ಬೆಂಗಳೂರ:ಡಿಜೆ ಹಳ್ಳಿ ಗಲಭೆ ಪ್ರಕರಣದ ಹಿಂದೆ ರಾಜಕೀಯ ದುರುದ್ದೇಶದ ಹೊಗೆಯಾಡುತ್ತಿದ್ದು, ಪಾಲಿಕೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಿದ್ರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಶಾಸಕ ಅಖಂಡ​ ಶ್ರೀನಿವಾಸ್ ಮನೆ ಮುಂದಿನ ಗಲಭೆಯಲ್ಲಿ ಮೂವರ ಸಾವು, 100ಕ್ಕೂ ಹೆಚ್ಚು ಆರೋಪಿಗಳ ಬಂಧನ
ಅಖಂಡ ಶ್ರೀನಿವಾಸ್ ಅಳಿಯ ಆರೋಪಿ ನವೀನ್ ಪಾಲಿಕೆ ಚುನಾವಣೆ ತಯಾರಿ ನಡೆಸುತ್ತಿದ್ದರೂ ಎನ್ನಲಾಗಿದೆ. ಕಾವಲುಭೈರಸಂದ್ರ ವಾರ್ಡ್​ನಿಂದ ಸ್ಪರ್ಧಿಸಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಹೀಗಾಗಿ ಮತಕ್ಕಾಗಿ ಒಂದು ಕೋಮಿನ ಓಲೈಕೆ ಮಾಡಲು ನವೀನ್​ ಅವಹೇಳನಕಾರಿ ಫೇಸ್​ಬುಕ್ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ.
ಇನ್ನೊಂದೆಡೆ ಕಾರ್ಪೋರೇಟರ್ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿಸಿ ನಡೆಸಿರುವ ಮುಜಾಮುಲಿಮ್​ ಪಾಷ ನವೀನ್​ನನ್ನು ಸರ್ವನಾಶ ಮಾಡಲು ಗಲಾಟೆಹೆ ಕುಮ್ಮಕ್ಕೂ ನೀಡಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಗಲಭೆ ಸೃಷ್ಟಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆ ಪ್ರಕರಣ: ಕಾರ್ಪೊರೇಟರ್ ಚುನಾವಣೆಗೆ ಸ್ಪರ್ಧಿಸಿದ್ದ ಎಸ್​ಡಿಪಿಐ ಸದಸ್ಯನ ಬಂಧನ
ಈಗಾಗಲೇ ಆರೋಪಿ ನವೀನ್​ ಹಾಗೂ ಮುಜಾಮಿಲ್​ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ 100ಕ್ಕೂ ಅಧಿಕ ಮಂದಿಯನ್ನು ಗಲಾಟೆಗೆ ಕರೆತಂದಿದ್ದ ಇನ್ನೊಬ್ಬ ಆರೋಪಿ ಅಯಾಜ್​ನನ್ನು ಬಂಧಿಸಲಾಗಿದೆ. ಗಲಭೆ ವೇಳೆ 100 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಭೆ ನಿಯಂತ್ರಿಸಲು ನಡೆದ ಗೋಲಿಬಾರ್​ನಲ್ಲಿ ಇಬ್ಬರು ಮೂವರು ಸಾವಿಗೀಡಾಗಿದ್ದು, 80 ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಸಾಕಷ್ಟು ವಾಹನಗಳು ಜಖಂಗೊಂಡಿದ್ದು, ಗಲಭೆಯಲ್ಲಿ ಬೆಂಕಿಯನ್ನು ಇಡಲಾಗಿದೆ. ಸಾರ್ವಜನಿಕರು ಸಹ ತೊಂದರೆಯನ್ನು ಅನುಭವಿಸಿದ್ದಾರೆ.
ಘಟನೆ ಹಿನ್ನೆಲೆ ಏನು?ಶಾಸಕ ಅಖಂಡ ಶ್ರೀನಿವಾಸ್​ ಅಳಿಯ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಗಲಭೆ ನಡೆದಿದೆ. ಇದೀಗ ಪ್ರಕರಣಕ್ಕೆ ರಾಜಕೀಯ ದುರುದ್ದೇಶ ತಳುಕು ಹಾಕಿಕೊಂಡಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆ ಪ್ರಕರಣ ಪೂರ್ವ ನಿಯೋಜಿತವೇ?: ಬೇಡವೆಂದು ಗೊಗರೆದರು ದಯೆ ತೋರದ ಕಿಡಿಗೇಡಿಗಳು
ಡಿಜೆ ಹಳ್ಳಿ ಗಲಭೆಕೋರರಿಗೆ ಸಿಎಂ ಬಿಎಸ್​ವೈ ಖಡಕ್​ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
