ನಾವು ಬಹಳ ಇಷ್ಟಪಟ್ಟು ತಿನ್ನುವ ಮಶ್ರೂಮ್ ಪೌಷ್ಟಿಕಾಂಶಗಳ ಆಗರವೇ ಆಗಿದೆ. ಹಾಗಾಗಿ ಇದನ್ನು ವಿವಿಧ ಖಾದ್ಯಗಳಲ್ಲಿ ಬಳಸುವ ಮೂಲಕ ನಮ್ಮ ಆಹಾರಪದ್ಧತಿಯ ಒಂದು ಭಾಗವಾಗಿ ಸೇರಿಸಿಕೊಂಡಿದ್ದೇವೆ. ಅಣಬೆಗಳು ಬಹಳಷ್ಟು ಪೌಷ್ಟಿಕಾಂಶಗಳ ಶ್ರೇಣಿಯನ್ನು ಹೊಂದಿರುವ ಖಾದ್ಯ ಶಿಲೀಂಧ್ರಗಳಾಗಿದ್ದು, ಇವುಗಳನ್ನು ಆಹಾರಗಳಲ್ಲದೆ ಉಸಿರಾಟ ಮತ್ತು ಶ್ವಾಸಕೋಶದ ಕಾಯಿಲೆಗಳು ಮತ್ತು ಮೂತ್ರಪಿಂಡ, ಯಕೃತ್ತು ಮತ್ತು ಹೃದಯನಾಳದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಣಬೆಗಳು ಆಂಟಿಬ್ಯಾಕ್ಟೀರಿಯಲ್ ಆಗಿ ಕಾರ್ಯನಿರ್ವಹಿಸುತ್ತವೆ. ಅದಲ್ಲದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟಾçಲ್ ಅನ್ನು ಕಡಿಮೆ ಮಾಡುತ್ತದೆ.
ಮಶ್ರೂಮ್ ಬೆಚ್ಚನೆ ಮತ್ತು ತೇವಾಂಶವಿರುವ ಸ್ಥಳದಲ್ಲಿ ಬೆಳೆಯುವ ಸಸ್ಯದ ಹಣ್ಣು. ಇವು ನೆಲದ ಮೇಲೆ, ಮಣ್ಣಿನ ಮೇಲೆ ಹುಟ್ಟುತ್ತವೆ. ಆದರೆ ಇಂತಹ ಅಣಬೆಯು ಕೆಲ ಸಾರಿ ಅಡ್ಡಪರಿಣಾಮವನ್ನೂ ಉಂಟುಮಾಡುತ್ತವೆ. ಹಾಗಾದರೆ ಅಣಬೆಯಿಂದ ಉಂಟಾಗುವ ಸೈಡ್‌ಎಫೆಕ್ಟ್​ಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಅಣಬೆಯಿಂದ ಹೊಟ್ಟೆ ಸಮಸ್ಯೆ ಉಂಟಾಗಬಹುದು: ಅಣಬೆಗಳು ಶಿಲೀಂದ್ರಗಳಾಗಿರುದರಿಂದ ಇದನ್ನು ತಿಂದಾಗ ಕೆಲವರಿಗೆ ಅತಿಸಾರ ಉಂಟಾಗಬಹುದು. ಜತೆಗೆ ವಾಕರಿಕೆ ಅಥವಾ ವಾಂತಿ ಬಂದಂತಾಗುವುದು. ಇವು ಎಲ್ಲರ ದೇಹಕ್ಕೂ ಹೊಂದಿಕೆಯಾಗುವುದಿಲ್ಲ.
ಚರ್ಮದ ಸಮಸ್ಯೆ:ಅಣಬೆಯಿಂದ ಚರ್ಮದ ಅಲರ್ಜಿ ಉಂಟಾಗಬಹುದು. ಇದನ್ನು ತಿಂದಾಗ ಕೆಲವು ಸಂದರ್ಭಗಳಲ್ಲಿ ಚರ್ಮದ ದದ್ದುಗಳು ಮತ್ತು ಕಿರಿಕಿರಿಯಂತಹ ರೋಗ ಲಕ್ಷಣಗಳು ಉಂಟಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಾಗ ಕೆಲವರಲ್ಲಿ ಮೂಗಿನ ರಕ್ತಸ್ರಾವ, ಒಣ ಮೂಗು ಮತ್ತು ಒಣ ಗಂಟಲು ಸಮಸ್ಯೆಗಳು ಉಂಟಾಗಬಹುದು.
ಮಂಕು ಕವಿಯುವುದು:ಅಣಬೆ ತಿಂದಾಗ ಕೆಲವರಿಗೆ ಕೆಲ ಸಮಯ ಭ್ರಮೆ ಉಂಟಾಗಿ, ಮಂಕು ಬಡಿದಂತಾಗಬಹುದು. ಕೆಲ ಸಮಯದವರೆಗೆ ವಾಸ್ತವದ ಗ್ರಹಿಕೆ ಬದಲಾಗಬಹುದು. ಈ ಭ್ರಮೆಯು ಎಲ್‌ಎಸ್‌ಡಿ ಔಷಧಿಗಳಿಂದ ಉಂಟಾಗುವ ಪರಿಣಾಮಕ್ಕೆ ಹೋಲಿಸಬಹುದು. ಅಣಬೆ ಸೇವಿಸಿದ 20 ನಿಮಿಷಗಳ ಬಳಿಕ ಇದರ ಅಡ್ಡಪರಿಣಾಮ ಉಂಟಾಗಬಹುದು. ಅರ್ಧಗಂಟೆಯಿಂದ 40 ನಿಮಿಷಗಳ ತನಕ ಇದರ ಪರಿಣಾಮ ವಿಸ್ತರಿಸಬಹುದು. ಕೆಲವೊಮ್ಮೆ ಇದನ್ನು ತಿಂದಾಗ ಹೊಟ್ಟೆಯಲ್ಲಿ ಸಾಮಾನ್ಯಕ್ಕಿಂತ ಜೋರಾಗಿ ಶಬ್ದಗಳನ್ನು ಕೇಳಬಹುದು.
ನಿದ್ರಾಹೀನತೆ:ಅಣಬೆ ಸೇವಿಸಿದ ಬಳಿಕ ಬಹಳಷ್ಟು ಜನರು ಸುಸ್ತು ಮತ್ತು ನಿದ್ರಾಹೀನತೆಯನ್ನು ಅನುಭವಿಸುತ್ತಾರೆ. ಹೀಗಾದಾಗ ಕೆಲವು ದಿನಗಳವರೆಗೆ ಅಣಬೆಯನ್ನು ದೂರ ಇಡುವುದೇ ಒಳಿತು.
ಜುಮ್ಮೆನ್ನುವ ಸಂವೇದನೆ:ಅಣಬೆ ಸೇವಿಸಿದ 30 ನಿಮಿಷಗಳ ನಂತರ ಕೆಲವರು ಅತಿ ಸಂತೋಷ ಮತ್ತು ಉತ್ಸಾಹವನ್ನು ಅನುಭವಿಸುತ್ತಾರೆ. ಬಳಿಕ ಇದೇ ಉತ್ಸುಕತೆಯ ಭಾವನೆಯೊಂದಿಗೆ ಇಡೀ ದೇಹದಲ್ಲಿ ಜುಮ್ಮೆನಿಸುವಿಕೆಯ ಸಂವೇದನೆ ಅನುಭವಿಸುತ್ತಾರೆ.
ಗರ್ಭಾವಸ್ಥೆಯಲ್ಲಿ ದೂರ ಇರುವುದೇ ಒಳಿತು:ಸ್ತನಪಾನ ಮತ್ತು ಗರ್ಭಾವಸ್ಥೆಯಲ್ಲಿ ಮಹಿಳೆಯರು ಅಣಬೆಗಳನ್ನು ಸೇವಿಸದೆ ಇರುವುದೇ ಒಳಿತು ಎನ್ನುತ್ತಾರೆ ವೈದ್ಯರು. ಯಾವುದೇ ಗಂಭೀರ ಅಡ್ಡಪರಿಣಾಮಗಳು ವರದಿಯಾಗದಿದ್ದರೂ ಸುರಕ್ಷತೆ ದೃಷ್ಟಿಯಿಂದ ಅಣಬೆಯನ್ನು ಬಳಸದಂತೆ ಸಲಹೆ ನೀಡುತ್ತಾರೆ.
ತಲೆನೋವು:ಮಶ್ರೂಮ್ ತಿಂದ ಬಳಿಕ ಕೆಲವರು ದಿನಪೂರ್ತಿ ತಲೆನೋವಿನಿಂದ ಬಳಲಿದ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತಾರೆ ವೈದ್ಯರು. ಹಾಗಾಗಿ ತಲೆನೋವಿಗೆ ಈ ಅಣಬೆಗಳು ಕಾರಣವಾಗಬಹುದು, ಜಾಗ್ರತೆ.
ಆತಂಕ:ಮಶ್ರೂಮ್‌ಗಳು ಕೆಲವರಲ್ಲಿ ಸುಖಾಸುಮ್ಮನೆ ಆತಂಕವನ್ನು ಸೃಷ್ಟಿಸಬಹುದು. ಇದು ಕಡಿಮೆ ಮಟ್ಟದಲ್ಲಿ ಅಥವಾ ಅತಿಯಾಗಲೂಬಹುದು. ಅತಿಯಾದ ಮಶ್ರೂಮ್ ಸೇವನೆಯಿಂದ ಈ ಅಡ್ಡಪರಿಣಾಮ ಉಂಟಾಗಬಹುದು.
ಮಾನಸಿಕ ಅಸ್ವಸ್ಥತೆ:ಮಾನಸಿಕ ಅಸ್ವಸ್ಥತೆಯು ನಿರ್ದಿಷ್ಟ ಜನರಲ್ಲಿ ಅಣಬೆಗಳಿಂದ ಉಂಟಾಗುವ ಗಂಭೀರ ಅಡ್ಡಪರಿಣಾಮವಾಗಿದೆ. ಮಶ್ರೂಮ್ ಸೇವನೆಯ ಬಳಿಕ ಅಪಾರ ಭಯ, ಪ್ಯಾನಿಕ್ ಅಟ್ಯಾಕ್‌ಗಳಂತಹ ಮಾನಸಿಕ ಅಸ್ವಸ್ಥತೆಗಳನ್ನು ಅನುಭವಿಸಬಹುದು.
ತಲೆ ತಿರುಗುವುದು:ಮಶ್ರೂಮ್ ಸೇವಿಸಿದ ಕೆಲ ಗಂಟೆಯ ಬಳಿಕ ತಲೆ ತಿರುಗುವ ಅನುಭವವೂ ಉಂಟಾಗಬಹುದು. ಕಡಿಮೆ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ಈ ಸಮಸ್ಯೆಗೆ ಒಳಗಾಗುವುದು ಹೆಚ್ಚು.
ತೂಕ ಹೆಚ್ಚಾಗುವುದು:ಅಣಬೆ ಸೇವನೆಯ ಬಳಿಕ ಹಸಿವಿನ ಭಾವನೆ ಹೆಚ್ಚಾಗಬಹುದು. ಇವು ಟ್ರಿಪ್ಟಮೈನ್‌ಗಳನ್ನು ಹೊಂದಿರುತ್ತವೆ. ಇವು ವ್ಯಸನಕಾರಿ ಔಷಧಗಳಂತೆ ಕಾರ್ಯನಿರ್ವಹಿಸುವ ರಾಸಾಯನಿಕಗಳಾಗಿವೆ. ಹಸಿವು ಹೆಚ್ಚಿಸುವ ಉತ್ತೇಜಕಗಳೂ ಹೌದು. ಹೀಗಾಗಿ ಆಹಾರ ಸೇವನೆ ಹೆಚ್ಚಾಗಿ ತೂಕ ಹೆಚ್ಚಾಗುವ ಸಂಭವವೂ ಇದೆ.
ಕೊನೆ ಮಾತು,ಅಣಬೆಗಳು ಸತು, ಕಬ್ಬಿಣ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ, ನಮ್ಮ ದಿನಚರಿಯಲ್ಲಿ ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. 1,40,000 ಜಾತಿಯ ಅಣಬೆಗಳ ಪೈಕಿ ಕೇವಲ ಶೇಕಡಾ 10ರಷ್ಟು ಮಾತ್ರ ತಿನ್ನಬಹುದು. ಕೆಲವು ವಿಷಕಾರಿ ಅಣಬೆಗಳು ಅಮಾನಿಟಾ ಪ್ಯಾಂಥೆರಿನಾ, ಎಂಟೊಲೊಮಾ ಮತ್ತು ಕ್ಲೋರೊಫಿಲಮ್ ಮೊಲಿಬ್ಡೆಟ್ಸ್ ಅಂಶಗಳನ್ನು ಹೊಂದಿದ್ದು, ಜೀವಕ್ಕೆ ಮಾರಕವಾಗಬಹುದು. ಇಂತಹವನ್ನು ಅರಿವಿಲ್ಲದೆ ಸೇವಿಸಿದಾಗ, ರೋಗಲಕ್ಷಣಗಳು ಸಂಭವಿಸುವವರೆಗೆ ಕಾಯದೆ, ಕೂಡಲೇ ವೈದ್ಯರನ್ನು ಕಾಣುವುದು ಒಳಿತು. ಹಾಗಾಗಿ ಬಳಕೆಯ ಸೂಕ್ತ ಅಣಬೆಯನ್ನು ಗುರುತಿಸಿ ಆರಿಸುವುದು ಮತ್ತು ಚೆನ್ನಾಗಿ ಬೇಯಿಸುವುದು ಸಹ ಮುಖ್ಯ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × 5 =
Remember me
