ವಿಲಾಸ ಮೇಲಗಿರಿ ಬೆಂಗಳೂರುಮತದಾನದಿಂದ ಯಾರೂ ಹೊರಗುಳಿಯಬಾರದು ಎಂಬ ಧ್ಯೇಯವನ್ನಿಟ್ಟುಕೊಂಡಿರುವ ಚುನಾವಣಾ ಆಯೋಗ ಮತದಾನ ಪ್ರಮಾಣ ಹೆಚ್ಚಳಕ್ಕೆ ಹಲವು ಹತ್ತು ಪ್ರಯೋಗ ಗಳನ್ನು ಮಾಡುತ್ತಿದೆ. ವೋಟರ್ ಸ್ಲಿಪ್​ನಲ್ಲಿ ಕ್ಯೂಆರ್ ಕೋಡ್ ಸೇರಿ ಮತಗಟ್ಟೆಗಳಲ್ಲಿ ಮತದಾರರಿಗೆ ಭರ್ಜರಿ ಸೌಕರ್ಯ ಕಲ್ಪಿಸುತ್ತಿದೆ. ಇನ್ನು ಮತಗಟ್ಟೆಗಳ ನಿರ್ವಹಣೆಗೆ ವೆಬ್ ಕಾಸ್ಟಿಂಗ್, ವೀಡಿಯೋ ರೆಕಾರ್ಡ್, ಸಿಸಿ ಟಿವಿ ಬಳಕೆ ಮಾಡುತ್ತಿದೆ. ಕರ್ನಾಟಕ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದರೂ 13 ಜಿಲ್ಲೆಗಳ 344 ಮತಗಟ್ಟೆಗಳಿಗೆ ಮೊಬೈಲ್ ನೆಟ್​ವರ್ಕ್ ಇಲ್ಲ. ಅಂತಹ ಕಡೆಗಳಲ್ಲೂ ಮತದಾನಕ್ಕೆ ಅಡ್ಡಿ ಉಂಟಾಗದಂತೆ ನೋಡಿಕೊಳ್ಳಲು ಪೊಲೀಸ್ ವಾಕಿ ಟಾಕಿ ಬಳಸಲಾಗುತ್ತದೆ.
ಸೆಕ್ಟರ್ ಆಫೀಸರ್ ಸಂಪರ್ಕ ಅಧಿಕಾರಿ:ಮತಗಟ್ಟೆ ಸಿಬ್ಬಂದಿ, ಪೊಲೀಸರು ಮತಗಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರ್ಟ್​ವರ್ಕ್ ಸಿಗುವ ಸ್ಥಳಗಳನ್ನು ಗುರುತಿಸಿರುತ್ತಾರೆ. ತುರ್ತು ಸಂದರ್ಭಗಳಲ್ಲಿ ಸೆಕ್ಟರ್ ಆಫೀಸರ್ಸ್​ಗಳು ಅಲ್ಲಿಗೆ ತೆರಳಿ ಮೇಲಧಿಕಾರಿಗಳಿಗೆ ಸಂದೇಶ ರವಾನಿಸುತ್ತಾರೆ. ಈ ಜಿಲ್ಲೆಗಳ ಪ್ರತಿ ತಾಲೂಕು ಕಚೇರಿಗಳಲ್ಲಿ ವಾಕಿಟಾಕಿ ಸಂಪರ್ಕ ವ್ಯವಸ್ಥೆ ಮಾಡಲಾಗುತ್ತದೆ.
ಕಾಡಾನೆ ದಾಳಿಗೆ ಅಂಕುಶ:ಕಾಡಾನೆ ದಾಳಿ ತಡೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಕಾರ್ಯಪಡೆಗಳನ್ನು ರಚಿಸಿದೆ. ಈ ಪಡೆಗಳು ಕಾಡಾನೆ ಓಡಾಟಕ್ಕೆ ಸಂಬಂಧಿಸಿದ ರೂಟ್ ಮ್ಯಾಪ್ ಸಿದ್ಧಪಡಿಸಿವೆ. ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡಗಳು ಆನೆಗಳ ಓಡಾಟದ ಮೇಲೆ ನಿಗಾ ಇಡುತ್ತವೆ. ಆನೆ ದಾಳಿ ತಡೆಗೆ ವಿಶೇಷ ತಂಡಗಳನ್ನೂ ರಚಿಸಿದ್ದು, ಎಂಟ್ರಿ ಪಾಯಿಂಟ್​ಗಳನ್ನು ಗುರುತಿಸಿ ಅವುಗಳನ್ನು ಹಿಮ್ಮೆಟ್ಟಿಸಲಾಗುತ್ತದೆ. ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು, ರಾಮನಗರ, ಮಂಡ್ಯ, ಆನೇಕಲ್, ದಕ್ಷಿಣ ಕನ್ನಡ ಮತ್ತಿತರ ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಿದೆ.
ಮೊಬೈಲ್​ಗೆ ನಿರ್ಬಂಧ:ಮತಗಟ್ಟೆ ಆವರಣದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಬೂತ್​ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಹೋಗುವ ಮೊದಲು ಫೋನ್​ಗಳನ್ನು ಇಡಲು ವಿಶೇಷ ವ್ಯವಸ್ಥೆ ಇರುತ್ತದೆ.
ಕ್ಯೂಆರ್ ಕೋಡ್ ವೋಟರ್ ಸ್ಲಿಪ್:ನಗರ ಪ್ರದೇಶದ ಮತದಾರರಿಗೆ ವೋಟರ್ ಸ್ಲಿಪ್ ಹಿಂಬದಿಯಲ್ಲಿ ಕ್ಯೂಆರ್ ಕೋಡ್ ಮುದ್ರಿಸ ಲಾಗಿದೆ. ಅದನ್ನು ಮೊಬೈಲ್​ನಲ್ಲಿ ಸ್ಕಾ್ಯನ್ ಮಾಡಿದರೆ ಮತಗಟ್ಟೆ ಮಾರ್ಗ ತೋರಿಸಲಿದೆ.
ಮತ ಚಲಾಯಿಸಲು ಖಾಕಿ ಪಡೆಗೆ ಅವಕಾಶ:ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ, ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಾಗಿದ್ದು, ಚುನಾವಣಾ ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿತರಾಗಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ನಿಯೋಜಿತ ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ತಾವು ನಿಯೋಜನೆಗೊಂಡಿರುವ ಮತಗಟ್ಟೆಗಳಲ್ಲಿ ಮತಚಲಾಯಿಸಲು ಈ ಬಾರಿ ಅವಕಾಶ ದೊರೆತಿದೆ.
ವೇತನಸಹಿತ ರಜೆ:ಮತದಾನ ನಡೆಯುವ ದಿನದಂದು ಎಲ್ಲ ಸರ್ಕಾರಿ ಕಚೇರಿಗಳಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳಿಗೂ ಸಾರ್ವತ್ರಿಕ ರಜೆ ನೀಡಲಾಗಿದೆ. ವ್ಯಾಪಾರೋದ್ಯಮ, ಕೈಗಾರಿಕೋದ್ಯಮ, ವಾಣಿಜ್ಯ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ಸಂಸ್ಥೆಗಳಲ್ಲಿ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ.
65 ಅರೆಸೇನಾ ಪಡೆ ನಿಯೋಜನೆ:ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ 65 ಕಂಪನಿ ಅರೆಸೇನಾ ಪಡೆ, 50 ಸಾವಿರ ಸಿವಿಲ್ ಪೊಲೀಸ್ ಬಳಕೆ ಮಾಡುತ್ತಿದ್ದು, 1370 ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, 19,701 ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್ ಮಾಡಲಾಗುತ್ತದೆ. 5ಸಾವಿರ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.
ಮತದಾನದ ಸಮಯ:ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಸಂಜೆ 6ರ ನಂತರ ಮತಗಟ್ಟೆಗೆ ಬರುವವರಿಗೆ ಮತದಾನಕ್ಕೆ ಅವಕಾಶ ದೊರೆಯುವುದಿಲ್ಲ. ಅದಕ್ಕೂ ಮೊದಲೇ ಬಂದು ಸರತಿಯಲ್ಲಿ ನಿಂತಿದ್ದರೆ ಅವಕಾಶ ನೀಡಲಾಗುತ್ತದೆ.
ಮೊಬೈಲ್ ನೆಟ್​ವರ್ಕ್ ಸಿಗದ ಏರಿಯಾ ಗುರುತಿಸಿ ಮತದಾರರಿಗೆ ತೊಂದರೆಯಾದಂತೆ ಮತಗಟ್ಟೆ ನಿರ್ವಹಣೆ ಮಾಡಲು ವಾಕಿ ಟಾಕಿ ಬಳಸಲಾಗುತ್ತದೆ. ಆನೆ ದಾಳಿ ಆತಂಕವಿರುವ ಪ್ರದೇಶದಲ್ಲಿ ಆನೆಗಳ ಕಾಟ ತಪ್ಪಿಸಲು ಆನೆ ಟಾಸ್ಕ್​ಫೋರ್ಸ್​ಗೆ ಸೂಚಿಸಲಾಗಿದೆ.
| ವೆಂಕಟೇಶ್​ಕುಮಾರ್ ಅಪರ ಮುಖ್ಯ ಚುನಾವಣಾಧಿಕಾರಿ, ಸಿಇಒ ಕಚೇರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − seven =
Remember me
