ಬೆಂಗಳೂರು:ನಿಮ್ಮ ಗುಲಾಬಿ ನಾಲಿಗೆಯ ಮೇಲೆ ವಿಚಿತ್ರವಾದ ಬಿಳಿ ಲೇಪನವನ್ನು ಗಮನಿಸಿದ್ದೀರಾ? ಇದು ನಿಮ್ಮ ಕಳಪೆ ಕರುಳಿನ ಆರೋಗ್ಯದ ಬಗ್ಗೆ ದೇಹ ಸೂಚಿಸುತ್ತಿರುವ ಚಿಹ್ನೆ ಆಗಿರಬಹುದಾ?
ಆಯುರ್ವೇದದಲ್ಲಿ ಅಗ್ನಿ ಎಂಬ ಪದವು ಚಯಾಪಚಯ ಬೆಂಕಿಯನ್ನು ಸೂಚಿಸುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳುವ ಮತ್ತು ಚಯಾಪಚಯ ಉಪ ಉತ್ಪನ್ನಗಳನ್ನು ಉತ್ಪಾದಿಸುವ ಪ್ರಕ್ರಿಯೆ. ಅಗ್ನಿಯು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವುದಲ್ಲದೆ ದೇಹದ ಎಲ್ಲ ಅಗತ್ಯ ಪ್ರಕ್ರಿಯೆಗಳ ಉಸ್ತುವಾರಿ ವಹಿಸುತ್ತದೆ. ಅಸಮತೋಲಿತ ಅಗ್ನಿಯು ಸಾಮಾನ್ಯವಾಗಿ ಕಳಪೆ ಕರುಳಿನ ಆರೋಗ್ಯ ಸೂಚಿಸುವುದಲ್ಲದೆ, ಅಸಂಖ್ಯ ಸಮಸ್ಯೆಗಳ ಸೃಷ್ಟಿಗೂ ಕಾರಣವಾಗಬಹುದು. ಕಡಿಮೆ ಅಗ್ನಿಯು ಹಸಿವು, ಆಯಾಸ, ಭಾರ ಮತ್ತು ಆಲಸ್ಯವನ್ನು ಕಡಿಮೆ ಮಾಡುತ್ತದೆ. ಅಸಮತೋಲಿತ ಅಗ್ನಿ ಅಥವಾ ಕಳಪೆ ಕರುಳಿನ ಆರೋಗ್ಯ ಸಮಸ್ಯೆಯಿಂದ ಉಂಟಾಗುವ ತೊಂದರೆಗಳೆಂದರೆ ಗ್ಯಾಸ್, ಮಲಬದ್ಧತೆ, ಒಣ ಚರ್ಮ, ವಾಯು, ನಿದ್ರಾಹೀನತೆ, ಸ್ನಾಯುಸೆಳೆತ, ಸೆಳೆತ.
ನಾಲಿಗೆ ಮೇಲೆ ಬಿಳಿ ಲೇಪನ:ಆಯುರ್ವೇದದ ಪ್ರಕಾರ, ಬಿಳಿ ನಾಲಿಗೆಯು ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಕೆಲಸ ಮಾಡುತ್ತದೆ ಎಂಬ ಎಚ್ಚರಿಕೆಯ ಸೂಚನೆ. ನಾಲಿಗೆ ಮೇಲೆ ಈ ಲೇಪವು ದಟ್ಟವಾದಾಗ, ಅದು ಬೆಳ್ಳಗೆ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ನಿಮ್ಮ ಜೀರ್ಣಾಂಗ ವ್ಯವಸ್ಥೆ ಅತಿಯಾದ ಕೆಲಸದಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ. ಇದರಿಂದಾಗಿ ಕರುಳಿನಲ್ಲಿ ಕ್ಯಾಂಡಿಡಾ, ಯೀಸ್ಟ್ ಅಥವಾ ಬ್ಯಾಕ್ಟೀರಿಯಾ ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ.
ಕಡಿಮೆ ಹಸಿವು:ಪ್ರತಿ ಊಟಕ್ಕೂ ಸರಿಯಾದ ಪ್ರಮಾಣದ ಆಹಾರ ಸೇವಿಸುವುದರಿಂದ ಜಠರಾಗ್ನಿಯು ಬಲಗೊಳ್ಳುತ್ತದೆ. ಮುಂದಿನ ಊಟಕ್ಕೆ ಹೋಗುವ ಮೊದಲು ಹಿಂದಿನ ಆಹಾರವನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ನಮ್ಮ ಹೊಟ್ಟೆಗೆ ಸಮಯ ನೀಡುವುದೂ ಅಷ್ಟೇ ಮುಖ್ಯ. ಹಾಗಾಗಿ ರುಚಿಯಾಗಿದ್ದರೆ ಒಂದು ತುತ್ತು ಹೆಚ್ಚು ತಿನ್ನುವುದು, ಇಲ್ಲದಿದ್ದರೆ ಕಡಿಮೆ ತಿನ್ನುವುದು ಈ ಎರಡೂ ಅಸಮತೋಲನ ಅಗ್ನಿಗೆ ಕಾರಣವಾಗಬಹುದು.
ಹೊಟ್ಟೆಯ ಸಮಸ್ಯೆಗಳು:ನೀವು ಆಗಾಗ್ಗೆ ಅಸಿಡಿಟಿ, ಗ್ಯಾಸ್, ಹೊಟ್ಟೆ ಉಬ್ಬರ, ರಿಫ್ಲಕ್ಸ್, ಹೃದಯ ಉರಿ, ಸೆಳೆತ, ಬರ್ಪ್ಸ್ ಅಥವಾ ವಾಯು ಮುಂತಾದ ಸಮಸ್ಯೆಗಳನ್ನು ಅನುಭವಿಸಿದರೆ, ಇದು ಕಳಪೆ ಕರುಳಿನ ಆರೋಗ್ಯದ ಚಿಹ್ನೆಗಳಲ್ಲಿ ಒಂದಾಗಿದೆ ಎಂದರ್ಥ.
ಆಗಾಗ್ಗೆ ಮಲಬದ್ಧತೆ ಅಥವಾ ಬೇಧಿಯಾಗುವುದು:ಮಲಬದ್ಧತೆ ಅಥವಾ ಬೇಧಿಯಾಗುವುದು ಈ ಎರಡೂ ಕಳಪೆ ಕರುಳಿನ ಆರೋಗ್ಯದ ಲಕ್ಷಣಗಳು. ಹಾಗಾಗಿ ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶ ಅಥವಾ ಫೈಬರ್ ಅಂಶಗಳಿಂದ ಕೂಡಿದ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಉತ್ತಮ. ನೀವು ಮಲಬದ್ಧತೆ ಹೊಂದಿದ್ದರೆ, ಬೀನ್ಸ್, ತರಕಾರಿಗಳು, ಹಣ್ಣುಗಳು, ಧಾನ್ಯಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಬೇಧಿಯಾಗುತ್ತಿದ್ದಲ್ಲಿ ಬಾಳೆಹಣ್ಣು, ಅನ್ನ ಹಾಗೂ ಸೇಬು ಸೇವಿಸುವುದು ಒಳ್ಳೆಯದು. ಈ ಎಲ್ಲ ಆಹಾರಪದಾರ್ಥಗಳು ಸೌಮ್ಯ ಸ್ವಭಾವ ಹೊಂದಿದ್ದು, ಜಠರಕ್ಕೆ ಏನೂ ತೊಂದರೆ ಉಂಟು ಮಾಡುವುದಿಲ್ಲ.
ಹಸಿವಾದಾಗ ಮಾತ್ರ ತಿನ್ನುವುದು:ಹಿಂದಿನ ಊಟ ಸಂಪೂರ್ಣ ಜೀರ್ಣವಾಗಿ ಹಸಿವಾದಾಗ ಮಾತ್ರ ಪುನಃ ಆಹಾರ ಸೇವಿಸುವುದು ಒಳಿತು. ಕೆಲವೊಮ್ಮೆ ನಿರ್ಜಲೀಕರಣವಾದಾಗ ಹಸಿವಿನ ಭಾವ ಉಂಟಾಗುತ್ತದೆ. ಆಗ ಸರಿಯಾಗಿ ಗಮನಿಸಿ ಆಹಾರ ಸೇವಿಸುವುದು ಉತ್ತಮ.
ಪ್ರಶಾಂತ ಮತ್ತು ಆಹ್ಲಾದಕರ ವಾತಾವರಣದಲ್ಲಿ ತಿನ್ನಿರಿ:ಕುಳಿತು ಊಟ ಮಾಡುವಾಗ ಟಿವಿ, ಮೊಬೈಲ್​ಫೋನ್​ ಅಥವಾ ಲ್ಯಾಪ್‌ಟಾಪ್ ನಂತಹ ಗ್ಯಾಜೆಟ್‌ಗಳನ್ನು ದೂರವಿಟ್ಟು ನೆಮ್ಮದಿಯಾಗಿ ಊಟವನ್ನು ಆಸ್ವಾದಿಸುತ್ತಾ ಸೇವಿಸುವುದು ಒಳ್ಳೆಯದು.
ಸರಿಯಾದ ಪ್ರಮಾಣದಲ್ಲಿ ತಿನ್ನುವುದು:ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನವಾದ ಹೊಟ್ಟೆಯ ಗಾತ್ರ, ವಿಭಿನ್ನ ಚಯಾಪಚಯ ಕ್ರಿಯೆ ಹೊಂದಿದ್ದು, ಹೊಟ್ಟೆ ತುಂಬುವವರೆಗ ಮಾತ್ರ ಉಣ್ಣುವುದು ಒಳಿತು.
ಬಿಸಿ ಊಟವನ್ನು ಸೇವಿಸಿ:ಆಗಷ್ಟೇ ತಯಾರಿಸಿದ ಬಿಸಿ ಬಿಸಿ ಆಹಾರವನ್ನು ಸೇವಿಸುವುದು ಉತ್ತಮ. ಫ್ರಿಡ್ಜ್​ನಿಂದ ನೇರವಾಗಿ ತೆಗೆದು ಬಳಸುವ ಆಹಾರದಿಂದ ದೂರವಿದ್ದರೆ, ಜೀರ್ಣಾಂಗ ವ್ಯವಸ್ಥೆಯು ಆರೋಗ್ಯವಾಗಿರುತ್ತದೆ.
ಟೈಮ್ ಕರೆಕ್ಟಾಗಿ ಊಟ ಮಾಡಿ:ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸ ರೂಢಿಮಾಡಿಕೊಳ್ಳಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಹೊಟ್ಟೆ ಹಸಿಯುವಂತೆ ದೇಹ ಪ್ರಕೃತಿಯು ಏಕರೂಪದ ಚಕ್ರ ರೂಪಿಸುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + two =
Remember me
