ಬೆಂಗಳೂರು:ಕರೊನಾವೈರಸ್ ವಿರುದ್ಧ ಏಕತೆ ಪ್ರದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ಭಾನುವಾರ ರಾತ್ರಿ ಎಲ್ಲರೂ ಮನೆ ಲೈಟ್ ಆಫ್ ಮಾಡಿದರೂ ವಿದ್ಯುತ್ ಜಾಲ (ಗ್ರಿಡ್) ಹಾಗೂ ವೋಲ್ಟೇಜ್​ನಲ್ಲಿ ಯಾವುದೇ ಸಮಸ್ಯೆಯಾಗದು. ಈ ವಿಷಯದಲ್ಲಿ ನಾಗರಿಕರು ತಲೆ ಕೆಡಿಸಿಕೊಳ್ಳುವುದು ಬೇಡವೆಂದು ಕರ್ನಾಟಕ ವಿದ್ಯುತ್ ಪ್ರಸರಣ ತಜ್ಞರು ಅಭಯ ನೀಡಿದ್ದಾರೆ.
ವಿದ್ಯುತ್ ಬೇಡಿಕೆ, ಬಳಕೆಯಲ್ಲಿ ಹಠಾತ್ ಏರಿಳಿತ ನಿಭಾಯಿಸುವ ಸಾಮರ್ಥ್ಯವನ್ನು ಗ್ರಿಡ್ ಹೊಂದಿದ್ದು, ಇಷ್ಟಕ್ಕೂ ಏ.5ರ ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ಮನೆಯ ಲೈಟ್ ಮಾತ್ರ ಬಂದ್ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿರುವ ಕಾರಣ ಹೆಚ್ಚಿನ ಹೊರೆಯಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಭಾನುವಾರ ರಾತ್ರಿ 9ಕ್ಕೆ 7,000-8,000 ಮೆಗಾ ವಾಟ್ ಬೇಡಿಕೆಯಿರುವ ಅಂದಾಜಿದ್ದು, ಪ್ರಧಾನಿ ಕರೆಯಂತೆ ಎಲ್ಲರೂ ಪ್ರಾಮಾಣಿಕವಾಗಿ ಮನೆಯ ಲೈಟ್​ಗಳನ್ನು ಆಫ್ ಮಾಡಿದರೆ 700ರಿಂದ 800 ಮೆಗಾ ವಾಟ್ ವಿದ್ಯುತ್ ಬೇಡಿಕೆ ಕಡಿಮೆಯಾಗಬಹುದು. ಬೇಡಿಕೆ ಹಠಾತ್ ಕುಸಿತಕ್ಕೆ ಜಲ ಮೂಲದ ವಿದ್ಯುದಾಗರಗಳಲ್ಲಿ ಪರಿಹಾರವಿದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಹೆಚ್ಚು-ಕಡಿಮೆ ಮಾಡಬಹುದು. ಶರಾವತಿ ಜಲ ವಿದ್ಯುತ್ ಯೋಜನಾ ಸ್ಥಾವರದಲ್ಲಿ ದಿಢೀರ್ 1,500 ಮೆಗಾ ವಾಟ್​ವರೆಗೆ ವಿದ್ಯುತ್ ಉತ್ಪಾದನೆ ನಿಲ್ಲಿಸಲು ಅವಕಾಶವಿದೆ ಎಂದು ಕೆಪಿಟಿಸಿಎಲ್-ಎಸ್​ಎಲ್​ಡಿಸಿ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವಾಲಯ ಸ್ಪಷ್ಟನೆ
ವಿದ್ಯುತ್ ಬೇಡಿಕೆ ಏರಿಳಿತ ನಿರ್ವಹಿಸುವುದಕ್ಕೆ ದೇಶದ ವಿದ್ಯುತ್ ಗ್ರಿಡ್ ಸದೃಢ ಹಾಗೂ ಸಶಕ್ತವಾಗಿದ್ದು, ಅಗತ್ಯ ಕ್ರಮವಹಿಸಿರುವ ಕಾರಣ ಯಾವುದೇ ಆತಂಕ ಬೇಡವೆಂದು ಕೇಂದ್ರ ವಿದ್ಯುತ್ ಸಚಿವಾಲಯ ಅಭಯ ನೀಡಿದೆ. ಮನೆ ಲೈಟ್ ಆಫ್ ಮಾಡಬೇಕೆಂದು ಪ್ರಧಾನಿ ಕರೆ ನೀಡಿದ್ದು, ಗೃಹ ಬಳಕೆಯ ರೆಫ್ರಿಜರೇಟರ್, ಏರ್ ಕಂಡೀಷನ್, ಟಿವಿ, ಫ್ಯಾನ್​ಗಳನ್ನು ಬಂದ್ ಮಾಡಬೇಕಾಗಿಲ್ಲ. ಅಲ್ಲದೆ, ಬೀದಿ ದೀಪ ಸೇರಿ ಸಾರ್ವಜನಿಕ ಅಗತ್ಯ ಸೇವೆಗಳಿಗೆ ಯಥಾರೀತಿ ವಿದ್ಯುತ್ ಒದಗಿಸಬೇಕು ಎಂದು ಸ್ಪಷ್ಟಪಡಿಸಿದೆ.
ದೀಪದ ಸುತ್ತ ರಾಜಕೀಯ ಟೀಕೆಗೊಳಗಾದ ಖಾದರ್
ಬೆಂಗಳೂರು: ಪ್ರಧಾನಿ ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಮನೆ ಬಾಗಿಲಲ್ಲಿ ದೀಪ ಬೆಳಗಿ ಎಂದು ಕರೆಕೊಟ್ಟಿದ್ದು, ಈಗ ರಾಜಕೀಯ ತಿಕ್ಕಾಟದ ವಸ್ತುವಾಗಿದೆ. ಅದರಲ್ಲೂ ಮಾಜಿ ಸಚಿವ ಯು.ಟಿ.ಖಾದರ್ ಮತ್ತು ಬಿಜೆಪಿಯ ಶಾಸಕ ರಾಮದಾಸ್ ನೀಡಿದ ಹೇಳಿಕೆಗಳು ವ್ಯಾಪಕ ಚರ್ಚೆ, ಕಟು ವಿಮರ್ಶೆಗೆ ಒಳಗಾಗಿದೆ. ‘ಚಪ್ಪಾಳೆ ತಟ್ಟಾಯ್ತು… ಪಾತ್ರೆ ಬಡಿದಾಯ್ತು. ಈಗ ಕ್ಯಾಂಡಲ್ ಹಚ್ಚಬೇಕೆ? ಪ್ರಧಾನಿಗಳೇ ಇದು ಯಾಕೋ ಸ್ವಲ್ಪ ಜಾಸ್ತಿ ಅನಿಸ್ತಾ ಅಲ್ವಾ?…’ ಎಂದು ಯು.ಟಿ.ಖಾದರ್ ಪ್ರಧಾನಿ ಟ್ವೀಟರ್ ಖಾತೆಗೆ ಅಭಿಪ್ರಾಯ ಟ್ಯಾಗಿಸಿ ಟೀಕಿಸಿದ್ದರು. ಇದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ‘ಮೊನ್ನೆ ಪೊಲೀಸರ ಮೇಲೆ ಕಲ್ಲೆಸೆದರು, ಇಂದು ಡಾಕ್ಟರ್, ಆಶಾ ಕಾರ್ಯ ಕರ್ತೆಯರ ಮೇಲೆ ದಾಳಿ ಮಾಡಿ ಉಗುಳಿದ್ದಾರೆ. ಇದು ಯಾಕೋ ಸ್ವಲ್ಪ ಜಾಸ್ತಿ ಅನಿಸ್ತಾ ಇಲ್ವಾ? ಎಂಬ ದಾಟಿಯ ಹತ್ತಾರು ಸಂದೇಶಗಳು ಖಾದರ್ ಖಾತೆಗೆ ಟ್ಯಾಗ್ ಆಗಿವೆ. ಮೈಸೂರು ಶಾಸಕ ರಾಮದಾಸ್ ಅವರ ದೀಪದ ವ್ಯಾಖ್ಯಾನ ಬಿಜೆಪಿಯನ್ನು ಮುಜುಗರಕ್ಕೆ ತಳ್ಳಿದೆ. ಸ್ವತಃ ಬಿಜೆಪಿ ಸಿಂಪತೈಸರ್ ಎನಿಸಿಕೊಂಡವರೇ ‘ಹೊಸ ಜ್ಯೋತಿಷಿ’, ‘ದಸರಾ ಕೀರ್ತನೆ’ ಎಂಬಿತ್ಯಾದಿಯಾಗಿ ಲೇವಡಿ ಮಾಡಿದ್ದಾರೆ.
ಆಗ ಇಲ್ಲದ್ದು ಈಗ ಏಕೆ?
ಲಾಕ್​ಡೌನ್ ಘೋಷಣೆಯಿಂದಾಗಿ ಉದ್ಯಮ, ವಾಣಿಜ್ಯಿಕ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿ ಬೆಳಗ್ಗೆ 2,000 ಹಾಗೂ ರಾತ್ರಿ ಅವಧಿಯಲ್ಲಿ 1,200 ಮೆಗಾ ವಾಟ್ ಕುಸಿತವಾಗಿದೆ. ಹೀಗೆ ದಿಢೀರ್ ಬೇಡಿಕೆ ಕಡಿಮೆಯಾದಾಗ ಗ್ರಿಡ್​ಗೆ ಸಮಸ್ಯೆಯಾಗಲಿಲ್ಲ. ಭಾನುವಾರ ರಾತ್ರಿ 9 ನಿಮಿಷ ಮನೆ ಲೈಟ್​ಆಫ್ ಮಾಡಿದರೆ ಗ್ರಿಡ್​ಗೆ ಬಾಧಕ, ವೋಲ್ಟೇಜ್ ಏರುಪೇರಾಗುತ್ತದೆಂಬ ಆತಂಕವೇಕೆ? ಎಂದು ಕೆಪಿಟಿಸಿಎಲ್ ಮೂಲಗಳು ಕೇಳಿವೆ. ಉತ್ಪಾದಿತ ವಿದ್ಯುತ್ ವಾಪಸ್ ಉತ್ಪಾದನಾ ಘಟಕಗಳಿಗೆ ಹೋಗದಂತೆ ಅಗತ್ಯ ಕ್ರಮವಹಿಸಲಾಗಿದೆ. ವಿದ್ಯುತ್ ಮಾರ್ಗ, ಉಪ ಕೇಂದ್ರಗಳು, ಪರಿವರ್ತಕಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಸಿಬ್ಬಂದಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಲಾಗುತ್ತಿದೆ. ಭಾನುವಾರ ರಾತ್ರಿ 9ರ ವೇಳೆ ತುಸು ಹೆಚ್ಚಿನ ನಿಗಾವಹಿಸಿ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿವೆ.
ಕರೊನಾ ಮಣಿಸಲು ಆಯುರ್ವೇದ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ: ಆಯುಷ್​ ಸಚಿವಾಲಯದ ಸಲಹೆಗಳು ಹೀಗಿವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + three =
Remember me
