ಬೆಂಗಳೂರು:ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ ಕುರಿತು ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, 26 ಬಸ್‌ಗಳಲ್ಲಿನ ಕ್ಯಾಮೆರಾ ಪರಿಶೀಲನೆ ಬೆಂಗಳೂರು ನಗರವನ್ನು ಸೇಫ್ ಸಿಟಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ‌ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಸೇಫ್ ಸಿಟಿ ಮಾಡಿ ಬಹಳ ಹಣ ಖರ್ಚು ಮಾಡಿ, ಕ್ಯಾಮೆರಾ ಹಾಕಿದ್ದೇವೆ. ಕಮಾಂಡ್ ಸೆಂಟರ್ ಮಾಡಿ ಎಲ್ಲವನ್ನು ಮಾನಿಟರ್ ಮಾಡ್ತಿದ್ದೇವೆ ಎಂದರು.
ಇದನ್ನೂ ಓದಿ:‘ನಾನು ಅಥವಾ ಗೃಹ ಇಲಾಖೆಯ ಅಧಿಕಾರಿಗಳು ಹೇಳಿದ್ರೆ ಮಾತ್ರ ಅಧಿಕೃತ ಎಂದು ಪರಿಗಣಿಸಬೇಕು’: ಡಾ.‌ ಜಿ. ಪರಮೇಶ್ವರ
“ಬೆಂಗಳೂರು ಈಗ ಸುರಕ್ಷತೆಯಲ್ಲಿ ಎಷ್ಟೋ ಉತ್ತಮವಾಗಿದೆ. ಸ್ಥಳದ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸ್ಪೋಟದ ಸಂದರ್ಭದಲ್ಲಿ 26 ಬಸ್‌ಗಳು ಸಂಚರಿಸಿವೆ. 26 ಬಸ್‌ಗಳಲ್ಲಿನ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ತಾಂತ್ರಿಕ ವಿಚಾರಗಳ ಬಗ್ಗೆ ಹೇಳುವುದಿಲ್ಲ” ಎಂದು ತಿಳಿಸಿದರು.
ರಕ್ಷಣೆ‌ ಮಾಡುವ ಪ್ರಸಂಗವಿಲ್ಲ:“ವಿಧಾನಸೌಧ ಆವರಣದಲ್ಲಿ ನಡೆದ ಘಟನೆಯ ಕುರಿತು ಮಾತನಾಡಿದ ಗೃಹಸಚಿವರು, ಎಫ್‌ಎಸ್‌ಎಲ್‌ನವರು ತಾಂತ್ರಿಕ ವರದಿ ನೀಡಬೇಕು. ಒಂದೆರೆಡು ದಿನದಲ್ಲಿ ವರದಿ ಕೊಡೋದಿಕ್ಕೆ ಆಗಲ್ಲ. ನಾನು ಯಾವತ್ತು 48 ಗಂಟೆಯಲ್ಲಿ ಎಫ್‌ಎಸ್‌ಎಲ್ ವರದಿ ಬರುತ್ತದೆ ಎಂದು ಹೇಳಿಲ್ಲ. ಸಾಕಷ್ಟು ವಿಡಿಯೋಗಳಿರುತ್ತವೆ. ಅದೆಲ್ಲವನ್ನು ಪರಿಶೀಲಿಸಬೇಕು. ಈ ಪ್ರಕರಣಕ್ಕೆ ಹೆಚ್ಚು ಒತ್ತು ನೀಡುವಂತೆ ಘಟನೆ ನಡೆದ ದಿನವೇ ಸೂಚನೆ ನೀಡಿದ್ದೆ. ವರದಿ ಬಂದ ತಕ್ಷಣ ಮುಂದಿನ ಕ್ರಮ ಜರುಗಿಸಲಾಗುವುದು. ಯಾರನ್ನು ರಕ್ಷಣೆ ಮಾಡುವ ಪ್ರಸಂಗವಿಲ್ಲ” ಎಂದರು.
ಇದನ್ನೂ ಓದಿ:ಮೆದುಳಿನಲ್ಲಿ ರಕ್ತಸ್ರಾವ, ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು
“ಎಫ್‌ಎಸ್‌ಎಲ್ ವರದಿ ಮುಚ್ಚಿಡುವ ಪ್ರಶ್ನೆಯೇ ಬರುವುದಿಲ್ಲ.‌ ಬಿಜೆಪಿಯರು ಅವರ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ನಾನು ಹೇಳಿದರೆ ಸುಮ್ಮನೆ ರಾಜಕೀಯವಾಗುತ್ತೆ. ಮಂಗಳೂರಲ್ಲಿ ಕೂಕ್ಕರ್ ಬ್ಲಾಸ್ಟ್ ಆಯ್ತು ಆಗ ಯಾರು ಅಧಿಕಾರದಲ್ಲಿದ್ದರು? 2008ರಲ್ಲಿ ಸರಣಿ ಸ್ಪೋಟ ಆಯ್ತು ಅವಾಗ ಯಾರು ಇದ್ದರು? ಹೇಳಬೇಕು ಅಂದ್ರೆ ನಾವು ಹೇಳ್ತೀವಿ ಆದ್ರೆ ಅವಶ್ಯಕತೆ ನನಗೆ ಇಲ್ಲ. ಇದು ಬೆಂಗಳೂರು ಮತ್ತು ಕರ್ನಾಟಕದ ಪ್ರಶ್ನೆ. ಇದರಲ್ಲಿ ರಾಜಕೀಯ ಬೇಡ” ಎಂದು ಹೇಳಿದರು.
ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ:“ರಾಮ ಮಂದಿರ ಉದ್ಘಾಟನೆ ಬಳಿಕ ರಾಮ ಅನ್ನೋ ಹೆಸರು ಟಾರ್ಗೆಟ್ ಆಗುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಪದೇ ಪದೇ ಹೇಳುತ್ತಿದ್ದೇವೆ. ಶ್ರೀರಾಮ ಎಲ್ಲರಿಗೂ ಶ್ರೀರಾಮ. ಬಿಜೆಪಿ‌ ಅವರು ಎಲ್ಲಾದರೂ ಖರೀದಿಸಿದ್ದಾರೆಯೇ. ಅದಕ್ಕೆ ಎಷ್ಟು ಹಣ ಆಯ್ತೋ ನಮಗೆ ಗೊತ್ತಿಲ್ಲ. ಬಿಜೆಪಿ ಅವರಿಗೆ ದುಡ್ಡು ಕೊಟ್ಟು ಕೊಂಡುಕೊಳ್ಳೋ ಅಭ್ಯಾಸ ಇದೆ. ಹೀಗಾಗಿ ಶ್ರೀರಾಮನನ್ನ ಕೊಂಡು ಕೊಂಡಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ. ನಾನು ಸಣ್ಣವನಿದ್ದಾಗ ಶ್ರೀರಾಮನವಮಿ ದಿನ ಪಾನಕ, ಕೋಸಂಬರಿ, ಮಜ್ಜಿಗೆ ಹಂಚಿದ್ದೇನೆ. ನಮಗೆ ಅಂತಹ ರಾಮ ಬೇಕು. ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ.‌ ಈ ದೇಶದ ಸಂಸ್ಕೃತಿ, ಪರಂಪರೆಯ ಆಸ್ತಿ” ಎಂದು ಹೇಳಿದರು.
ಮದುವೆಗೂ ಮುನ್ನ ಆರೋಗ್ಯ ಸಮಸ್ಯೆ ತೋಡಿಕೊಂಡ ಅನಂತ್​; ಮಗನ ಮಾತಿಗೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
