– ನೋಟು ಬದಲಾವಣೆ ಹೆಸರಲ್ಲಿ ಪಂಗನಾಮಚಿಕ್ಕೋಡಿ:ಐನೂರು ಮುಖ ಬೆಲೆಯ 5 ಲಕ್ಷ ರೂಪಾಯಿ ಹಣವನ್ನು ಕೊಟ್ಟರೇ, 2 ಸಾವಿರ ಮುಖ ಬೆಲೆಯ 6 ಲಕ್ಷ ರೂ. ಹಣವನ್ನು ನಿಮಗೆ ನೀಡುತ್ತೆನೆಂದು ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರನ್ನು ಅರೆಸ್ಟ್​​ ಮಾಡಲಾಗಿದೆ.
ಸಾಗರ ಜಾಧವ್, ಆರೀಫ್ ಸಾಗರ, ಲಕ್ಷ್ಮಣ್ ನಾಯಕ್ ಬಂಧಿತ ಆರೋಪಿಗಳು. ಮಹಾರಾಷ್ಟ್ರ ಮೂಲದವರು ಮೂವರು ಆರೋಪಿಗಳು. ಕಾಗವಾಡ ಠಾಣೆಯ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ.
ನಡೆದಿದ್ದೇನು?:ಐನೂರು ಮುಖ ಬೆಲೆಯ 5 ಲಕ್ಷ ರೂಪಾಯಿ ಹಣವನ್ನು ಕೊಟ್ಟರೇ, 2 ಸಾವಿರ ಮುಖ ಬೆಲೆಯ 6 ಲಕ್ಷ ರೂ. ಹಣವನ್ನು ನಿಮಗೆ ನೀಡುತ್ತೆನೆಂದು ನಕಲಿ ನೋಟು ತೋರಿಸಿ ಜನರನ್ನು ನಂಬಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸಮೀರ್ ಭೋಸಲೇ ಕಡೆಯಿಂದ 500 ಮುಖ ಬೆಲೆಯ 5 ಲಕ್ಷ ಹಣ ಪಡೆದಿದ್ದಾರೆ. ಅಥಣಿ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಸಮೀರನ್ನು ಕರೆಸಿ ಐದು ಲಕ್ಷ ಹಣ ಪಡೆದಿದ್ದಾರೆ. ಹಣ ಪಡೆದು ತಕ್ಷಣ ಪೋಲಿಸರು ಬಂದ್ರು ಎಂದು ಹೇಳಿ ಕೂಡಲೇ ಎಸ್ಕೇಪ್ ಆಗಿದ್ದಾರೆ.
ಕೇಂದ್ರ ಸರ್ಕಾರ ನೋಟು ಬದಲಾವಣೆಗೆ ಅವಕಾಶ ನೀಡಿದ ಬೆನ್ನಲ್ಲೇ ನೋಟು ಬದಲಾವಣೆ ಜಾಲ ತಲೆ ಎತ್ತಿದೆ. ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕಾಗವಾಡ ಠಾಣೆಯ ಪೊಲೀಸರು, ಸಾಗರ ಜಾಧವ್, ಆರೀಫ್ ಸಾಗರ, ಲಕ್ಷ್ಮಣ್ ನಾಯಕ್​​ನನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್​ 11ರಿಂದ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ: ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 3 =
Remember me
