ತುಮಕೂರು:ಹಾಡಹಗಲೇ ಗನ್ ಹಿಡಿದು ತೋಟದ ಮನೆಗೆ ನುಗ್ಗಿದ ದರೋಡೆಕೋರರು, ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ 3 ಲಕ್ಷ ರೂ. ಹಣ ದೋಚಿ ಸ್ಥಳದಿಂದ ಕಾಲ್ಕಿತ್ತ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಉರ್ಕಿಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಸಿಎಸ್​ಕೆ ವಿರುದ್ಧ ಸೋಲಿನೆ ಬೆನ್ನಲ್ಲೇ ಗುಜಾರತ್​ಗೆ ಶಾಕ್​; ನಾಯಕನಿಗೆ 12 ಲಕ್ಷ ರೂ. ದಂಡ
ಉರ್ಕೆಹಳ್ಳಿ ಗ್ರಾಮದ ಗಂಗಣ್ಣ (56) ಎಂಬುವರಿಗೆ ಗುಂಡು ತಗುಲಿ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಗಂಗಣ್ಣ ಹಾಗೂ ಅವರ ಕುಟುಂಬ ತೋಟದ ಮನೆಯಲ್ಲಿ ವಾಸವಿದ್ದಾರೆ. ಕುಡಿಯುವ ನೀರು ಕೇಳುವ ನೆಪದಲ್ಲಿ ಏಕಾಏಕಿ ಮನೆಗೆ ನುಗ್ಗಿ, ಹಣ ದೋಚಿರುವ ದರೋಡೆಕೋರರು‌. ಬೈಕ್​ನಲ್ಲಿ ಬಂದಿದ್ದ ಇಬ್ಬರು ಕಳ್ಳರು, ನಿನ್ನೆ ಸಂಜೆ ಕುಡಿಯುವ ನೀರು ಕೇಳುವ ನೆಪದಲ್ಲಿ ಏಕಾಏಕಿ ಮನೆಗೆ ನುಗ್ಗಿದ್ದಾರೆ.
ಕಳ್ಳರು ಅಂತಾ ತಿಳಿದ ಕೂಡಲೇ ಮನೆಯವರು ಕೂಗಾಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಖದೀಮರು, ಗನ್​ ತೋರಿಸಿ ಗುಂಡು‌‌ ಹೊಡೆಯುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ. ಕಡೆಗೆ ಮನೆಯಲ್ಲಿದ್ದ ಹಣ ದೋಚಿ ಓಡಿಹೋಗುವಾಗ ಮನೆಯ ಮಾಲೀಕ ಗಂಗಣ್ಣ ಕಳ್ಳರನ್ನು ಸೆರೆಹಿಡಿಯಲು ಮುಂದಾದಾಗ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ:ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ: ಮಂಡ್ಯ ಪಿಡಬ್ಯ್ಲುಡಿ ಇಂಜಿನಿಯರ್ ಹರ್ಷ ಅಮಾನತು…!
ಈ ವೇಳೆ ಮೂರು ಬಾರಿ ಫೈರಿಂಗ್ ಮಾಡಿದ ಖದೀಮರು. ಎರಡು ಗುಂಡು ಮಿಸ್ ಆಗಿ ಗೋಡೆಗೆ ಬಿದ್ದಿದ್ದು, ಮೂರನೆಯದು ಗಂಗಣ್ಣನ ಕಾಲಿಗೆ ಬಿದಿದ್ದೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಗಂಗಣ್ಣ, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಎಸ್.ಪಿ. ಅಶೋಕ್ ಕೆವಿ, ಹಾಗೂ ಎ.ಎಸ್.ಪಿ. ಮರಿಯಪ್ಪ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
