ಬೆಂಗಳೂರು:ಚಿಕ್ಕಪ್ಪನ ಮೇಲಿನ ಹಳೇ ದ್ವೇಷಕ್ಕಾಗಿ ಮಗನನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ರುಂಡ- ಮುಂಡ ಬೇರೆ ಮಾಡಿದ್ದಾರೆ. ಶ್ರೀನಿವಾಸಪುರದ ರಾಘವೇಂದ್ರ (28) ಕೊಲೆಯಾದ ವ್ಯಕ್ತಿ. ಭಾನುವಾರ ಸಂಜೆ 6 ಗಂಟೆಯಲ್ಲಿ ಕೃತ್ಯ ನಡೆದಿದ್ದು, ಆರೋಪಿಗಳಾದ ಹೇಮಣ್ಣ ಮತ್ತು ವೇಲು ಎಂಬುವರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟೈಲ್ಸ್ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಪಾಲಕರ ಜತೆ ನೆಲೆಸಿದ್ದ. ಮೃತ ವ್ಯಕ್ತಿಗೆ ಚಿಕ್ಕಪ್ಪಂದಿರಾದ ಮುನಿರಾಜು ಮತ್ತು ಮುನಿಸ್ವಾಮಿ ಎಂಬುವರು ಇದ್ದಾರೆ. ಎರಡು ವರ್ಷಗಳ ಹಿಂದೆ ಮುನಿಸ್ವಾಮಿ ಮನೆ ಮುಂದೆ ಮುನಿರಾಜು ವೇಗವಾಗಿ ಟ್ರ್ಯಾಕ್ಟರ್ ಓಡಿಸಿದ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಆಗ ಮುನಿಸ್ವಾಮಿ ಮತ್ತು ಆತನ ಪುತ್ರ ವಾಸು ಸೇರಿಕೊಂಡು ಮುನಿರಾಜುನನ್ನು ಹತ್ಯೆ ಮಾಡಿ ಬಿಡಿಸಲು ಬಂದ ಮುನಿರಾಜು ಅಳಿಯ ಹೇಮಣ್ಣನನ್ನ ಮೇಲೂ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ:ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​
ಇದಾದ ಮೇಲೆ ಮುನಿಸ್ವಾಮಿ ಮತ್ತು ವಾಸು ಜೈಲು ಸೇರಿ ಬಿಡುಗಡೆಯಾಗಿದ್ದರು. ಆರೋಗ್ಯ ಚೇತರಿಕೆ ಕಂಡ ಮೇಲೆ ಹೇಮಣ್ಣ, ಮಾವನ ಕೊಲೆ ಹತ್ಯೆ ದ್ವೇಷಕ್ಕೆ ಮುನಿಸ್ವಾಮಿ ಮತ್ತು ವೇಲು ಹತ್ಯೆಗೆ ಯತ್ನಿಸಿದ್ದ. ಈ ಕೇಸಿನಲ್ಲಿ ಸಂಪಿಗೇಹಳ್ಳಿ ಪೊಲೀಸರು ಹೇಮಣ್ಣನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತ ಭಯಗೊಂಡ ಮುನಿಸ್ವಾಮಿ ಮತ್ತು ವೇಲು ಊರು ಖಾಲಿ ಮಾಡಿಕೊಂಡು ದಾವಣಗೆರೆಯಲ್ಲಿ ನೆಲೆಸಿದ್ದರು.
ಜೈಲಿನಿಂದ ಬಿಡುಗಡೆಯಾದ ಹೇಮಣ್ಣ, ಪ್ರತೀಕಾರ ತೀರಿಸಿಕೊಳ್ಳಲು ಮುನಿಸ್ವಾಮಿ ಮತ್ತು ವೇಲುನನ್ನು ಹುಡುಕಾಟ ನಡೆಸುತ್ತಿದ್ದರು. ಈ ಇಬ್ಬರು ತಲೆಮರೆಸಿಕೊಳ್ಳಲು ರಾಘವೇಂದ್ರ ಕುಟುಂಬ ಸಹಾಯ ಮಾಡಿದೆ ಎಂದು ಅವರ ಮೇಲೆ ಪದೇಪದೆ ಜಗಳ ಮಾಡುತ್ತಿದ್ದ. ಇದೇ ದ್ವೇಷಕ್ಕೆ ಭಾನುವಾರ ಸಂಜೆ 6 ಗಂಟೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ರಾಘವೇಂದ್ರನ ಮೇಲೆ ಹೇಮಣ್ಣ ಮತ್ತು ವೇಲು ದಾಳಿ ನಡೆಸಿ ಹತ್ಯೆ ಮಾಡಿ ರುಂಡ-ಮುಂಡ ಬೇರೆ ಮಾಡಿದ್ದರು. ಮೃತ ವ್ಯಕ್ತಿ ತಂದೆ ಕೊಟ್ಟ ದೂರಿನ ಮೇಲೆ ಪ್ರಕರಣದ ತನಿಖೆ ಕೈಗೊಂಡ ಯಲಹಂಕ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಂಗಡಿಯಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ; ಬಾಲಕಿ ಸೇರಿ ಇಬ್ಬರು ಜೀವಂತ ದಹನಗೊಂಡು ಸ್ಥಳದಲ್ಲೇ ಸಾವು!
ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ; ನಾಳೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮತ್ತೆ ಲಾಕ್​ಡೌನ್?!; ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದೇನು?​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three + 9 =
Remember me
