ಧಾರವಾಡ:ಈಗ ಬೇಸಿಗೆಗಾಲ ಆದ ಕಾರಣ ಮಾವಿನ ಹಣ್ಣು ಹೆಚ್ಚು ಚಾಲ್ತಿಯಲ್ಲಿದೆ. ಸಿಹಿ ಸಿಹಿಯಾದ, ವಿವಿಧ ಬಗೆಯ ಮಾವನ್ನು ಸವಿಯುತ್ತಿರುವ ಜನಸಾಮಾನ್ಯರು, ಅಗತ್ಯ ಮೀರಿದಷ್ಟು ಹಣ್ಣನ್ನು ಖರೀದಿ ಮಾಡುವಲ್ಲಿ ಮುಂದಾಗಿದ್ದು, ಈ ಮೂಲಕ ನಮ್ಮ ರಾಜ್ಯದ ರೈತರಿಗೆ ಉತ್ತಮ ಬೆಲೆ ದೊರಕುವಂತೆ ಸಹಕರಿಸಿದ್ದಾರೆ. ಇನ್ನು ಉತ್ತರ ಕರ್ನಾಟಕದ ಧಾರವಾಡ ಅಪೋಸ (Alphanso) ತಳಿಯ ಮಾವಿನಹಣ್ಣು ಹೆಚ್ಚು ಹೆಸರುವಾಸಿಯಾಗಿದ್ದು, ಸದ್ಯ ಈ ಹಣ್ಣಿಗಿದ್ದ ಬೇಡಿಕೆ ಇದೀಗ ದುಪ್ಪಟ್ಟಾಗಿದೆ.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಬಿಜೆಪಿ ಒಂದು ಸ್ಥಾನ ಗೆಲ್ಲಲಿದೆ: ರಾಹುಲ್ ಗಾಂಧಿ ಭವಿಷ್ಯ
ಧಾರವಾಡದ ಮಾವಿನ ತೋಪುಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸ್ಥಳೀಯ ಹೆಸರಿನಲ್ಲಿ ಕರೆಯಲ್ಪಡುವ ಅಪೋಸ ಹಣ್ಣಿಗೆ ಬಹಳ ಬೇಡಿಕೆ ಕೇಳಿಬಂದಿದೆ. ಪ್ರಸಿದ್ಧ ಅಲ್ಫೋನ್ಸೋ ಮಾವು ಸರ್ವವ್ಯಾಪಿಯಾಗಿರುವಾಗ ಧಾರವಾಡದಲ್ಲಿ ಬೆಳೆಯುವ ಈ ತಳಿಯು ಉತ್ತಮ ಗುಣಮಟ್ಟದಿಂದ ಕೂಡಿದ್ದು, ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ.
ಸದ್ಯ ಈ ಹಣ್ಣಿಗೆ ಇದೀಗ ಸೌದಿ ಅರೇಬಿಯಾ ಮತ್ತು ಅಮೇರಿಕಾದಂತಹ ದೊಡ್ಡ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆ ಹೆಚ್ಚಾಗಿದ್ದು, ಈ ಎರಡು ದೇಶಗಳಿಗೂ ಧಾರವಾಡದ ಅಪೋಸಾ ಮಾವಿನ ಹಣ್ಣು ರಫ್ತು ಆಗಲಿದೆ. ಈ ಮೂಲಕ ಅಪೋಸಾ ಮಾವಿನ ಹಣ್ಣಿಗೆ ಮಹತ್ವದ ಮೈಲಿಗಲ್ಲು ಸಿಕ್ಕಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ, ಧಾರವಾಡದ ಅಲ್ಫೊನ್ಸೊ ಮಾವಿನಹಣ್ಣುಗಳು ಬಹಳ ಪ್ರಸಿದ್ಧಿ ಪಡೆದಿದೆ.
ಇದನ್ನೂ ಓದಿ:ದುರ್ಗಾಂಬಿಕಾ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ
ಈ ಹಿಂದಿನಿಂದಲೂ ಸೌದಿ ಅರೇಬಿಯಾಗೆ ಅಪೋಸ ಹಣ್ಣುಗಳನ್ನು ಕಳಿಸಿಕೊಡಲಾಗುತ್ತಿತ್ತು. ಆದರೆ, ಈಗ ಹೊಸ ಅವಕಾಶಗಳು ಅರಸಿಬಂದಿದ್ದು, ಅಮೇರಿಕನ್ ನಗರಗಳು ಈ ರುಚಿಕರವಾದ ಹಣ್ಣುಗಳಲ್ಲಿ ಭಾರೀ ಆಸಕ್ತಿಯನ್ನು ತೋರಿರುವುದು ಕಂಡುಬಂದಿದೆ. ನಮ್ಮ ಮಾವಿನ ತಳಿಗೆ ಅಲ್ಲಿನ ಜನರು ಮನಸೋತಿದ್ದು, ರೈತರು ಬೆಳೆದ ಮಾವುಗಳಿಗೆ ಉತ್ತಮ ಬೆಂಬಲ ದೊರಕಿದಂತಾಗಿದೆ,(ಏಜೆನ್ಸೀಸ್).
ಕೋಚ್​ ಜತೆಗೆ MI ತ್ಯಜಿಸುವ ಬಗ್ಗೆ ರೋಹಿತ್​ ನಡೆಸಿದ ಸಂಭಾಷಣೆ ಲೀಕ್! ಕಡೆಗೂ ಮೌನ ಮುರಿದ ‘ಹಿಟ್​ ಮ್ಯಾನ್’​

‘ಆತನದು ಸ್ಟಾಪ್-ಸ್ಟಾರ್ಟ್ ಕರಿಯರ್’​! ವಿರಾಟ್​ ಕೊಹ್ಲಿ ವಿರುದ್ಧ ಮತ್ತೆ ಕಿಡಿಕಾರಿದ ಸುನಿಲ್ ಗವಾಸ್ಕರ್​, ಇದೆಲ್ಲಾ ನಿಮಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 4 =
Remember me
