ಬೆಂಗಳೂರು:ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ವೇಳಾಪಟ್ಟಿ ಶೀಘ್ರ ಪ್ರಕಟವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ.
ಮಸ್ಕಿ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್​ರನ್ನು ಕಣಕ್ಕೆ ಇಳಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಗಳ ತಲಾಷೆ ಮುಂದುವರಿದಿದೆ. ಪಕ್ಷಕ್ಕೆ ನೆಲೆಯೇ ಇಲ್ಲದ ಕೆ.ಆರ್.ಪೇಟೆ ಹಾಗೂ ಶಿರಾ ಗೆಲುವಿನ ಬಳಿಕ ಹೊಸ ಹುಮ್ಮಸ್ಸು ತುಂಬಿಕೊಂಡಿದೆ. ಈ ಜಯದ ರೂವಾರಿ ಪೈಕಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಪ್ರಮುಖರಾಗಿ ಗಮನ ಸೆಳೆದಿದ್ದಾರೆ. ಪಕ್ಷದ ಹಲವು ಮುಖಂಡರು ಹಾಗೂ ಎರಡನೇ ಹಂತದ ನಾಯಕರ ಪಾಲಿಗೆ ‘ಚುನಾವಣಾ ತಂತ್ರಗಾರ’ರಾಗಿ ವಿಜಯೇಂದ್ರ ಹೊರ ಹೊಮ್ಮಿದ್ದು, ಬಸವಕಲ್ಯಾಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಹೆಚ್ಚಿದ ಒತ್ತಡವೂ ನಿದರ್ಶನವೆಂದು ಪಕ್ಷದ ಮೂಲಗಳು ತಿಳಿಸಿವೆ.
ಒಗ್ಗಟ್ಟಿನ ಸೂತ್ರ:ಪೇಜ್ ಪ್ರಮುಖರಿಂದ ಹಿಡಿದು ಉಸ್ತುವಾರಿ ಹಂತದ ತನಕ ಸಂಘಟನಾತ್ಮಕ ಕಾರ್ಯತಂತ್ರ, ವ್ಯವಸ್ಥಿತ ಕಾರ್ಯಯೋಜನೆಯ ಪರಿಣಾಮಕಾರಿ ಪಾತ್ರ ವಹಿಸಿದೆ. ಜತೆಗೆ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಗ್ಗಟ್ಟಿನಿಂದ ಕೆಲಸ ಮಾಡುವ ನಿಟ್ಟಿನಲ್ಲಿ ವಿಜಯೇಂದ್ರ ಬೆಸೆದ ತಂಡಸ್ಪೂರ್ತಿ ಗಮನಾರ್ಹವಾಗಿದೆ. ಇದೇ ಕಾರಣಕ್ಕೆ ಬಸವಕಲ್ಯಾಣಕ್ಕೆ ಅವರನ್ನೇ ಕರೆ ತರಲೆಂದು ಆಂತರಿಕವಾಗಿ ಪ್ರಯತ್ನ ನಡೆಸುತ್ತಿದೆ. ಕ್ಷೇತ್ರಕ್ಕೆ ಈಗಾಗಲೆ ಭೇಟಿ ನೀಡಿ ಎಲ್ಲ ಹಂತದ ಮುಖಂಡರ ಜತೆಗೆ ವಿಜಯೇಂದ್ರ ರ್ಚಚಿಸಿದ್ದು, ಅವರ ಅಭಿಪ್ರಾಯಕ್ಕೆ ಓಗೊಟ್ಟ ಸಿಎಂ ಮರಾಠ ಅಭಿವೃದ್ಧಿ ಮಂಡಳಿ ರಚಿಸಿದ ಕಾರಣ ಕ್ಷೇತ್ರದಲ್ಲಿ ಪಕ್ಷದ ಪರ ವಾತಾವರಣ ಸೃಷ್ಟಿಸಿದೆ.
ಕಳೆದ ಬಾರಿ ಸೋತ ಮಲ್ಲಿಕಾರ್ಜುನ ಖೂಬಾ ಜತೆಗೆ ಸಂಜಯ್ ಪಟವಾರಿ, ಪ್ರದೀಪ್ ವಾದ್ಡೆ, ಅನಿಲ್ ಭೂಸಾರೆ ಹಾಗೂ ಶರಣು ಸಲಗಾರ ಪಕ್ಷದ ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದಾರೆ. ಚುನಾವಣೆ ವೇಳಾಪಟ್ಟಿ ಪ್ರಕಟವಾದ ಬಳಿಕ ಈ ಪಟ್ಟಿಗೆ ಇನ್ನಷ್ಟು ಆಕಾಂಕ್ಷಿಗಳು ಸೇರುವ ಸಾಧ್ಯತೆಗಳಿದ್ದು, ಪೈಪೋಟಿ ಪಕ್ಷದ ಜನಪ್ರಿಯತೆ, ವರ್ಚಸ್ಸು ಬಿಂಬಿಸುತ್ತದೆ. ಅದೇ ಕಾಲಕ್ಕೆ ಅತೃಪ್ತಿ, ಭಿನ್ನಮತ ಸ್ಪೋಟಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಪ್ರಬಲ ಆಕಾಂಕ್ಷಿಗಳಲ್ಲಿ ಯಾರಿಗೆ ಕೊಟ್ಟರೂ ಉಳಿದವರ ಮುನಿಸು ಪಕ್ಷಕ್ಕೆ ಮುಳುವಾಗುವುದನ್ನು ತಪ್ಪಿಸಲು ವಿಜಯೇಂದ್ರ ಸೂಕ್ತವೆಂದು ಕೆಲವು ಮುಖಂಡರು ಸಿಎಂ ಮುಂದೆ ಈ ಸೂತ್ರ ಮಂಡಿಸಿದ್ದಾರೆ. ಈ ವಿಷಯದಲ್ಲಿ ಸಿಎಂ ಹಾಗೂ ವರಿಷ್ಠರ ಮನದಲ್ಲೇನಿದೆ ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.
ನಾನು ಜೀನ್ಸ್​ ಧರಿಸಿದ್ರೆ 4ನೇ ಮದ್ವೆಯಾಗ್ತೇನೆ ಎಂದು ಗಂಡನಿಂದ ಬೆದರಿಕೆ- ಪೊಲೀಸ್​ ಕಂಪ್ಲೇಂಟ್​

ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − thirteen =
Remember me
