ಬೆಂಗಳೂರು:ಶಾಸಕ ಸತೀಶ್​ ರೆಡ್ಡಿ ಅವರ ಮನೆಯಲ್ಲಿದ್ದ ಎರಡು ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಹಿಂದಿನ ರೋಚ’ಕತೆ’ ತನಿಖೆಯಲ್ಲಿ ಬಯಲಾಗಿದೆ. ಕಾರಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಸಾಗರ್ (19), ಶ್ರೀಧರ್ ಗೌಡ (20) ಹಾಗೂ ನವೀನ್ ಅಲಿಯಾಸ್​ ಕಾಳಪ್ಪ (22) ಎಂಬವರನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಸಾಗರ್ ಪ್ರಮುಖ ಆರೋಪಿಯಾಗಿದ್ದು, ಶ್ರೀಧರ್ ಕೆಲಸವಿಲ್ಲದೆ ಪೋಲಿ ಅಲೆಯುತ್ತಿದ್ದ, ನವೀನ್ ಪೇಂಟರ್​ ಆಗಿದ್ದ. ಈ ಆರೋಪಿಗಳನ್ನು ಪತ್ತೆ ಮಾಡಲು ಸುಮಾರು 500 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ, ಮೈಕೋ ಲೇಔಟ್ ಎಸಿಪಿ ಕರಿಬಸವನಗೌಡ, ಮಡಿವಾಳ ಎಸಿಪಿ ಸುಧೀರ್ ಹೆಗಡೆ, ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಪವನ್ ಅವರ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಘಟನೆ ನಡೆದ 48 ಗಂಟೆಗಳ ಒಳಗೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಉತ್ತಮ ಕೆಲಸ ಮಾಡಿದ ಪೊಲೀಸರ ತಂಡಕ್ಕೆ 1 ಲಕ್ಷ ರೂ. ಬಹುಮಾನವನ್ನು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್ ಘೋಷಿಸಿದ್ದಾರೆ.
ಇದನ್ನೂ ಓದಿ:ಶಾಸಕ ಸತೀಶ್​ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಮೂವರ ಬಂಧನ, ಸ್ಮಶಾನದಲ್ಲಿ ಸಿಕ್ಕಿಬಿದ್ದ ಆರೋಪಿ
ನಿರುದ್ಯೋಗಿಯಾಗಿದ್ದ ಸಾಗರ್ ಕೆಲಸ ಕೇಳುವ ಸಲುವಾಗಿ ಶಾಸಕರನ್ನು ಭೇಟಿಯಾಗಲು ಪ್ರಯತ್ನಿಸಿದ್ದ. ಆದರೆ ಶಾಸಕರ ಭೇಟಿ ಸಾಧ್ಯವಾಗಿರಲಿಲ್ಲ. ಅಲ್ಲದೆ ಅವರ ಮನೆಯಲ್ಲಿದ್ದವರು ಕೆಲಸ ಖಾಲಿ ಇಲ್ಲ ಎಂದು ಹೇಳಿ ಕಳುಹಿಸಿದ್ದರು. ಇದರಿಂದ ಹತಾಶನಾಗಿದ್ದ ಸಾಗರ್, ಸ್ನೇಹಿತರಾಗಿರುವ ಶ್ರೀಧರ್ ಜತೆ ಸೇರಿ ಈ ಸಂಚು ರೂಪಿಸಿದ್ದ. ಕಾರಿಗೆ ಬೆಂಕಿ ಹಚ್ಚಲು ಬೇಕಿದ್ದ ಪೆಟ್ರೋಲನ್ನು ಕೂಡ ಇವರು ಕದ್ದೇ ತಂದಿದ್ದರು. ಮಾತ್ರವಲ್ಲ ಘಟನೆ ಬಳಿಕ ಸುಮಾರು ಒಂದೂವರೆ ಕಿಲೋಮೀಟರ್ ಓಡಿಹೋಗಿ ಬಳಿಕ ಬೈಕೊಂದನ್ನು ಕದ್ದು, ಅದರಲ್ಲಿ ಮೂವರೂ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ಮಾಹಿತಿಗೆ ಮತ್ತಷ್ಟು ವಿಚಾರಣೆ ನಡೆಯಬೇಕಿದೆ ಎಂದಿದ್ದಾರೆ.
ಮನೆಯಲ್ಲಿದ್ದ ವಸ್ತುಗಳನ್ನು ತಾವೇ ಚೆಲ್ಲಾಡಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಸುಳ್ಳುದೂರು ಕೊಟ್ಟ ದಂಪತಿ: ಆಮೇಲಾಗಿದ್ದೇ ಬೇರೆ…

ಜೂಜಾಟದ ವೇಳೆ ಜಗಳ, 2 ಗುಂಪುಗಳ ಮಧ್ಯೆ ಮಾರಾಮಾರಿ; ಸ್ವಾಮೀಜಿಯಿಂದ ಸಂಧಾನ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × 1 =
Remember me
