ಬೆಂಗಳೂರು:ಹಣ ದೋಚಲೆಂದು ತಡರಾತ್ರಿ ಎಟಿಎಂ ಒಳಗೆ ನುಗ್ಗಿದ್ದ ಕಳ್ಳನನ್ನು ರೆಡ್​ಹ್ಯಾಂಡ್ ಆಗಿ ಹಿಡಿಯಲಾಗಿದೆ.
ಮೈಕೋ ಲೇಔಟ್​ನಲ್ಲಿ ಸೆನ್ಸಾರ್​ ಕೊಟ್ಟ ಅಲರ್ಟ್ ನಿಂದ ಎಚ್ಚೆತ್ತ ಸಿಎಸ್​ಎಸ್​ ಸೆಕ್ಯೂರಿಟಿ ಏಜೆನ್ಸಿಯ ಅಧಿಕಾರಿ ಎನ್​.ಎಂ.ನಾರಾಯಣ್​ ಖದೀಮನನ್ನು ಸೆರೆ ಹಿಡಿಯಲು ನೆರವಾದರು. ಎಟಿಎಂ ಇಂಟರ್​ನೆಟ್​ ವೈಯರ್​ ಮತ್ತು ಹಣದ ಬಾಕ್ಸ್​ ಮುಂಭಾಗದ ಡೋರ್​ ಕತ್ತರಿಸಿದ್ದ ಕಳ್ಳ ಇನ್ನು ಕೆಲವೇ ಹೊತ್ತಲ್ಲಿ ಹಣ ದೋಚಿಕೊಂಡು ಪರಾರಿಯಾಗಬೇಕಿತ್ತು. ಅಷ್ಟರಲ್ಲಿ ಬಂದ ನಾರಾಯಣ್ ಎಟಿಎಂ ಬಾಗಿಲನ್ನು ಹೊರಗಿನಿಂದ ಲಾಕ್​ ಮಾಡಿಬಿಟ್ಟರು. ಮುಂದೇನಾಯ್ತು? ಇಲ್ಲಿದೆ ವಿವರ.
ಇದನ್ನೂ ಓದಿರಿಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!
ಜುಲೈ 6ರಂದು ಸೆಕ್ಯೂರಿಟಿ ಗಾರ್ಡ್​ಗಳ ತಪಾಸಣೆ ನಡೆಸುವ ಸಲುವಾಗಿ ನಾರಾಯಣ್​ ರಾತ್ರಿ ರೌಂಡ್ಸ್​ನಲ್ಲಿದ್ದರು. ಬೆಳಗಿನ ಜಾವ 5 ಗಂಟೆಯಲ್ಲಿ ವಿಜಯ ಬ್ಯಾಂಕ್​ ಲೇಔಟ್​ ಭವಾನಿ ಸದನ್​ 4ನೇ ಹಂತದಲ್ಲಿ ಇರುವ ಎಚ್​ಡಿಎಫ್​ಸಿ ಬ್ಯಾಂಕ್​ನ ಎಟಿಎಂಗೆ ಕಳ್ಳರು ನುಗ್ಗಿರುವ ಮಾಹಿತಿ ಸೆನ್ಸಾರ್​ ಮೂಲಕ ನಾರಾಯಣ್​ಗೆ ತಲುಪಿದೆ. ತಕ್ಷಣ ಎಚ್ಚೆತ್ತ ನಾರಾಯಣ್​, ಅರ್ಧ ತಾಸಿನಲ್ಲಿಯೇ ಎಟಿಎಂ ಸ್ಥಳಕ್ಕೆ ಹೋದಾಗ ಒಳಗೆ ಅಪರಿಚಿತ ಇರುವುದು ಗೊತ್ತಾಗಿದೆ. ಅನುಮಾನ ಬಂದು ಎಟಿಎಂ ಬೂತ್​ ಬಾಗಿಲು ಬಂದ್​ ಮಾಡಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಡೋರ್​ ಲಾಕ್​ ಓಪನ್​ ಮಾಡಿ ಪರಿಶೀಲನೆ ನಡೆಸಿದಾಗ ಅಪರಿಚಿತನ ಬಳಿ ರಾಡು ಪತ್ತೆಯಾಗಿದೆ. ಅಲ್ಲದೆ, ಎಟಿಎಂ ಇಂಟರ್​ನೆಟ್​ ವೈಯರ್​, ಹಣದ ಬಾಕ್ಸ್​ ಮುಂಭಾಗದ ಡೋರ್​ ಕಟ್​ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ಮುಂದುವರಿಸಿದ್ದು, ಇದೇ ರೀತಿ ಹಲವೆಡೆ ಕೃತ್ಯ ಎಸಗಿರುವ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮೀನು ಸರ್ವೇ ಮಾಡಲು ಬಂದ ತಹಸೀಲ್ದಾರ್​ ಎದೆಗೆ ಚಾಕು ಇರಿದು ಕೊಂದ ನಿವೃತ್ತ ಶಿಕ್ಷಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + three =
Remember me
