ಆನೇಕಲ್:ಸೋಮವಾರ ರಾತ್ರಿ ಕ್ಯಾಂಟರ್ ಹರಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಬಹಿರಂಗಗೊಂಡಿದ್ದು, ಸತ್ತವರ ಬಗ್ಗೆ ನಿಜವಾಗಿಯೂ ಭಾರಿ ಮರುಕು ಹುಟ್ಟಿಸುವಂತಿದೆ.
ಆನೇಕಲ್ ತಾಲೂಕು ಅತ್ತಿಬೆಲೆ ಮುಖ್ಯರಸ್ತೆಯ ಮಾಯಸಂದ್ರ ಸಮೀಪ ಸೋಮವಾರ ರಾತ್ರಿ ಕ್ಯಾಂಟರ್ ಹರಿದು ಅಸ್ಸಾಂ ಮೂಲದ ಕಾರ್ಮಿಕರಾದ ಚಂದನ್ (21), ಆಶೀಮ್(20) ಹಾಗೂ ಕರಣ್ (21) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಅಪಘಾತ ಮಾಡಿದ ಕ್ಯಾಂಟರ್ ಚಾಲಕ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಅಸ್ಸಾಂ ಮೂಲದ ಯುವಕರು ಮಾಯಸಂದ್ರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ 9.45ರ ಸಮಯದಲ್ಲಿ ಅಂಗಡಿಗೆ ಹೋಗಿ ಮನೆಗೆ ಮರಳಲು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅತಿವೇಗವಾಗಿ ಬಂದ ಕ್ಯಾಂಟರ್ ವಾಹನ ಏಕಾಏಕಿ ಯುವಕರ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ಯುವಕರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಆ್ಯಂಬುಲೆನ್ಸ್ ಸ್ಥಳಕ್ಕೆ ಬರುವ ವೇಳೆಗಾಗಲೇ ಎಲ್ಲರೂ ಉಸಿರು ಚೆಲ್ಲಿದ್ದರು.
ಗೋಳಾಡಿದ ಜತೆಗಾರರು:ರಾತ್ರಿ ಎಷ್ಟೊತ್ತಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಇನ್ನಿತರ ಜತೆಗಾರರು ಗಾಬರಿಯಾಗಿದ್ದರು. ಈ ವೇಳೆ ಮನೆ ಮಾಲೀಕರಿಗೆ ಮಾಹಿತಿ ಗೊತ್ತಾಗಿ ಈ ವಿಷಯ ತಿಳಿಸಿದರು ಎನ್ನಲಾಗಿದೆ.
ಈ ಮೂವರೂ ಹೋಗುವಾಗ ಹೇಳಿದ್ದ ಮಾತನ್ನು ನೆನಪಿಸಿಕೊಂಡು ಸ್ನೇಹಿತರು ಗೋಳಾಡಿದ ಪ್ರಸಂಗವೂ ನಡೆದಿದೆ. ‘ಅನ್ನ ಮಾಡಿಟ್ಟಿರಿ, ಕೋಳಿ ಮಾಂಸ ತಗೆದುಕೊಂಡು ಬರುತ್ತೇವೆ, ಸಾಂಬಾರು ಮಾಡಿ ಎಲ್ಲರೂ ಊಟ ಮಾಡೋಣ..’ ಎಂದು ಅವರು ಹೇಳಿ ಹೋಗಿದ್ದನ್ನು ಸ್ನೇಹಿತರು ಸ್ಮರಿಸಿಕೊಂಡಿದ್ದಾರೆ. ಅನ್ನ ಮಾಡಿಟ್ಟಿರಿ, ಒಟ್ಟಿಗೇ ಊಟ ಮಾಡೋಣ ಎಂದು ಹೇಳಿ ಹೋದ ಗೆಳೆಯರು ಇನ್ಯಾವತ್ತೂ ಮರಳುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾರದೆ ಇತರ ಸ್ನೇಹಿತರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
