ಕೊಪ್ಪಳ:ಯಾವುದೇ ಕಾರಣಕ್ಕೆ ಹಿಜಾಬ್ ಹಾಕಿಕೊಂಡು ಶಾಲೆಗೆ ಬರುವಂತಿಲ್ಲ, ಹೈಕೋರ್ಟ್​ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​​ ಖಡಕ್​ ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಪಾಲನೆ ಮಾಡದವರಿಗೆ ಶಾಲೆಗೆ ಪ್ರವೇಶವಿಲ್ಲ. ಹಠ ಮಾಡಲು ಅವರಿಗೆ ಹೇಗೆ ಹಕ್ಕಿದೆಯೋ ಹಾಗೆಯೇ ಒಳಗೆ ಬಿಡದೇ ಇರಲು ಕಾನೂನೂ ಸಹ ಇದೆ ಎಂದು ಹೇಳಿದ್ದಾರೆ.
ಒಂದಷ್ಟು ಜನರು ಈ ರೀತಿ ಮತ್ತೆ ಪ್ರಚಾರಕ್ಕೆ ತಂದು ದೇಶದ ಅಶಾಂತಿ ಹಾಳುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ವೋಟ್​​ಬ್ಯಾಂಕ್​ ರಾಜಕಾರಣ ಮಾಡುವ ಪ್ರಯತ್ನ ಇದರಲ್ಲೂ ನಡೆದಿದೆ ಎಂದು ಆರೋಪಿಸಿದ್ದಾರೆ.
ಕರೊನಾದಿಂದ ಮುಕ್ತರಾದ ಬೆನ್ನಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿತ್ತು, ಆಗ ವಿರೋಧ ಪಕ್ಷಗಳು ಈ ಕೆಲಸ ಮಾಡಿವೆ. ಇದನ್ನು ನಾವು ಬರೀ ಹಿಜಾಬ್ ಅಂತಾ ನೋಡುವುದಲ್ಲ, ಇದನ್ನು ಅಶಾಂತಿ ಸೃಷ್ಟಿ ಮಾಡುವ ಒಂದಿಷ್ಟು ಗುಂಪು, ಆ ಗುಂಪಿಗೆ ಬೆಂಬಲ ನೀಡುವ ಒಂದಷ್ಟು ರಾಜಕೀಯ ಪಾರ್ಟಿಗಳು ಇವೆ.ಇವೆರಡನ್ನೂ ನಾವು ನೋಡಬೇಕಿದೆ.
ಹೈ ಕೋರ್ಟ್ ಆದೇಶದ ನಂತರವೂ ಕೆಲ ಪಕ್ಷ ಹಿಜಾಬ್ ಪರ ನಿಂತಿವೆ.ವಿರೋಧ ಪಕ್ಷಗಳು‌ ಅಸೆಂಬ್ಲಿಯಲ್ಲಿ ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ.ಒಂದು ಕಡೆ ವೋಟ್ ಬ್ಯಾಂಕ್ ರಾಜಕಾರಣ ಮತ್ತೊಂದು ಕಡೆ ಮುಸ್ಲಿಂಮರನ್ನು ಸಮಾಜದಿಂದ ಪ್ರತ್ಯೇಕ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ವಿಮಾನ ನಿಲ್ದಾಣದ ಡಿಸ್​​ಪ್ಲೇ ಸ್ಕ್ರೀಂನಲ್ಲಿ ಕಂಡುಬಂತು ನೀಲಿಚಿತ್ರದ ದೃಶ್ಯಗಳು: ತಬ್ಬಿಬ್ಬಾದ ಪ್ರಯಾಣಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + sixteen =
Remember me
