ಬೆಂಗಳೂರು:ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ರಮ್​, ವಿಸ್ಕಿ,ಬ್ರಾಂಡಿ ಮದ್ಯಗಳ ಕೊರತೆಯಾಗಿದೆ.
ರಾಜ್ಯದಲ್ಲಿ 32ಗಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳಿವೆ.ಪ್ರತಿ ನಿತ್ಯ ಆಯಾ ಕಂಪನಿಗಳು ತಮ್ಮ ಬ್ರ್ಯಾಂಡ್​​ ಅಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸಿ ಮದ್ಯ ಮಾರಾಟ ಮಾಡುತ್ತಿವೆ. ಆದರೆ, ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಕೆಲ ತಯಾರಿಕಾ ಕಂಪನಿಗಳು ಸೂಕ್ತವಾಗಿ ಮದ್ಯವನ್ನು ಉತ್ಪಾದಿಸುತ್ತಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಲ್ಲಿ (ಕೆಎಸ್​ಬಿಸಿಎಲ್​) ಸೂಕ್ತ ಮದ್ಯ ದಾಸ್ತಾನು ಇಲ್ಲದೆ ಮದ್ಯದಂಗಡಿ ಮಾಲೀಕರು ಪರದಾಡುತ್ತಿದ್ದಾರೆ.ಸರ್ಕಾರ ನಿಗದಪಡಿಸಿದ್ದ ಆದಾಯ ಗುರಿ ತಲುಪಲು ಇಲಾಖೆ ಅಧಿಕಾರಿಗಳು ಸಹ ಸಂಕಟ ಪಡುತ್ತಿದ್ದಾರೆ.
ರಾಜ್ಯದಲ್ಲಿ 3,988 ವೈನ್​ಶಾಪ್​(ಸಿಎಲ್​2), 279 ಕ್ಲಬ್​ (ಸಿಎಲ್​4), 78 ಸ್ಟಾರ್​ ಹೋಟೆಲ್​ ( ಸಿಎಲ್​6ಎ), 2,382 ಹೋಟೆಲ್​ ಮತ್ತು ವಸತಿ ಗೃಹ (ಸಿಎಲ್​-7), 68 ಮಿಲಿಟರಿ ಕ್ಯಾಂಟಿನ್​ ಮಳಿಗೆ (ಸಿಎಲ್​8), 3,634 ಬಾರ್​ ಆ್ಯಂಡ್​ ರೆಸ್ಟೋರೆಂಟ್​ (ಸಿಎಲ್​9), 1,041 ಎಂಎಸ್​ಐಎಲ್​ (ಸಿಎಲ್​11ಸಿ) ಮತ್ತು 745 ಆರ್​ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 65-70 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ.
ಒಂದೇ ದಿನದಂದು 100 ಅಬಕಾರಿ ಅಧಿಕಾರಿಗಳ ವರ್ಗ
ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್​ ದರ ಹೆಚ್ಚಿಸಿ ಸರ್ಕಾರ ಆ.26ರಂದು ಅಧಿಸೂಚನೆ ಹೊರಡಿಸಿತ್ತು. ಒಟ್ಟು 18 ಸ್ಲ್ಯಾಬ್​ಗಳ ಸಂಖ್ಯೆಯನ್ನು 16ಕ್ಕೆ ಇಳಿಸಲಾಗಿತ್ತು. ಇದರಿಂದಾಗಿ ಮೊದಲ ಮೂರು ಸ್ಲ್ಯಾಬ್​ಗಳಲ್ಲಿ ದರ ವ್ಯತ್ಯಸವಾಗಿಲ್ಲ.4ನೇ ಸ್ಲ್ಯಾಬ್​ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಯಿತು. 5ನೇ ಸ್ಲ್ಯಾಬ್​ನಿಂದ 16ನೇ ಸ್ಲ್ಯಾಬ್​ವರೆಗೆ ದರ ಕ್ರಮೇಣ ಇಳಿಕೆಯಾಯಿತು. ಹೀಗಾಗಿ, ಪುಲ್​ ಬಾಟಲ್​ ರಮ್​, ವಿಸ್ಕಿ, ಬ್ರಾಂಡಿಗಳ ಮೇಲೆ ಗರಿಷ್ಠ 500-600 ರೂ.ದರ ಇಳಿಕೆಯಾಯಿತು. ಆದರೆ, ತಯಾರಿಕೆ ಸೇರಿ ಇತರೆ ಕಚ್ಛಾವಸ್ತುಗಳ ಬೆಲೆ ಏರಿಕೆಯಿಂದಾಗಿ ಮದ್ಯ ತಯಾರಿಸಲು ಸಾಕಷ್ಟು ಹಣ ವ್ಯಯವಾಗುತ್ತಿದ್ದು, ಮದ್ಯ ತಯಾರಿಸಲು ನಷ್ಟ ಉಂಟಾಗುತ್ತಿದೆ ಎನ್ನುವುದು ಕೆಲ ತಯಾರಿಕಾ ಕಂಪನಿಗಳ ವಾದವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 5 =
Remember me
