 ಹುಂಜಗಳಿರುತ್ತವೆ. ಮೊದಲಿಗೆ ಕಾದಾಡುವ ಹುಂಜ ಗಳನ್ನು ಆಯ್ಕೆ ಮಾಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಒಂದು ಹುಂಜಕ್ಕೆ 50 ಸಾವಿರ ರೂ.ವರೆಗೆ ಬಾಜಿ ಕಟ್ಟಲಾಗುತ್ತದೆ. ಅಂದರೆ ಗೆದ್ದ ಕೋಳಿ ಬಾಜಿದಾರನಿಗೆ ಸೋತ ಕೋಳಿ ಬಾಜಿದಾರ 50 ಸಾವಿರ ರೂ. ಕೊಡಬೇಕು. ಇದರ ಜತೆಗೆ ಸುತ್ತಲೂ ನಿಂತಿರುವವರು 100ಕ್ಕೆ ಶೇ.70 ರೂ.ನಂತೆ ಕಟ್ಟಲಾಗುತ್ತದೆ. ಅಂದರೆ ಫೇವರಿಟ್ ಹುಂಜದ ಮೇಲೆ 10 ಸಾವಿರ ರೂ. ಬಾಜಿ ಕಟ್ಟಿ ಗೆದ್ದರೆ 7 ಸಾವಿರ ರೂ. ಅಷ್ಟೇ ಬರುತ್ತದೆ. ಒಂದು ವೇಳೆ ಸೋತರೆ 10 ಸಾವಿರ ರೂ. ಪಾವತಿಸಬೇಕಾಗುತ್ತದೆ.
ಎಲ್ಲೆಲ್ಲಿ ನಡೆಯುತ್ತೆ?ಬೆಂಗಳೂರು ಹೊರವಲಯ, ಉತ್ತರ ಕರ್ನಾಟಕ ಜಿಲ್ಲೆಗಳು, ದಕ್ಷಿಣ ಕನ್ನಡ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಹಲವೆಡೆ ಕೋಳಿ ಪಂದ್ಯಗಳು ಜೋರಿವೆ. ಪಕ್ಕದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಿಲ್ಲೆಗಳಲ್ಲೂ ಕೋಳಿ ಅಂಕಗಳ ಆಯೋಜನೆ ಜಾಸ್ತಿ.
ಪರಿಚಿತರಿಗಷ್ಟೇ ಎಂಟ್ರಿಕೋಳಿ ಪಂದ್ಯಕ್ಕೆ ಎಲ್ಲರಿಗೂ ಅವಕಾಶ ಇಲ್ಲ. ಪರಿಚಿತರಿಗೆ ಮಾತ್ರವೇ ಪ್ರವೇಶ ಇರುತ್ತದೆ. ಹೊಸಬರು ಹೋಗಬೇಕೆಂದರೆ ಮೊದಲೇ ಗುರುತಿಸಿಕೊಂಡಿರುವ ವ್ಯಕ್ತಿಯ ಶಿಫಾರಸು ಇರಬೇಕು. ಆಗಷ್ಟೇ ಆತನಿಗೆ ಎಂಟ್ರಿ ಇರುತ್ತದೆ.
ದಕ್ಷಿಣ ಕನ್ನಡ ಭಾಗದಲ್ಲಿ ಕೋಳಿ ಅಂಕ ಜಾಸ್ತಿ ಇದೆ. ಕೋಳಿ ಅಂಕ ಆಯೋಜನೆ ಕಾನೂನುಬಾಹಿರವಾಗಿದ್ದು, ಅದರ ನಿಯಂತ್ರಣಕ್ಕೆ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಆಧರಿಸಿ ಸಾಕಷ್ಟು ಪ್ರಕರಣ ದಾಖಲಿಸಲಾಗಿದೆ.
| ಸಿ.ಬಿ. ರಿಷ್ಯಂತ್ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ
ಸ್ಥಳ ತಿಳಿಸಲು ಗೂಗಲ್ ಲೊಕೇಷನ್!ಕೋಲಾರ ಜಿಲ್ಲೆಯಲ್ಲಿ ಆಂಧ್ರದ ಅನಂತಪುರ, ಚಿತ್ತೂರು, ತಮಿಳುನಾಡಿನ ಗಡಿಭಾಗ ಹೊಂದಿಕೊಂಡಿದೆ. ಕೋಳಿ ಪಂದ್ಯಗಳಿಗಾಗಿಯೇ ಖಡಕ್​ನಾಥ, ನೇಮಲಿ, ಡೇಗಾ ತಳಿಗಳನ್ನು ಆಂಧ್ರದಲ್ಲಿ ಬ್ರೀಡಿಂಗ್ ಮಾಡಲಾಗುತ್ತದೆ. ಹುಂಜಕ್ಕೆ 10 ಸಾವಿರ ರೂ.ನಿಂದ ಶುರುವಾಗಿ 1 ಲಕ್ಷ ರೂ. ವರೆಗೆ ರೇಟ್ ಇದೆ ಎಂದು ಕೋಲಾರ ಎಸ್ಪಿ ನಾರಾಯಣ ಮಾಹಿತಿ ನೀಡುತ್ತಾರೆ.
ನಿರ್ದೇಶಕ ಅಟ್ಲಿ ನನಗೆ ಮೋಸ ಮಾಡಿದ!? ರಾಜಾ-ರಾಣಿ ಚಿತ್ರದ ಮತ್ತೊಂದು ಕಹಾನಿ ಬಿಚ್ಚಿಟ್ಟ ನಟಿ ಸಾಕ್ಷಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + twenty =
Remember me
