ಬೆಂಗಳೂರು: ರಾಜ್ಯ ಸರ್ಕಾರ 6 ತಿಂಗಳ ರಸ್ತೆ ತೆರಿಗೆ ವಿನಾಯಿತಿ ಸೇರಿ ವಿವಿಧ ಬೇಡಿಕೆ ಈಡೇರಿ ಸುವವರೆಗೂ ಪ್ರವಾಸಿ ವಾಹನ, ಖಾಸಗಿ ಬಸ್​ಗಳನ್ನು ರಸ್ತೆಗೆ ಇಳಿಸದಿರಲು ರಾಜ್ಯ ಟ್ರಾವೆಲ್ ಆಪರೇಟರ್ ಸಂಘ ನಿರ್ಧರಿಸಿದೆ.
ಲಾಕ್ ಡೌನ್ ತೆರವಾಗಿ ವಾಹನ ಸಂಚಾರಕ್ಕೆ ಅನುಮತಿ ನೀಡಿದರೂ ನಾವು ವಾಹನಗಳನ್ನು ರಸ್ತೆಗೆ ಇಳಿಸುವುದಿಲ್ಲ. 2 ತಿಂಗಳಿಂದ ಆದಾಯ ಇಲ್ಲದೆ ಪ್ರವಾಸಿ ವಾಹನ ಹಾಗೂ ಖಾಸಗಿ ವಾಹನ ಮಾಲೀಕರು, ಚಾಲಕರು ಸಂಕಷ್ಟದಲ್ಲಿದ್ದಾರೆ. ಎಲ್ಲ ವಲಯಕ್ಕೂ ಪರಿಹಾರದ ಪ್ಯಾಕೇಜ್ ನೀಡಿರುವ ಸರ್ಕಾರ ಗಳು ಖಾಸಗಿ ಬಸ್ ಮಾಲೀಕರಿಗೆ ಯಾವುದೇ ರೀತಿಯ ನೆರವು ನೀಡಿಲ್ಲ. ನಮ್ಮ ನೆರವಿಗೆ ಬರುವವರೆಗೂ ಪ್ರವಾಸಿ ವಾಹನ, ಕಾಂಟ್ರ್ಯಾಕ್ಟ್, ಸ್ಟೇಜ್ ಆಧಾರಿತ ಖಾಸಗಿ ಬಸ್ಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿವೃದ್ಧರು, ಮಕ್ಕಳು ಹೊರಗೆ ಬರುವಂತಿಲ್ಲ
ಆಯುಕ್ತರಿಗೆ ಮನವಿ ಸಲ್ಲಿಕೆ:ಪ್ರತಿ ವರ್ಷ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ರಸ್ತೆ ತೆರಿಗೆ ಪಾವತಿಸುತ್ತೇವೆ. ಆದರೆ, ಈಗಿನ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಗಳು ಖಾಸಗಿ ವಾಹನ ಮಾಲೀಕರ ಕೈ ಹಿಡಿಯದಿರುವುದು ನೋವಿನ ಸಂಗತಿ. ಎರಡು ತ್ರೖೆ ಮಾಸಿಕ ರಸ್ತೆಗೆ ತೆರಿಗೆ ವಿನಾಯಿತಿ ನೀಡಬೇಕು, ಆರು ತಿಂಗಳ ರಸ್ತೆ ತೆರಿಗೆಯಲ್ಲಿ ಶೇ.50 ವಿನಾಯಿತಿ ನೀಡಬೇಕು ಎಂಬುದು ಸೇರಿ ನಮ್ಮ ಬೇಡಿಕೆಗಳ ಪಟ್ಟಿಯನ್ನು ಸೋಮವಾರ ಸಾರಿಗೆ ಇಲಾಖೆ ಆಯುಕ್ತರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
VIDEO| ದಾವಣಗೆರೆಯಲ್ಲಿ ಇಳೆಗೆ ತಂಪು ತಂದ ಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 9 =
Remember me
