ಮಂಡ್ಯ:ಬಿಜೆಪಿಯಿಂದ ಟಿಕೆಟ್​ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ, ಪರಿಷತ್​ ಹಾಗೂ ರಾಜ್ಯಸಭಾ ಟಿಕೆಟ್​​ ಹಮಚಿಕೆಯಲ್ಲಿ ಎಲ್ಲಾ ವರ್ಗಗಳಿಗೂ ಪ್ರಾತಿನಿದ್ಯ ಕೊಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ಮುಟ್ಟುವ ಕೆಲಸ ಪಕ್ಷ ಮಾಡಿದೆ. ಗೆಲ್ಲುವ ಪಕ್ಷವಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿಸುತ್ತದೆ. ಕೆಲವೊಮ್ಮೆ ಆಯ್ಕೆ ಸಂದರ್ಭದಲ್ಲಿ ಗೊಂದಲ ಇರುವುದು ಸಹಜ. ವಾಸ್ತವವಾಗಿ ಎಲ್ಲರ ಸಹಮತ ಪಡೆದೆ ಕೋರ್ ಕಮಿಟಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ.  ವಿಧಾನಸಭೆ ಚುನಾವಣೆಗೆ ತುಂಬಾ ಕ್ರಿಯಾಶೀಲರು ಬೇಕಾಗುತ್ತಾರೆ. ಇದಕ್ಕೆ ಹಾಗೇನೂ ಇಲ್ಲ, ಹಾಗಾಗಿ ಜಗ್ಗೇಶ್​ ಅವರನ್ನು ರಾಜ್ಯಸಬೆಗೆ ಆಯ್ಕೆ ಮಾಡಿದ್ದೇವೆ ಎಂದರು.
ಜೆಡಿಎಸ್​ -ಕಾಂಗ್ರೆಸ್ ಅತೃಪ್ತರಿಂದ ಬಿಜೆಪಿಗೆ ವರದಾನವಾಗಲಿದೆ, ಜೆಡಿಎಸ್​​ನಲ್ಲಿ ಈಗಾಗಲೇ 6 ಅತೃಪ್ತರಿದ್ದಾರೆ, ಅವರೆಲ್ಲರೂ ಬಿಜೆಪಿ ಒಳ್ಳೆಯ ಪಾರ್ಟಿ ಅಂತಾ ತೀರ್ಮಾನ ಮಾಡಿದ್ದಾರೆ. ಇನ್ನು ಸಿದ್ದು-ಡಿಕೆಶಿ ಇವರಿಬ್ಬರಿಗೂ ಬುದ್ಧಿ ಕಲಿಸುವ ಆಲೋಚನೆ ಆ ಪಕ್ಷದಲ್ಲಿ ನಡೆಯುತ್ತಿದೆ. ಅವೆಲ್ಲವೂ ಬಿಜೆಪಿ ಪಾಲಿಗೆ ವರದಾನವಾಗಲಿವೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ಅಮಲಿನಲ್ಲಿ ಜೀಪಿನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಯುವಕ -ಯುವತಿಯರಿಗೆ ಶಾಕ್​ ಕೊಟ್ಟ ಪೊಲೀಸರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
