ಬೆಂಗಳೂರು: ಕೆಲವರು ಚುನಾವಣೆಯಲ್ಲಿ ಕೆಲಸ ಮಾಡುತ್ತಾರೆ. ನಮ್ಮಲ್ಲೆ ಇದ್ದುಕೊಂಡು ಮೋಸ ಮಾಡುತ್ತಾರೆ, ಕೆಲವರು ಹೊರಗಡೆಯಿಂದ ಮೋಸ ಮಾಡುತ್ತಾರೆ, ನನಗೆ ಸ್ವಂತ ಅನುಭವವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಮ್ಮ ಹಳೆಯ ಅನುಭವವನ್ನು ಮೆಲಕುಹಾಕಿದ್ದಾರೆ.2019ರ ಲೋಕಸಭೆಯಲ್ಲಿ ನನ್ನನ್ನ ತುಮಕೂರಿಗೆ ಕರೆದುಕೊಂಡು ಹೋದವರು ಪರಮೇಶ್ವರ ಎಂಬ ಎಚ್.ಡಿ.ದೇವೇಗೌಡರ ಆರೋಪ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರನ್ನು ನಾನು ತುಮಕೂರಿಗೆ ಕರೆದುಕೊಂಡು ಹೋಗಿಲ್ಲ. ಅವರು ಐದು ಸೀಟ್ ಕೇಳಿದ್ದರು, ಕಾಂಗ್ರೆಸ್ ವರಿಷ್ಠರು ಕೊಟ್ಟಿದ್ದರು, ಅವರೇ ತುಮಕೂರನ್ನು ಆರಿಸಿಕೊಂಡಿದ್ದು ಎಂದರು.
ತುಮಕೂರು ಆರಿಸಿಕೊಂಡಿಲ್ಲ ಎಂದು ಬೇಕಿದ್ದರೆ ಹೇಳಲಿ ನೋಡೋಣ ಎಂದ ಅವರು ನಾನು ಗೌಡರನ್ನು ಗೆಲ್ಲಿಸಲು ಬಹಳ ಪ್ರಯತ್ನ ಮಾಡಿದ್ದೇನೆ. ನಮಗೆ ಅವರು ಗೆಲುವು ಸಾಧಿಸಿದ್ದರೆ ಬಹಳ ಖುಷಿಯಾಗುತ್ತಿತ್ತು. ದುರ್ದೈವ ಅವರು ಗೆಲ್ಲಲಿಲ್ಲ ಎಂದರು.ಅವರನ್ನು ಕರೆದುಕೊಂಡು ಹೋಗಿದ್ದೇ ಆಗಿದ್ದರೆ ಅದರಲ್ಲಿ ತಪ್ಪೇನಿದೆ. ನಾನೇ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದೆ ಎಂದೂ ಸಹ ಹೇಳಿದರು.
ಜಿ ಪರಮೇಶ್ವರ ಅವರು 2013ರ ವಿಧಾನಸಭೆ ಚುನಾವಣೆಯ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು, ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅವರ ಸೋಲಿನ ಹಿಂದಿನ ಕಾರಣದ ಬಗ್ಗೆ ಈ ವರೆಗೆ ಚರ್ಚೆ ನಿಂತಿಲ್ಲ. ಈಗಲೂ ಅವರ ಮನಸ್ಸಿನಿಂದ ಅದು ಮಾಸಿಲ್ಲ ಎಂಬುದು ಅವರ ‘ನಮ್ಮಲ್ಲೆ ಇದ್ದುಕೊಂಡು ಮೋಸ ಮಾಡುತ್ತಾರೆ, ಕೆಲವರು ಹೊರಗಡೆಯಿಂದ ಮೋಸ ಮಾಡುತ್ತಾರೆ’ ಎಂಬ ಹೇಳಿಕೆಯಿಂದಲೇ ಗೊತ್ತಾಗಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + 5 =
Remember me
