ಬೆಂಗಳೂರು:ದಮನಿತ ಸಮುದಾಯಗಳಿಗೆ ಮಂಜೂರಾದ ಜಮೀನಿಗೆ ಕಾಯ್ದೆ ಬಲ ನೀಡುವ ಮಹತ್ವದ ನಿರ್ಣಯವನ್ನು ಸಚಿವ ಸಂಪುಟ ವಿಶೇಷ ಸಭೆಯು ಮಂಗಳವಾರ ಅಂಗೀಕರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲ ಜಮೀನುಗಳ ಪರಭಾರೆ ನಿಷೇಧ- ಪಿಟಿಸಿಎಲ್) ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ವಿಸõತವಾಗಿ ರ್ಚಚಿಸಿತು. ಭೂರಹಿತ ದಲಿತರಿಗೆ ಸರ್ಕಾರ ಮಂಜೂರು ಮಾಡಿದ ಜಮೀನು ಅವರ ಬಳಿಯೇ ಉಳಿಯದೆ ಅಕ್ರಮವಾಗಿ ಪರಭಾರೆಯಾಗುತ್ತಿದೆ. ಪರಭಾರೆ ತಿಳಿದೂ ವಾಪಸ್ ಪಡೆಯುವುದಕ್ಕೆ ಹಲವು ಅಡೆ ತಡೆಗಳಿರುವುದನ್ನು ಗಂಭೀರವಾಗಿ ಅವಲೋಕಿಸಿತು.
ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಕಾನೂನು ಇಲಾಖೆ ನೀಡಿದ ವರದಿಯನ್ನು ಸಭೆ ಪರಾಮಶಿಸಿತು. 1965ರ ಅಕ್ಟೋಬರ್ 2ರಿಂದ ಈ ಕಾಯ್ದೆ ಜಾರಿಯಲ್ಲಿದೆ. ಅಂದಿನಿಂದಲೇ ಪೂರ್ವಾನ್ವಯವಾಗುವಂತೆ ಭೂಪರಭಾರೆ ಪ್ರಕರಣಗಳನ್ನು ಪ್ರಶ್ನಿಸಲು ಯಾವುದೇ ಕಾಲಮಿತಿಯಿಲ್ಲ ಎಂಬ ಅಂಶವನ್ನು ಕಾಯ್ದೆಯಲ್ಲಿ ಸೇರಿಸಲು ಇಲಾಖೆ ಶಿಫಾರಸು ಮಾಡಿದೆ.
ದಲಿತರಿಗೆ ಮಂಜೂರಾದ ಜಮೀನು ದಲಿತರ ಬಳಿಯೇ ಉಳಿಸುವ ಜತೆಗೆ ಅಕ್ರಮ ಪರಭಾರೆಯು ಮೂಲ ಮಂಜೂರಾತಿದಾರರ ಮರಳಿಸಲು ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿತು. ಅಲ್ಲದೆ, ಅಕ್ರಮ ಪರಭಾರೆ ಪ್ರಕರಣಗಳಲ್ಲಿ ಪ್ರಶ್ನಿಸಲು ಕಾಲಮಿತಿ ವಿಧಿಸುವ ಬಗ್ಗೆ ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ. ನಿರ್ದಿಷ್ಟ ಕಾಲಮಿತಿ ವಿಧಿಸಿದರೆ ದಲಿತರಿಗೆ ನ್ಯಾಯ ಸಿಗುವ ಬದಲು ಮತ್ತೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.
ಕಾನೂನು ಇಲಾಖೆಯ ಶಿಫಾರಸು ಸರಿಯಾಗಿದೆ. ಪರಭಾರೆ ಪ್ರಕರಣಗಳಲ್ಲಿ ಪ್ರಶ್ನಿಸಲು ಯಾವುದೇ ಕಾಲಮಿತಿ ಕೂಡದು ಎಂಬ ತಿದ್ದುಪಡಿ ತರುವುದಕ್ಕೂ ಸಭೆ ಸಮ್ಮತಿಸಿದೆ.
ದಲಿತ ಸಂಘಟನೆಗಳ ಮುಖಂಡರೊಂದಿಗೆ ಸಿದ್ದರಾಮಯ್ಯ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಬೇಕು, ಕಾಲಮಿತಿ ವಿಧಿಸಬಾರದು ಎಂದು ಒತ್ತಾಯಿಸಲಾಗಿತ್ತು.
ಅಧಿವೇಶನದಲ್ಲಿ ಮಂಡನೆ:ಪಿಟಿಸಿಎಲ್ ಹಾಗೂ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ತರುವ ಎರಡೂ ಮಹತ್ವದ ಮಸೂದೆಗಳನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಲು ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದ ವಿಶೇಷ ಸಭೆ ಕರೆದು, ಎರಡೂ ವಿಧೇಯಕಗಳನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಲು ರಹದಾರಿ ಪಡೆದುಕೊಂಡಿದ್ದಾರೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮೂಲಕ ಶೋಷಿತರ ಹಿತ ಕಾಯಲು ಸರ್ಕಾರ ಬದ್ಧವೆಂದು ಸಾರಲು ಸಾಧ್ಯವಾಗಲಿದೆ.
ಮೋಟಾರು ವಾಹನ ಕಾಯ್ದೆಯಡಿ ಅಪಘಾತ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ಕೋರಿರುವ ಲಕ್ಷಾಂತರ ಪ್ರಕರಣಗಳು ಹೈಕೋರ್ಟ್​ನಲ್ಲಿ ಬಾಕಿಯಿವೆ. ಇದರಿಂದಾಗಿ ಹೈಕೋರ್ಟ್​ಗೆ ಕೆಲಸದ ಒತ್ತಡ ಹೆಚ್ಚಿದ್ದು, ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯದಾನ ವಿಳಂಬವಾಗುತ್ತದೆ ಎಂಬುದನ್ನು ಸಚಿವ ಸಂಪುಟ ವಿಶೇಷ ಸಭೆ ರ್ಚಚಿಸಿತು. ಅಪಘಾತ ಪ್ರಕರಣಗಳಲ್ಲಿ ಒಂದು ಕೋಟಿ ರೂ. ವರೆಗಿನ ಪರಿಹಾರ ಕೋರಿದ ಪ್ರಕರಣಗಳನ್ನು ಜಿಲ್ಲಾ ಕೋರ್ಟ್​​ಗಳಿಗೆ ವರ್ಗಾಯಿಸಿದರೆ, ಹೈಕೋರ್ಟ್ ಮೇಲೆ ಹೊರೆ ತಗ್ಗಲಿದೆ. ಜತೆಗೆ, ತ್ವರಿತ ಇತ್ಯರ್ಥಕ್ಕೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಅಂದಾಜು ಎರಡು ಲಕ್ಷ ಪ್ರಕರಣಗಳನ್ನು ಹೈಕೋರ್ಟ್​ನಿಂದ ಜಿಲ್ಲಾ ಕೋರ್ಟ್​ಗಳಿಗೆ ವರ್ಗಾಯಿಸಲು ತೀರ್ವನಿಸಿ, ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಸಭೆ ಅಸ್ತು ಎಂದಿದೆ.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
