ನವದೆಹಲಿ:ವಯಸ್ಸಾದಂತೆ ಮೂಳೆ ಸವೆತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಮೂಳೆಗಳನ್ನು ಬಲಪಡಿಸಲು ಈ ಸಸ್ಯಾಹಾರಿ ಆಹಾರಗಳು ತುಂಬಾ ಸಹಾಯ ಮಾಡುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ರಾಗಿಯನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ರಾಗಿಯಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದು ಮಕ್ಕಳಿಗೆ ತುಂಬಾ ಪ್ರಯೋಜನಕಾರಿ ಆಹಾರವಾಗಿದೆ. ಇದನ್ನು ತಿನ್ನುವುದರಿಂದ ಮೂಳೆಗಳ ಆರೋಗ್ಯವನ್ನು ಕಾಪಾಡಬಹುದು. ರಾಗಿಯಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿರುವುದರಿಂದ ಮೀನಿನ ಎಣ್ಣೆ ಮೇಲೆ ಅವಲಂಬಿಸಬೇಕಿಲ್ಲ. ಇವೆರಡೂ ಸೇರಿ ಮೂಳೆಯ ಸಾಂದ್ರತೆ ಹೆಚ್ಚಾಗಲು ಸಹಾಯ ಮಾಡುತ್ತವೆ.

ಕ್ಯಾಲ್ಸಿಯಂ ಹೊಂದಿರುವ ಮತ್ತೊಂದು ಪ್ರಮುಖ ಆಹಾರ ಪದಾರ್ಥ, ಪಾಲಕ್ ಸೊಪ್ಪು! ಪಾಲಕ್ ಸೊಪ್ಪನ್ನು ಹೆಚ್ಚು ತಿನ್ನುವುದರಿಂದ ಮೂಳೆಗಳನ್ನು ಬಲಪಡಿಸಿಕೊಳ್ಳಬಹುದು. ಎಲುಬುಗಳಿಗೆ ಶರೀರ ಬೇಡುವ ದೈನಂದಿನ ಕ್ಯಾಲ್ಸಿಯಂನ 25 ಶೇಕಡವನ್ನು ಪಾಲಕ್ ಒದಗಿಸುತ್ತದೆ. ಪಾಲಕ್​ದಲ್ಲಿ ನಾರಿನಂಶ ಹೆಚ್ಚಿದ್ದು, ಕಬ್ಬಿಣಾಂಶ ಮತ್ತು ವಿಟಮಿನ್ ಎ ಕೂಡ ಸಮೃದ್ಧವಾಗಿದೆ.

ನಂಬಿದ್ರೆ ನಂಬಿ, ಚೀಸ್ ಕೂಡ ಹೆಚ್ಚಿನ ಕ್ಯಾಲ್ಸಿಯಂ ಪಡೆಯಲು ಉತ್ತಮ ಮೂಲವಾಗಿದೆ! ಇದು ಹಾಲಿನ ಉತ್ಪನ್ನವಾಗಿದ್ದು ಈ ಹಿನ್ನೆಲೆಯಲ್ಲಿ ಅದರಲ್ಲಿ ಪ್ರಾಕೃತಿಕವಾಗಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆ. ಇದನ್ನು ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್‌ನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಮೂಳೆಗಳು ದುರ್ಬಲವಾಗಿದ್ದರೆ, ದೈನಂದಿನ ಜೀವನದಲ್ಲಿ ಅದರ ಸೇವನೆಯನ್ನು ಹೆಚ್ಚಿಸಬೇಕು. ಚೀಸ್​ನಲ್ಲಿ ಪ್ರೋಟೀನ್‌ ಕೂಡ ಸಮೃದ್ಧವಾಗಿದೆ. ಇದನ್ನು ಮಕ್ಕಳೂ ಸೇವಿಸಬಹುದು

ನೀವು ಗಟ್ಟಿಯಾದ ಮೂಳೆಗಳನ್ನು ಪಡೆಯಲು ಬಯಸಿದರೆ, ನಿಮ್ಮ ದಿನಚರಿಯಲ್ಲಿ ನೀವು ಹಾಲು, ಚೀಸ್, ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಹೆಚ್ಚಿಸಬೇಕು. ಡೈರಿ ಉತ್ಪನ್ನಗಳು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿವೆ. ಇದಲ್ಲದೆ, ಡೈರಿ ಆಹಾರಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ.

ಮೂಳೆ ದೌರ್ಬಲ್ಯವನ್ನು ತಡೆಯಲು ಬಾದಾಮಿಯನ್ನು ತಿನ್ನಬಹುದು. ಏಕೆಂದರೆ ದೇಹಕ್ಕೆ ಪ್ರಯೋಜನಕಾರಿ ಡ್ರೈ ಫ್ರೂಟ್ಸ್​ಗಳಲ್ಲಿ ಬಾದಾಮಿಯನ್ನು ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಬಾದಾಮಿ ಕೂದಲು ಮತ್ತು ಕಣ್ಣುಗಳಿಗೂ ಒಳ್ಳೆಯದು. ಕ್ಯಾಲ್ಸಿಯಂ ಜೊತೆಗೆ, ಬಾದಾಮಿ ವಿಟಮಿನ್ ಇ ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಹೀಗಾಗಿ ಇದು ಮೂಳೆಗಳನ್ನು ಬಲಪಡಿಸುತ್ತದೆ.

ಆರೋಗ್ಯ ಪ್ರಜ್ಞೆಯುಳ್ಳ ಜನರು ಸೋಯಾಬೀನ್‌ನ ಅಗತ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಸೋಯಾಬೀನ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.(ಏಜೆನ್ಸೀಸ್)

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − two =
Remember me
