ಬೆಂಗಳೂರು:ಶಿವರಾತ್ರಿ ಎಂದರೆ ಸಾಮಾನ್ಯವಾಗಿ ಶಿವನ ಸನ್ನಿಧಿಯಲ್ಲೇ ನಡೆಯುವಂಥದ್ದು. ಆದರೆ ಪ್ರತಿವರ್ಷ ನಿಗದಿತ ಜಾಗದಲ್ಲೇ ನಡೆಯುವಂಥ ಶಿವರಾತ್ರಿ ಆಚರಣೆಯೊಂದು ಈಗ ಸ್ಥಳಾಂತರಗೊಂಡಿದೆ. ಅಷ್ಟಕ್ಕೂ ಇವರ ಶಿವರಾತ್ರಿ ಆಚರಣೆಯ ಸ್ಥಳ ಬದಲಾಗಲು ಮುಖ್ಯ ಕಾರಣ ಮೀಸಲಾತಿ.
ಮೀಸಲಾತಿಗೂ ಶಿವರಾತ್ರಿ ಆಚರಣೆಗೂ ಎತ್ತಣಿಂದೆತ್ತ ಸಂಬಂಧ ಎಂಬ ಯೋಚನೆ ಒಮ್ಮೆ ಮನಸಲ್ಲಿ ಸುಳಿದು ಹೋದರೂ, ಇಲ್ಲಿ ಶಿವರಾತ್ರಿ ಆಚರಣೆಯ ಸ್ಥಳ ಬದಲಾಗಲು ಮೀಸಲಾತಿ ಹೋರಾಟವೇ ಪ್ರಮುಖ ಕಾರಣವೆಂಬದಂತೂ ನಿಜ. ಅಂದರೆ ಕಳೆದ ಕೆಲವು ದಿನಗಳಿಂದ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದವರು ಈ ಬಾರಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲೇ ಶಿವರಾತ್ರಿ ಆಚರಣೆ ಮಾಡಲಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಈ ವಿಷಯನ್ನು ತಿಳಿಸಿದ್ದಾರೆ. ಪ್ರತಿ ವರ್ಷ ಕೂಡಲಸಂಗಮದಲ್ಲಿ ಭಕ್ತರೊಂದಿಗೆ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದೆವು. ಆದರೆ ಈ ಸಲ ನಾವು ಇಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲೇ ಪೂಜೆ ಮಾಡುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಇಂದು ರಾತ್ರಿ 9ರಿಂದ ಸ್ವಾತಂತ್ರ್ಯ ಉದ್ಯಾನದಲ್ಲೇ ಇಷ್ಟಲಿಂಗ ಪೂಜೆ ನಡೆಯಲಿದೆ. ಎಲ್ಲರೂ ಫ್ರೀಡಂ ಪಾರ್ಕ್​ಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ರಾಜ್ಯದ ಜನತೆಗೆ ಎಚ್ಚರಿಕೆಯ ಗಂಟೆ ಬಾರಿಸಿದ ಸಚಿವ ಡಾ.ಸುಧಾಕರ್​!

ಭಗವದ್ಗೀತಾ ಸಾರಾಂಶದ ಕಿಂಡಲ್ ಆವೃತ್ತಿ ಬಿಡುಗಡೆ ಮಾಡಿದ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 5 =
Remember me
