ದಾವಣಗೆರೆ:ಆಹಾರ ಕಿಟ್​ ಪಡೆಯಲು ಬಂದಿದ್ದ ಜನತೆ ನಾ ಮುಂದು, ತಾ ಮುಂದು ಎಂಬಂತೆ ಒಮ್ಮೆಲೆ ನುಗ್ಗಿದ್ದರಿಂದ ವೃದ್ಧರು, ಮಹಿಳೆಯರು ತುಳಿತಕ್ಕೊಳಗಾದರು.
ಜಗಳೂರು ಪಟ್ಟಣದ ತರಳಬಾಳು ಕೇಂದ್ರದ ಮುಖ್ಯದ್ವಾರದಲ್ಲಿ ಮಂಗಳವಾರ ಅರಸಿಕೆರೆ ಹೋಬಳಿ ಕಲ್ಲುಗಣಿ ಕ್ರಷರ್ ಮಾಲೀಕರು ಆಹಾರ ಕಿಟ್​ಗಳನ್ನು ನೀಡಿದ್ದರು. ಇದನ್ನು ಪಡೆಯಲು ಬಂದಿದ್ದ ಸುತ್ತಮುತ್ತಲ ಸಾರ್ವಜನಿಕರ ನಡುವೆ ನೂಕುನುಗ್ಗಲು ಏರ್ಪಟ್ಟಿತು.
ಇದನ್ನೂ ಓದಿರಿಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!
ಆಹಾರ್​ ಕಿಟ್​ ವಿತರಿಸಲು ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಎಸ್.ವಿ. ರಾಮಚಂದ್ರ ಅವರ ಬರುವಿಕೆ ತಡವಾಗಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲರಾದರು. ಒಮ್ಮೆಲೆ ಗೇಟ್ ತೆರೆದಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತು. ಗೇಟ್​ ಮುಂದೆ ಆರಂಭದಲ್ಲಿ ನಿಂತಿದ್ದ ವೃದ್ಧರು ಕಾಲ್ತುಳಿತಕ್ಕೆ ಸಿಕ್ಕರು. ಸ್ಥಳದಲ್ಲೇ ಇದ್ದ ಕೆಲವರು ಮಧ್ಯ ಪ್ರವೇಶಿಸಿ ಅವರನ್ನು ರಕ್ಷಿಸಿದರು.
ಇದನ್ನೂ ಓದಿರಿಬಾಲಿವುಡ್‌ನ ‘ಗಾಸಿಪ್ ಕ್ವೀನ್’ ಯಾರು ಗೊತ್ತಾ? ಅನನ್ಯ ಪಾಂಡೆ ಹೇಳುತ್ತಾರೆ ಕೇಳಿ …
https://www.facebook.com/VVani4U/videos/562893887987629/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
