ಕೊಕಟನೂರ (ಬೆಳಗಾವಿ):ನದಿಯಲ್ಲಿ ತೇಲಿ ಬಂದ ಶವದಲ್ಲಿ ಏನಿರುತ್ತೆ? ದೇಹದ ಮೇಲೆ ಗಾಯದ ಕಲೆ, ಜಲಚರವಾಸಿಗಳು ಕಚ್ಚಿ ತಿಂದಿರುವ ಗುರುತು, ಮೈಮೇಲಿನ ಬಟ್ಟೆ, ಹೆಚ್ಚೆಂದರೆ ಸಣ್ಣಪುಟ್ಟ ಆಭರಗಳು ಇರಬಹುದಷ್ಟೆ. ಆದರಿಲ್ಲೊಂದು ಶವದ ಜತೆಗೆ ಬರೋಬ್ಬರಿ ಒಂದೂವರೆ ಕೆಜಿ ಗಟ್ಟಿ ಚಿನ್ನ ಸಿಕ್ಕಿದೆ!
ಹೌದು, ಅಥಣಿ ತಾಲೂಕಿನ ಅವರಖೋಡ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಅದರೊಂದಿಗೆ ಒಂದೂವರೆ ಕೆಜಿ ಬಂಗಾರ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮಿರಜ ತಾಲೂಕಿನ ಪಾಟಗಾಂವ ಗ್ರಾಮದ ಸಾಗರ ಪಾಟೀಲ(30)ನ ಶವ ಅ.4ರಂದು ಅವರಖೋಡ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ತೇಲಿ ಬರುತ್ತಿತ್ತು. ಇದನ್ನು ಕಂಡ ಸ್ಥಳೀಯರು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಶವದೊಂದಿಗೆ 1.5 ಕೆ.ಜಿ ಗಟ್ಟಿ ಬಂಗಾರವೂ ದೊರೆತಿದೆ. ಶವದ ಮೇಲೆ ಗಾಯದ ಗುರುತು ಕಂಡುಬಂದಿದೆ. ಶವವನ್ನು ಕುಟುಬಂಸ್ಥರಿಗೆ ಹಸ್ತಾಂತರಿಸಿದ್ದು, ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್​ಐ ಕುಮಾರ ಹಾಡಕಾರ, ತನಿಖಾ ಸಹಾಯಕ ಲಕ್ಷ್ಮಣ ಅಜ್ಜಣಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ನಾನು ದಂಡ ಕಟ್ಟಿದ್ದೀನಿ, ಇನ್ನು 24 ಗಂಟೆ ಮಾಸ್ಕ್ ಹಾಕಲ್ಲ..!

VIDEO| ಸಲಿಂಗ ಮದುವೆಯಾದ ಕನ್ನಡಿಗ! ಆತನನ್ನು ಹೊರದಬ್ಬಲು ಸಜ್ಜಾಗಿದೆ ಕೊಡವ ಜನಾಂಗ

ಬೆಳಗ್ಗೆ ಮನೆಯಲ್ಲಿದ್ದ ಬಾಲಕ ಮಧ್ಯಾಹ್ನ ಪೊದೆಯಲ್ಲಿ ಶವವಾಗಿ ಬಿದ್ದಿದ್ದ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
